ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅ.19ರಂದು ಭಾರತ- ಬಾಂಗ್ಲಾದೇಶ (Bangladesh) ತಂಡದೊಂದಿಗೆ ಸೆಣಸಾಡಲಿದೆ. ಹೀಗಿರುವಾಗ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ (Sehar Shinwari) ಅವರು ಭಾರತವನ್ನು ಸೋಲಿಸಿದರೆ ನಿಮ್ಮೊಂದಿಗೆ ಡೇಟ್ಗೆ ಬರುತ್ತೇನೆ ಎಂದು ಬಾಂಗ್ಲಾ ಕ್ರಿಕೆಟಿಗರಿಗೆ ಡೇಟಿಂಗ್ ಆಫರ್ ನೀಡಿದ್ದಾರೆ. ಈ ಕುರಿತ ಪೋಸ್ಟೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
- Advertisement 2
ನನ್ನ ಬಂಗಾಳಿ ಸಹೋದರರು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುತ್ತಾರೆ. ಅವರ ತಂಡ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ನಾನು ಢಾಕಾಕ್ಕೆ ಹೋಗಿ ಬಾಂಗ್ಲಾ ಹುಡುಗನೊಂದಿಗೆ ಫಿಶ್ ಡಿನ್ನರ್ ಡೇಟ್ ಮಾಡುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ:‘ಸೀತಾರಾಮಂ’ ನಟಿ ಲಿಪ್ಲಾಕ್ ಮಾಡಿದ್ದಕ್ಕೆ ಫ್ಯಾನ್ಸ್ ಅಸಮಾಧಾನ
- Advertisement 3
InshAllah my Bangali Bandu will avenge us in the next match. I will go to dhaka and have a fish dinner date with Bangali boy if their team managed to beat India ✌️❤️ ????????
— Sehar Shinwari (@SeharShinwari) October 15, 2023
- Advertisement 4
ಸೆಹರ್ ಶಿನ್ವಾರಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್ ನಟಿ ಬೆಂಬಲಿಸಿದ್ದಾರೆ.
ಅ.19ರಂದು ಪುಣೆಯಲ್ಲಿ ಭಾರತ- ಬಾಂಗ್ಲಾದೇಶ ನಡುವಿನ ಪಂದ್ಯ ನಡೆಯಲಿದೆ. ಭಾರತ ತಂಡ ಆಡಿದ 3 ಪಂದ್ಯಗಳನ್ನು ಗೆದ್ದಿದೆ. ಇದೀಗ ಭಾರತಕ್ಕೆ ಸೆಮಿಫೈನಲ್ ಹಾದಿ ಸುಲಭವಾಗುತ್ತಿದೆ. ಬಾಂಗ್ಲಾದೇಶದ ವಿರುದ್ಧವೂ ಭಾರತ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ಹಾದಿ ತೆರೆದುಕೊಳ್ಳಲಿದೆ.