– ಅಳುತ್ತಿದ್ದ ಮಕ್ಕಳನ್ನು ಬಾತ್ ರೂಂನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ
ಬೆಂಗಳೂರು: ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪೋಷಕರು ಬೇಬಿ ಕೇರ್ ಸೆಂಟರ್‌ಗೆ (Baby Care Centre) ಮಕ್ಕಳನ್ನು ಕಳುಹಿಸುತ್ತಾರೆ. ಮಕ್ಕಳನ್ನ ಕೇರ್ ಫುಲ್ ಆಗಿ ನೋಡಿಕೊಳ್ಳಬೇಕಿದ್ದ ಆಯಾಗಳು ಮಕ್ಕಳ ಪಾಲಿಗೆ ರಾಕ್ಷಸರಾಗಿದ್ದಾರೆ. ಬೆಂಗಳೂರಿನ ಬ್ರೂಕ್ ಫೀಲ್ಡ್‌ನಲ್ಲಿರುವ ಬೇಬಿ ಕೇರ್ ಸೆಂಟರ್‌ನಲ್ಲಿ ಮಕ್ಕಳಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿ ವಿಕೃತಿ ಮೆರೆದಿದ್ದಾರೆ. ಪ್ರಪಂಚ ಅರಿಯದ ಮಕ್ಕಳಿಗೆ ಬೇಬಿ ಕೇರ್ ಸೆಂಟರ್ ಸಿಬ್ಬಂದಿ ನೀಡುತ್ತಿದ್ದ ಕಿರುಕುಳದ ಬಗ್ಗೆ ದೂರು ನೀಡಲಾಗಿದೆ.
ಬೇಬಿ ಕೇರ್‌ಗೆ ಬರುತ್ತಿದ್ದ ಮಕ್ಕಳು ಗಲಾಟೆ ಮಾಡುತ್ತಿದ್ದರು, ಅಳುತ್ತಿದ್ದರು ಅನ್ನೋ ಕಾರಣಕ್ಕೆ ಮಕ್ಕಳನ್ನ ನೋಡಿಕೊಳ್ಳುತ್ತಿದ್ದ ಆಯಾಗಳು ಮಕ್ಕಳ ಜೊತೆ ಮೃಗಗಳಾಗಿ ನಡೆದುಕೊಂಡಿದ್ದಾರೆ. ಮಕ್ಕಳಿಗೆ ಹಲ್ಲೆ ಮಾಡಿ ಮಕ್ಕಳ ಬಾಯಿಗೆ ಪೈಪ್‌ಗಳನ್ನ ತುರಕಿ, ಕಮೋಡ್‌ಗಳಲ್ಲಿ ಕೂಡಿ ಹಾಕುವುದು, ಬಾತ್ ರೂಂಗಳಲ್ಲಿ ಕೂಡಿ ಹಾಕಿ ನೀರು ಸುರಿದು ಮಕ್ಕಳಿಗೆ ಭಯಪಡಿಸುವ ಕೆಲಸ ಮಾಡಿದ್ದಾರೆ. ಮಕ್ಕಳಿಗೆ ಆಯಾಗಳು ಹಿಂಸೆ ಕೊಡುತ್ತಿರುವ ಮಾಹಿತಿ ತಿಳಿದ ಪೋಷಕರು ವೀಡಿಯೋ ಮಾಡಿ ಮಕ್ಕಳ ಸಹಾಯವಾಣಿಗೆ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಉಗಾಂಡದಲ್ಲಿ ಕೊಟ್ಟೂರು ಮಹಿಳೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್
ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮಕ್ಕಳ ಮೇಲೆ ಆಯಾಗಳು ಕ್ರೌರ್ಯ ಮೆರೆದಿರುವ ವೀಡಿಯೋ ಪರಿಶೀಲನೆ ಮಾಡಿ ಐವರು ಆಯಾಗಳ ಮೇಲೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೇಬಿ ಕೇರ್ ಸೆಂಟರ್‌ನಲ್ಲಿದ್ದ ಐವರು ಮಹಿಳಾ ಸಿಬ್ಬಂದಿಗಳ ಮೇಲೆ ದೂರು ದಾಖಲಾಗಿದೆ. ಮಂಜುಳ, ವಿಜಯಲಕ್ಷ್ಮೀ, ಭವಾನಿ, ಸಿಂಧು, ಬಿಂದು ಸೇರಿ ಐವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಮಕ್ಕಳ ಸಹಾಯವಾಣಿ ತಿಲಕೇಶ್ ಕುಮಾರ್ ಕೊಟ್ಟ ದೂರಿನ ಆಧಾರದ ಮೇಲೆ ಬಿಎನ್‌ಎಸ್ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಜಯ್ ಸರ್ಕಾರ ಕೆಡವಲು ಶಾಸಕರಿಗೆ 35 ಕೋಟಿ ಆಫರ್? – ಡಿಎಂಕೆ ಯಿಂದ ಆಪರೇಷನ್ ಆರೋಪ
