ಪಾಟ್ನಾ: LPG ಸಿಲಿಂಡರ್ನಲ್ಲಿ ಮದ್ಯ ಸಾಗಿಸುತ್ತಿದ್ದ ಚಾಲಾಕಿಯೊಬ್ಬನನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ.
ಭೂಷಣ್ ರೈ ಬಂಧಿತ ಆರೋಪಿ. ಮದ್ಯ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಂದಘಾಟ್ ಸಮೀಪ ದಾಳಿ ನಡೆಸಿ, ಸಿಲಿಂಡರ್ನಲ್ಲಿದ್ದ 50 ಲೀ. ಮದ್ಯವನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಾಯಿ
ವ್ಯಕ್ತಿಯು ಬಿಹಾರದ ಅಬಕಾರಿ ತಿದ್ದುಪಡಿ-2022ರ ಅಡಿಯಲ್ಲಿ ದಂಡ ಪಾವತಿಸಲು ನಿರಾಕರಿಸಿದ್ದಾನೆ. ಇದರಿಂದಾಗಿ ನಿಯಮ ಉಲ್ಲಂಘಿಸಿದವರಿಗೆ ಒಂದು ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.