– ಪಾಕಿಸ್ತಾನಕ್ಕೆ ವಿದೇಶದಿಂದ ಉಪಗ್ರಹ ಆಧಾರಿತ ನೆರವು ಕೂಡ ದೊರೆತಿರಬಹುದು
ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯನ್ನ ಪತ್ತೆಹಚ್ಚಲು ಹರಸಾಹಸಪಟ್ಟಿತ್ತು. ಗೂಢಚಾರರನ್ನ ನಿಯೋಜಿಸಿತ್ತು, ಭಾರತದಲ್ಲಿದ್ದ ಸ್ಲೀಪರ್ ಸೆಲ್‌ಗಳನ್ನ ಸಕ್ರಿಯಗೊಳಿಸಿತ್ತು ಎಂದು ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ (Air Marshal Jeetendra Mishra) ಬಹಿರಂಗಪಡಿಸಿದ್ದಾರೆ.
ಆಪರೇಷನ್ ಸಿಂಧೂರ ವೇಳೆ ಪಶ್ಚಿಮ ವಾಯು ಕಮಾಂಡ್‌ನ ಮುಖ್ಯಸ್ಥರಾಗಿದ್ದ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ.

ಆಪರೇಷನ್ ಸಿಂಧೂರ ವೇಳೆ ಭಾರತದ ವಾಯು ರಕ್ಷಣೆಯಲ್ಲಿ S-400 (S-400) ಪ್ರಮುಖ ಪಾತ್ರ ವಹಿಸಿತ್ತು. ಪಾಕಿಸ್ತಾನದಿಂದ ಎದುರಾದ ವೈಮಾನಿಕ ಬೆದರಿಕೆಗಳನ್ನ ತಡೆಯುವಲ್ಲಿ ಈ ರಷ್ಯಾ ಮೂಲದ ವ್ಯವಸ್ಥೆ ನಿರ್ಣಾಯಕವಾಗಿತ್ತು. ಹಾಗಾಗಿ S-400 ವಾಯುರಕ್ಷಣಾ ವ್ಯವಸ್ಥೆಗಳನ್ನ ಎಲ್ಲಿ ನಿಯೋಜಿಸಲಾಗಿದೆ? ಎಂದು ನಿಖರ ಸ್ಥಳ ತಿಳಿದುಕೊಳ್ಳಲು ಪಾಕಿಸ್ತಾನ (Pakistan) ‘ಪುಸ್ತಕದಲ್ಲಿರುವ ಪ್ರತಿಯೊಂದು ತಂತ್ರವನ್ನೂ’ ಪ್ರಯೋಗಿಸಿತ್ತು ಎಂದು ಹೇಳಿದ್ದಾರೆ.
S-400 ಪತ್ತೆಗೆ ಪಾಕ್‌ನಿಂದ ಗೂಢಚಾರರ ಜಾಲ?
S-400 ಅನ್ನು ಪಾಕಿಸ್ತಾನ ತನ್ನ ಪಾಲಿನ ಅತ್ಯಂತ ದೊಡ್ಡ ಬೆದರಿಕೆಯಾಗಿ ಪರಿಗಣಿಸಿತ್ತು. ಇದರಿಂದಾಗಿಯೇ ಬಲದಿಂದಾಗಿ ಪಾಕಿಸ್ತಾನಿ ಯುದ್ಧ ವಿಮಾನಗಳು ಭಾರತೀಯ ಗಡಿಯ 200 ಕಿಲೋಮೀಟರ್ ವ್ಯಾಪ್ತಿಯ ಸಮೀಪಕ್ಕೂ ಬರಲು ಸಾಧ್ಯವಾಗಲಿಲ್ಲ. ಪಾಕ್ ಯುದ್ಧವಿಮಾನಗಳನ್ನ ಗಡಿಯಲ್ಲಿಯೇ ಹೊಡೆದುರುಳಿಸಲಾಗಿತ್ತು. ಇದರಿಂದ ಕಂಗಾಲಾಗಿದ್ದ ಪಾಕಿಸ್ತಾನ ಎಸ್-400 ನಿಯೋಜನಾ ಸ್ಥಳ ಪತ್ತೆಹಚ್ಚಲು ತೀವ್ರ ಎಲ್ಲಿಲ್ಲದ ಪ್ರಯತ್ನ ನಡೆಸಿತ್ತು. S-400 ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಿರುವ ಪ್ರತಿಯೊಂದು ತಂತ್ರವನ್ನೂ ಬಳಸಿತ್ತು ಎಂದು ಏರ್ ಮಾರ್ಷಲ್ ಮಿಶ್ರಾ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಮತ್ತೊಂದು ದೇಶದಿಂದ ಉಪಗ್ರಹ ಆಧಾರಿತ ನೆರವು ಕೂಡ ದೊರೆತಿರಬಹುದು ಎಂದು ಅವರು ಹೇಳಿದ್ದಾರೆ. ಆದರೆ ಆ ದೇಶದ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
S-400 ‘ಗೇಮ್ ಚೇಂಜರ್’
ಭಾರತದಲ್ಲಿ ‘ಸುದರ್ಶನ ಚಕ್ರ’ ಎಂದು ಕರೆಯಲಾಗುವ S-400 ವಾಯು ರಕ್ಷಣಾ ವ್ಯವಸ್ಥೆ, ದೇಶದ ಬಹುಪದರ ವಾಯು ರಕ್ಷಣಾ ಜಾಲದ ಅತ್ಯಂತ ಪ್ರಮುಖ ಘಟಕವಾಗಿದೆ. ಅತ್ಯಾಧುನಿಕ ರೆಡಾರ್‌ಗಳು ಹಾಗೂ ದೂರದ ಗುರಿಗಳನ್ನು ಪತ್ತೆಹಚ್ಚಿ ಉಡಾಯಿಸುವ ಸಾಮರ್ಥ್ಯ ಹೊಂದಿರುವ S-400, ಒಂದೇ ಸಮಯದಲ್ಲಿ ಹಲವು ವೈಮಾನಿಕ ಗುರಿಗಳನ್ನ ಟ್ರ್ಯಾಕ್ ಮಾಡಿ ಅವುಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.
ಭಾರತ ಮತ್ತು ರಷ್ಯಾ 2018ರಲ್ಲಿ 5 S-400 ವ್ಯವಸ್ಥೆಗಳಿಗಾಗಿ ಒಪ್ಪಂದ ಮಾಡಿಕೊಂಡಿದ್ದವು. ಈ ಪೈಕಿ ಮೂರು ವ್ಯವಸ್ಥೆಗಳು ಈಗಾಗಲೇ ಭಾರತಕ್ಕೆ ತಲುಪಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿವೆ. 4ನೇ ಸ್ಕ್ವಾಡ್ರನ್ ಜೂನ್ 2026ರಲ್ಲಿ ಭಾರತಕ್ಕೆ ದೊರೆತಿದೆ.
