ಮಡಿಕೇರಿ: ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿಯನ್ನು ಅಕ್ರಮವಾಗಿ ಓಮ್ನಿ ವ್ಯಾನ್‍ನಲ್ಲಿ ಕಳ್ಳ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಕಳ್ಳರನ್ನು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹಾಗೂ ಸಿದ್ದಾಪುರ ಮಾರ್ಗಮದ್ಯೆ ನಡೆದಿದೆ.
Advertisement
ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಮೂವರು ಆರೋಪಿಗಳಾದ ರಾಮಪ್ಪ, ವಸಂತ್ ಕುಮಾರ್, ಸುರೇಶ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಒಂದು ಪಂಗೋಲಿನ್ (ಚಿಪ್ಪು ಹಂದಿ)ನ್ನು ರಕ್ಷಿಸಿದ್ದಾರೆ. ಅರೋಪಿಗಳು ಬಳಸುತ್ತಿದ್ದ ಮಾರುತಿ ಓಮ್ನಿ ವ್ಯಾನ್ ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ ಟೆಕ್ಕಿ ಸಾವು
Advertisement
ಸೆಪ್ಟೆಂಬರ್ 24ರಂದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಿಂದ ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ನಗರದ ಕಡೆಗೆ ಬೆಳಗಿನ ಜಾವ 10 ಗಂಟೆಗೆ ಬಿಳಿ ಬಣ್ಣದ ಮಾರುತಿ ಓಮ್ನಿಯಲ್ಲಿ ಮೂವರು ಪಂಗೋಲಿನ್(ಚಿಪ್ಪು ಹಂದಿ) ಸಾಗಿಸುತ್ತಿದ್ದರು. ಗೋಣಿ ಚೀಲದ ಒಳಗೆ ಅಳಿವಿನಂಚಿನಲ್ಲಿರುವ ಒಂದು ಚಿಪ್ಪು ಹಂದಿಯನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುತ್ತಿರುವ ಕುರಿತು ಪೊಲಿಸರಿಗೆ ಮಾಹಿತಿ ಸಿಕ್ಕಿದೆ.
Advertisement
ಈ ಹಿನ್ನೆಲೆಯಲ್ಲಿ ತಮಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.