ಡೆಹ್ರಾಡೂನ್: ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 55 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಇಂದು ಯೋಗಸಾನ ಮಾಡಿದ್ರು.
ಈ ಮೊದಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ವಿಶಾಲ ಹಾಗೂ ಸುಂದರ ಮೈದಾನದಲ್ಲಿರುವ ಎಲ್ಲರಿಗೂ ಹಾಗೂ ಎಲ್ಲಾ ಯೋಗ ಪ್ರೇಮಿಗಳಿಗೂ ನಾನು ದೈವ ಭೂಮಿ ಉತ್ತರಾಖಂಡ್ ನಿಂದ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯ ತಿಳಿಸುತ್ತೇನೆ ಅಂದ್ರು.
Advertisement
ತಾಯಿ ಗಂಗಾ ನೆಲೆಸಿರುವ ಈ ಭೂಮಿಯಲ್ಲಿ ಆದಿಶಂಕರಚಾರ್ಯ ಕಾಲಿಟ್ಟಿದ್ದಾರೆ. ಈ ಜಾಗ ವಿವೇಕಾನಂದ ಅವರಿಗೆ ಪ್ರೇರಣೆ ಮಾಡಿತ್ತು. ಅಂತಹ ಭೂಮಿಯಲ್ಲಿ ನಾವು ಈ ರೀತಿ ಸೇರಿರುವುದು ಯಾವುದೇ ಸೌಭಾಗ್ಯಕ್ಕೆ ಕಡಿಮೆ ಇಲ್ಲ. ಉತ್ತರಾಖಂಡ್ ಹಲವಾರು ದಶಕಗಳಿಂದ ಯೋಗದ ಮುಖ್ಯ ಕೇಂದ್ರವಾಗಿದೆ. ಇಲ್ಲಿನ ಪರ್ವತಗಳು ಸ್ವತಃ ಯೋಗ ಹಾಗೂ ಆಯುರ್ವೇದಕ್ಕೆ ಪ್ರೇರಣೆ ನೀಡುತ್ತದೆ. ಸಾಮಾನ್ಯನಾಗಿರುವ ನಾಗರಿಕ ಈ ಭೂಮಿಗೆ ಬಂದಾಗ ಅವರಿಗೆ ಒಂದು ಬೇರೆ ರೀತಿಯ ದಿವ್ಯ ಅನುಭವ ಆಗುತ್ತದೆ ಅಂತ ತಿಳಿಸಿದ್ರು.
Advertisement
Advertisement
ಇದು ನಮ್ಮ ಎಲ್ಲ ಭಾರತೀಯರಿಗೆ ಗೌರವದ ಮಾತು. ಏಕೆಂದರೆ ಸೂರ್ಯ ಹುಟ್ಟುತ್ತಲೇ ತಮ್ಮ ಕಿರಣವನ್ನು ಎಲ್ಲೆಡೆ ಹರಡಿಸಿದ್ದಾನೆ. ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದ ಮೂಲಕ ಸ್ವಾಗತಿಸುತ್ತಿದ್ದಾರೆ. ಡೆಹ್ರಾಡೂನ್‍ನಿಂದ ಡಬ್ಲಿನ್ ವರೆಗೂ, ಶಾಂಘೈಯಿಂದ ಚಿಕಾಗೋವರೆಗೂ ಎಲ್ಲಾ ಕಡೆ ಯೋಗ ಮಾಡುತ್ತಿದ್ದಾರೆ. ಹಿಮಾಲಯದ ಸಾವಿರಾರು ಮೇಲಿರುವ ಪರ್ವತಗಳಲ್ಲಿ ಹಾಗೂ ರಾಜಸ್ಥಾನದಲ್ಲಿರುವ ಮರಳುಗಾಡಿನಲ್ಲಿ ಜನರು ಎಲ್ಲ ಪರಿಸ್ಥಿತಿಯಲ್ಲಿ ತಮ್ಮ ಜೀವನವನ್ನು ಸಮೃದ್ಧಿ ಮಾಡುತ್ತಿದ್ದಾರೆ ಅಂದ್ರು.
Advertisement
ಯುಎಎನ್ ಯೋಗಕ್ಕಾಗಿ ಪ್ರಸ್ತಾವನೆ ನೀಡಿದಾಗ ಎಲ್ಲ ದೇಶದವರು ಈ ಯೋಗಕ್ಕಾಗಿ ಸಹಕಾರ ನೀಡಿದ್ದಾರೆ. ಮೊದಲ ಬಾರಿಗೆ ಕಡಿಮೆ ಸಮಯದಲ್ಲಿ ಯೋಗ ಇಷ್ಟರ ಮಟ್ಟಿಗೆ ಖ್ಯಾತಿಗೊಂಡಿದೆ. ವಿಶ್ವದ ಎಲ್ಲ ಜನರು ಹಾಗೂ ಎಲ್ಲ ದೇಶದವರು ಯೋಗವನ್ನು ತಮ್ಮದೇ ಎಂದುಕೊಳ್ಳುತ್ತಿದ್ದಾರೆ ಅಂತ ಅವರು ನುಡಿದ್ರು.
ಯೋಗದ ಕುರಿತು ಏರುತ್ತಿರುವ ಪ್ರಚಾರದಿಂದ ಭಾರತ ಇನ್ನಷ್ಟು ಪ್ರಸಿದ್ಧಿಗೊಂಡಿದೆ. ಸ್ವಸ್ತ ಹಾಗೂ ಒಳ್ಳೆಯ ಜೀವನಕ್ಕಾಗಿ ಯೋಗ ಸಮಾಜವನ್ನು ಹೆಚ್ಚು ಸಮೃದ್ಧಿಗೊಳಿಸುತ್ತಿದೆ ಎಂದು ಹೇಳುತ್ತಾ ಮತ್ತೊಮ್ಮೆ ಎಲ್ಲರಿಗೂ 4ನೇ ವಿಶ್ವ ಯೋಗ ದಿನಾಚರಣೆಯ ಶುಭಾಶಯವನ್ನು ಮೋದಿ ತಿಳಿಸಿದ್ರು.
ಡೆಹ್ರಾಡೂನ್‍ನಲ್ಲಿ 55 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಪ್ರಧಾನಿ ಮೋದಿ ಯೋಗಾಸನ ಮಾಡಿದ್ರು. ಇದೇ ವೇಳೆ ಪ್ರಧಾನಿಯ ಸಂಪುಟ ಸಚಿವರು ಕೂಡ ಯೋಗದಲ್ಲಿ ಭಾಗಿಯಾಗಿದ್ದರು. ಲಕ್ನೋದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನಾಗ್ಪುರದಲ್ಲಿ ನಿತಿನ್ ಗಡ್ಕರಿ, ಚೆನ್ನೈನಲ್ಲಿ ಸುರೇಶ್ ಪ್ರಭು, ರುದ್ರಪ್ರಯಾಗದಲ್ಲಿ ಉಮಾ ಭಾರತಿ, ಹಜೀಪುರದಲ್ಲಿ ರಾಮ್ ವಿಲಾಸ್ ಪಾಸ್ವಾನ್, ಪಾಟ್ನಾದಲ್ಲಿ ರವಿಶಂಕರ್ ಪ್ರಸಾದ್ ಭಾಗಿಯಾಗಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ಅನಂತ್‍ಕುಮಾರ್, ಶಿಮ್ಲಾದಲ್ಲಿ ಜೆ.ಪಿ ನಡ್ಡಾ, ಗ್ವಾಲಿಯರ್ ನಲ್ಲಿ ನರೇಂದ್ರ ಸಿಂಗ್ ತೋಮರ್, ನೋಯ್ಡಾದಲ್ಲಿ ಪಿಯೂಸ್ ಗೋಯೆಲ್, ಮುಂಬೈನಲ್ಲಿ ಪ್ರಕಾಶ್ ಜಾವ್ಡೇಕರ್ ಯೋಗಾಸನ ಮಾಡಿದ್ದಾರೆ.
ಬ್ರಹ್ಮ ಕುಮಾರಿ ಸಂಸ್ಥೆಯು ದೆಹಲಿ ಕೆಂಪು ಕೋಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಎಸ್‍ಎಫ್, ಸಿಆರ್ ಪಿಎಫ್, ಸಿಐಎಸ್‍ಎಫ್‍ನ ಅರೆಸೇನಾ ತುಕಡಿಯ ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 50 ಸಾವಿರ ಮಂದಿ ಯೋಗದಲ್ಲಿ ಪಾಲ್ಗೊಂಡಿದ್ದಾರೆ.
ಕೇಂದ್ರ ಆಯುಷ್ಯ ಸಚಿವಾಲಯ ಯೋಗ ಲೋಕೇಟರ್ ಎಂಬ ಹೊಸ ಆ್ಯಪ್‍ನ್ನು ಬಿಡುಗಡೆ ಮಾಡಿದೆ. ಯೋಗವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಬಾರದು ಅಲ್ಲದೇ ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದಲ್ಲ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.