ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹೆಸರಿನಲ್ಲಿ ದೋಖಾ ಮಾಡಲು ತಂಡವೊಂದು ಸೈಲೆಂಟಾಗಿ ಸಾಮಾಜಿಕ ಜಾಲತಾಣದಲ್ಲಿ ಎಂಟ್ರಿ ಕೊಟ್ಟಿದೆ.
ಪ್ರಶಾಂತ್ ನೀಲ್ ಹೆಸರಿನಲ್ಲಿ ಇ-ಮೇಲ್ ಐಡಿಯೊಂದು ಕ್ರಿಯೇಟ್ ಆಗಿದೆ. ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಅವಕಾಶ ಇದೆ. ಆಡಿಷನ್ಗೆ ಬನ್ನಿ ಎಂದು ನಕಲಿ ಮೇಲ್ ಮೂಲಕ ಜಾಹೀರಾತು ನೀಡುತ್ತಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.
Advertisement
https://twitter.com/prashanth_neel/status/1190539290008117250
Advertisement
ಈ ಬಗ್ಗೆ ಟ್ವೀಟ್ ಮಾಡಿದ ಪ್ರಶಾಂತ್ ನೀಲ್, “`[email protected]’ ಎಂಬ ನಕಲಿ ಮೇಲ್ ಮೂಲಕ ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದರ ಮೂಲಕ ಕೆಜಿಎಫ್ ಆಡಿಷನ್ ಇದೆ ಎಂದು ಮೇಲ್ ಮಾಡಲಾಗುತ್ತಿದೆ. ದಯವಿಟ್ಟು ಇಂತಹ ಮೇಲ್ ಬಂದರೆ ನಿರ್ಲಕ್ಷಿಸಿ. ಕೆಜಿಎಫ್ ಸಿನಿಮಾಗೆ ಸಂಬಂಧಪಟ್ಟ ಯಾವುದೇ ಆಡಿಷನ್ ಇದ್ದರೂ ಹೊಂಬಾಳೆ ಫಿಲಂಸ್ನ ಅಧಿಕೃತ ಪೇಜಿನಿಂದ ತಿಳಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಸದ್ಯಕ್ಕೆ `ಕೆಜಿಎಫ್ ಚಾಪ್ಟರ್ 2′ ಚಿತ್ರೀಕರಣದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಬ್ಯುಸಿಯಾಗಿದ್ದಾರೆ. ಮೊದಲ ಭಾಗಕ್ಕಿಂತ `ಕೆಜಿಎಫ್-2′ ಸಿನಿಮಾದ ಮೇಲೆ ಪ್ರೇಕ್ಷಕರು ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.