– ವಕ್ಫ್ ವಿರುದ್ಧ ಮುಂದುವರಿದ ಬಿಜೆಪಿ ರೆಬಲ್ ನಾಯಕರ ಹೋರಾಟ
ಬೆಂಗಳೂರು: ಬಿಜೆಪಿ ಭಿನ್ನಮತೀಯ ನಾಯಕರ ವಕ್ಫ್ ಹೋರಾಟ ಮುಂದುವರಿದಿದೆ. ಬೆಂಗಳೂರಿನ ಕುಮಾರ್ ಬಂಗಾರಪ್ಪ (Kumar Bangarappa) ನಿವಾಸದಲ್ಲಿ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜಿ.ಎಂ ಸಿದ್ದೇಶ್ವರ ಸಭೆ ನಡೆಸಿದ್ದಾರೆ.
ವಕ್ಫ್ ಹೋರಾಟ, ಸಮಾವೇಶ, ದೆಹಲಿ (New Delhi) ಭೇಟಿ ಕುರಿತು ಸಮಾಲೋಚನೆ ಮಾಡಿದ್ದಾರೆ. ಇನ್ನೂ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಹಾಗೂ ಹಜ್ ಇಲಾಖೆಯಲ್ಲಿ ಪೆಟ್ರೋಲ್ ದುರ್ಬಳಕೆ ಆರೋಪ ಕೇಳಿಬಂದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಾಸಕ ಯತ್ನಾಳ್ ಪತ್ರ ಬರೆದಿದ್ದಾರೆ.
Advertisement
Advertisement
ಈ ಇಲಾಖೆಗಳಲ್ಲಿ ಸರ್ಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್‌ಗಳು (Petrol Service Stations) ದೊಡ್ಡ ಭ್ರಷ್ಟಾಚಾರ ಎಸಗಿವೆ. ಪೆಟ್ರೋಲ್ ಬಳಕೆಗೆ ಮಿತಿ ಹಾಗೂ ಮಾರ್ಗಸೂಚಿ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ. ಕಾರಿಗೆ ಪೆಟ್ರೋಲ್ ಹಾಕಿಸುವಾಗ ಸಂಬಂಧಪಟ್ಟ ಇಲಾಖೆಯ ಮೊಹರು, ಮುಖ್ಯಸ್ಥರ ಸಹಿ ಇರಬೇಕು. ಆದರೆ, ವಕ್ಫ್ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್‌ರ ವಾಹನ ಸಂಖ್ಯೆ ಕೆಎ-01 ಜಿಎಸ್ 9990ಗೆ ಇಂಡೆಂಟ್‌ಗಳು ಇಲ್ಲದಿದ್ದರೂ ಪೆಟ್ರೋಲ್ ತುಂಬಿಸಲಾಗಿದೆ.
Advertisement
Advertisement
3 ತಿಂಗಳಿಗೊಮ್ಮೆ ವಾಹನ ಕ್ರಮಿಸಿರುವ ಕಿಲೋಮೀಟರ್, ಉಪಯೋಗಿಸುವ ಇಂಧನ ಆಡಿಟ್ ಮಾಡಬೇಕೆಂದು ಶಾಸಕ ಯತ್ನಾಳ್ ಮನವಿ ಮಾಡಿದ್ದಾರೆ.