ಲಂಡನ್: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಲಂಡನ್ ಹೈಕೋರ್ಟ್ ಆದೇಶ ನೀಡಿದೆ.
ದುಬೈ ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಖ್ ಮಹಮ್ಮದ್ ಬಿನ್ ರಶೀದ್ ಅಲ್-ಮಕ್ತುಮ್ ಅವರು ವಿಚ್ಛೇಧಿತ ಪತ್ನಿ ಹಯಾ ಹಾಗೂ ಇಬ್ಬರು ಮಕ್ಕಳಿಗೆ ಜೀವನಾಂಶವಾಗಿ ಬರೋಬ್ಬರಿ 5,516 ಕೋಟಿ ರೂಪಾಯಿ ( 735 ಮೀಲಿಯನ್ ಡಾಲರ್) ನೀಡುವಂತೆ ಲಂಡನ್ ಹೈಕೋರ್ಟ್ ಆದೇಶ ನೀಡಿದೆ.
Advertisement
Advertisement
ಲಂಡನ್ ಕುಟುಂಬ ನ್ಯಾಯಾಲಯ ವಿಧಿಸಿದ ಅತಿದೊಡ್ಡ ಮೊತ್ತದ ಜೀವನಾಂಶ ಶಿಕ್ಷೆ. ಮಕ್ಕಳು ಅಪ್ರಾಪ್ತರಾಗಿರುವಾಗ ಅವರ ಭದ್ರತಾ ವೆಚ್ಚಗಳನ್ನು ಭರಿಸಲು ವರ್ಷಕ್ಕೆ 11 ಮಿಲಿಯನ್ ಪೌಂಡ್‍ಗಳನ್ನೂ ಇದು ಒಳಗೊಂಡಿದೆ. ಈ ಕುಟುಂಬಕ್ಕೆ ವಿಶಿಷ್ಟವಾದ ಕಠಿಣ ಭದ್ರತೆ ಅಗತ್ಯವಿದೆ. ಬೇರೆ ಯಾರಿಂದಲೂ ಅಲ್ಲ. ಅವರ ತಂದೆ ಶೇಖ್ ಮೊಹಮ್ಮದ್ ಅವರಿಂದಲೇ ಅವರಿಗೆ ಅಪಾಯ ಇದೆ ಎಂದು ನ್ಯಾಯಾಧೀಶ ಫಿಲಿಪ್ ಮೂರ್ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದ ಮಹಿಳಾ ಗಗನಯಾತ್ರಿ ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ
Advertisement
ತನ್ನ ಬಾಡಿಗಾರ್ಡ್‍ನೊಂದಿಗೇ ಸಂಬಂಧ ಹೊಂದಿದ್ದ ರಾಜಕುಮಾರಿ ಹಯಾಜೀ ಜೀವಭಯದ ಕಾರಣ 2019ರಲ್ಲಿ ಹಯಾ ಅವರು ಪತಿಯನ್ನು ತೊರೆದು ಬ್ರಿಟನ್‍ಗೆ ತೆರಳಿದ್ದರು. ಒಂದು ತಿಂಗಳ ಬಳಿಕ ಶೇಖ್ ಮಹಮ್ಮದ್ ಅವರಿಗೆ ವಿಚ್ಛೇದನ ನೀಡಿದ್ದರು. ತನ್ನ ಪತಿಯಿಂದ ಭಯಭೀತಳಾಗಿದ್ದೇನೆ. ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಗಲ್ಫ್ ಎಮಿರೇಟ್‍ಗೆ ಬಲವಂತವಾಗಿ ಹಿಂದಿರುಗಲು ಆದೇಶಿಸಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್ ಉಪಗ್ರಹಗಳು? ದರ ಎಷ್ಟು? ನೆಟ್ ಹೇಗೆ ಸಿಗುತ್ತೆ?
Advertisement
ಶೇಖ್ ಮೊಹಮ್ಮದ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿಯಾಗಿದ್ದು, ಪ್ರಮುಖ ಕುದುರೆ ತಳಿಗಾರ. ಬ್ರಿಟನ್ನಿನ ರಾಣಿ ಎಲಿಜಬೆತ್ ಅವರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.