InternationalLatestMain Post

PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ – ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

– ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ
– ಬರಿದಾಗುತ್ತಿದೆ ತೈಲ ದಾಸ್ತಾನು
– ಕತ್ತಲಲ್ಲಿ ಮುಳುಗಿದ ಪಾಕಿಸ್ತಾನದ ನಗರಗಳು

ರ್ಥಿಕ ಬಿಕ್ಕಟ್ಟಿನಿಂದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಜನರು ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ. ತುತ್ತಿನ ಚೀಲ ತುಂಬಿಸಲು ಆಹಾರ ಪದಾರ್ಥಕ್ಕಾಗಿ ಜನ ಪರದಾಡುವಂತಹ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮನಕಲಕುವಂತಿದೆ. ಗೋಧಿ ಹಿಟ್ಟಿನ (Wheat Flour) ಮೂಟೆಗಾಗಿ ಟ್ರಕ್‌ ಹಿಂದೆ ಜನ ಓಡುತ್ತಿರುವುದು, ಮನೆಯಲ್ಲಿ ಆಹಾರವಿಲ್ಲದೇ ಖಾಲಿ ಡಬ್ಬಿಗಳನ್ನು ತೋರಿಸಿ ಗೋಳಾಡುತ್ತಿರುವುದು, ಆಹಾರ ಪದಾರ್ಥ ವಿತರಣೆ ವೇಳೆ ಕಾಲ್ತುಳಿತ, ಆಹಾರಕ್ಕಾಗಿ ಹೊಡೆದಾಟ.. ಮೊದಲಾದ ದೃಶ್ಯಗಳು ದೇಶದಲ್ಲಿ ತಲೆದೋರಿರುವ ಆಹಾರ ಬಿಕ್ಕಟ್ಟನ್ನು ಪ್ರತಿಬಿಂಬಿಸುವಂತಿವೆ.

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು, (Pakistan Economic Crisis) ಹಣದುಬ್ಬರ ಉಂಟಾಗಿದೆ. ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಶ್ರೀಲಂಕಾ ಅನುಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಪಾಕಿಸ್ತಾನಕ್ಕೂ (Pakistan Crisis) ಎದುರಾಗಿದೆ. ವಿದೇಶಗಳಿಂದ ವಸ್ತು, ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಡಾಲರ್‌ ಕೊರತೆಯೂ ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಿದೆ. ಆಹಾರ ಬಿಕ್ಕಟ್ಟು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ ವಿರುದ್ಧ ಜನ ಧಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗೋಧಿ ಹಿಟ್ಟಿನ ಬೆಲೆ ಗಗನಕ್ಕೆ: ತಜ್ಞರ ಪ್ರಕಾರ, ಬೇರೆ ಬೇರೆ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ಗೋಧಿ ಬೆಲೆ ಹೆಚ್ಚಿದೆ. ಕೇಂದ್ರ ಹಾಗೂ ಪ್ರಾಂತೀಯ ಸರ್ಕಾರಗಳ ಬಿಕ್ಕಟ್ಟಿಗೆ ಮೊದಲ ಕಾರಣವಾಗಿವೆ. ರಷ್ಯಾ ಮತ್ತು ಉಕ್ರೇನ್ ಯುದ್ಧ, 2022ರಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಪ್ರವಾಹ ಹಾಗೂ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಕಳ್ಳಸಾಗಣೆ ಮಾಡುತ್ತಿರುವುದರಿಂದ ಗೋಧಿ ಪೂರೈಕೆ ಮಾಡುವಲ್ಲಿ ಕೊರತೆ ಉಂಟಾಗಿದೆ.

ಬಿಕ್ಕಟ್ಟಿಗೆ ಕಾರಣವೇನು?: ಪಾಕಿಸ್ತಾನವು ತನ್ನ ಬಳಕೆಯ ಅಗತ್ಯಗಳನ್ನು ಪೂರೈಸಲು ಗೋಧಿ ಆಮದು ಮಾಡಿಕೊಳ್ಳುತ್ತಿದೆ. ಅದರಲ್ಲೂ ಹೆಚ್ಚಿನ ಪ್ರಮಾಣದ ಗೋಧಿಯು ರಷ್ಯಾ ಹಾಗೂ ಉಕ್ರೇನ್‌ನಿಂದ ಬರುತ್ತಿತ್ತು. ಉದಾಹರಣೆಗೆ, 2020ರಲ್ಲಿ, ಪಾಕಿಸ್ತಾನವು 1.01 ಶತಕೋಟಿ ಡಾಲರ್ ಮೌಲ್ಯದ ಗೋಧಿಯನ್ನು ಆಮದು ಮಾಡಿಕೊಂಡಿತ್ತು. ಅದರಲ್ಲಿ ಹೆಚ್ಚಿನದ್ದು ಉಕ್ರೇನ್‌ನಿಂದ ಬಂದಿತ್ತು. ಉಳಿದದ್ದು ರಷ್ಯಾ (394 ಮಿಲಿಯನ್ ಡಾಲರ್)ದಿಂದ ಆಮದಾಗಿತ್ತು. ಆದರೆ ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದಾಗಿ ಗೋಧಿಯನ್ನು ಆಮದು ಮಾಡಿಕೊಳ್ಳಲು ಅಡ್ಡಿಯಾಗಿದೆ. ಅಷ್ಟೇ ಅಲ್ಲದೆ ಕಳೆದ ವರ್ಷದ ಪ್ರವಾಹದಿಂದಾಗಿ ದೇಶೀಯ ಇಳುವರಿಯಲ್ಲೂ ಕಡಿಮೆಯಾಗಿದೆ. ಇದೆಲ್ಲದರಿಂದಾಗಿ ಪಾಕಿಸ್ತಾನದಲ್ಲಿ ಅಸಮರ್ಪಕ ದಾಸ್ತಾನಿಂದ ವಿತರಣೆಯ ಸಮಸ್ಯೆ ಉದ್ಭವಿಸಿದೆ.

ಗೋಧಿ ಹೆಚ್ಚು ಬೆಳೆಯೋ ರಾಜ್ಯದಲ್ಲೇ ಬೆಲೆ ಜಾಸ್ತಿ: ಪಾಕಿಸ್ತಾನದಲ್ಲಿ ಪಂಜಾಬ್ ಹಾಗೂ ಸಿಂಧ್ ರಾಜ್ಯಗಳಲ್ಲಿ ಪ್ರಮುಖವಾಗಿ ಗೋಧಿಯನ್ನು ಬೆಳೆಯುತ್ತಾರೆ. ಆದರೆ ಇಲ್ಲೇ ಗೋಧಿ ಹಿಟ್ಟು 1 ಕೆ.ಜಿಗೆ 145 ಯಿಂದ 160 ಪಾಕಿಸ್ತಾನಿ ರೂ.ಗೆ ಮಾರಾಟವಾಗುತ್ತಿದೆ. ಅದೇ ರೀತಿ ಖೈಬರ್ ಪಖ್ತುಂಕ್ವಾ ಹಾಗೂ ಬಲೂಚಿಸ್ತಾನಗಳಲ್ಲಿ ಗೋಧಿ ಬೆಲೆ ಇನ್ನೂ ಅಧಿಕವಾಗಿದೆ. ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ 5 ರಿಂದ 10 ಕೆ.ಜಿ ಗೋಧಿ ಹಿಟ್ಟಿನ ಬೆಲೆಯು ಒಂದು ವರ್ಷದ ಹಿಂದೆ ಇದ್ದ ಬೆಲೆಗಿಂತಲೂ ದ್ವಿಗುಣಗೊಂಡಿದೆ.

PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

ವಿದೇಶಗಳಿಂದ ನೆರವು ನಿರಾಕರಣೆ: ಏರುತ್ತಿರುವ ಆಹಾರ ಬೆಲೆಗಳಿಂದಾಗಿ ಪಾಕಿಸ್ತಾನದ ಹಣದುಬ್ಬರವು ಕಳೆದ ತಿಂಗಳು ಶೇ.24.5 ರಷ್ಟು ಹೆಚ್ಚಾಗಿದೆ. ಹಣದುಬ್ಬರ ಮತ್ತು ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಸಂಗ್ರಹದಿಂದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಂತಹ ಸಂಸ್ಥೆಗಳು ಹಣಕಾಸಿನ ನೆರವು ನೀಡಲು ನಿರಾಕರಿಸಿವೆ. ಇದರಿಂದಾಗಿ ಪಾಕಿಸ್ತಾನದ ಆರ್ಥಿಕತೆಯು ತೀವ್ರ ಸಂಕಷ್ಟದಲ್ಲಿದೆ. ಪಾಕಿಸ್ತಾನದಲ್ಲಿ ಹೆಚ್ಚಿನ ಜನರು ಗೋಧಿ ಹಿಟ್ಟು ಬಳಸುತ್ತಾರೆ. ಪಾಕಿಸ್ತಾನ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ಪ್ರಕಾರ, ಗೋಧಿ ಹಿಟ್ಟಿನ ಬೆಲೆ ಕೆಲವೇ ದಿನಗಳಲ್ಲಿ 41 ಪ್ರತಿಶತದಿಂದ 57 ಪ್ರತಿಶತಕ್ಕೆ ಏರಿದೆ.

PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

ಬಾಸುಮತಿ ಅಕ್ಕಿಗೆ ಬೇಡಿಕೆ: ಅಕ್ಕಿ ಪಾಕಿಸ್ತಾನದ ಪ್ರಮುಖ ರಫ್ತುಗಳಲ್ಲಿ ಒಂದಾಗಿದೆ. ಬಾಸುಮತಿ ಅಕ್ಕಿಯನ್ನು ಪಾಕಿಸ್ತಾನ ಜಗತ್ತಿನಾದ್ಯಂತ ರಫ್ತು ಮಾಡುತ್ತಿದೆ. ಆದರೆ ಈ ವರ್ಷ ಗೋಧಿ ಹಿಟ್ಟಿನ ಕೊರತೆಯಿಂದ ಬಾಸುಮತಿ ಅಕ್ಕಿಗೆ ಬೇಡಿಕೆ ಹೆಚ್ಚಿದೆ.

ಶ್ರೀಲಂಕಾದ ಪರಿಸ್ಥಿತಿಯತ್ತ ಪಾಕ್: ಪಾಕಿಸ್ತಾನವು ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಾಕಿಸ್ತಾನದ ಪರಿಸ್ಥಿತಿ ಶ್ರೀಲಂಕಾದಂತೆ ಆಗುವ ಸಾಧ್ಯತೆಗಳು ದಟ್ಟವಾಗಿದೆ. ಬಹುತೇಕ ದಿವಾಳಿಯ ಅಂಚಿನಲ್ಲಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಭಯೋತ್ಪಾದನೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದಲ್ಲಿ ರಾಜಕೀಯ ಕ್ರಾಂತಿ ಶುರುವಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ರಾಜಕೀಯ ಕ್ರಾಂತಿಗೆ ಸನ್ನಿಹಿತವಾಗಿದೆ. ಇತ್ತೀಚಿಗೆ ಸಂಭವಿಸಿದ ನೆರೆಯಿಂದಾಗಿ ಪ್ರವಾಹಪೀಡಿತ ಪ್ರದೇಶಗಳು ಅಭಿವೃದ್ಧಿಯಲ್ಲಿ ಮತ್ತೆ 2 ದಶಕಗಳಷ್ಟು ಹಿಂದಕ್ಕೆ ಚಲಿಸಿವೆ. ಇಲ್ಲಿನ ಜನರು ಮತ್ತಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನೂ ಓದಿ: EXPLAINED: 60 ವರ್ಷಗಳಲ್ಲೇ ಮೊದಲ ಬಾರಿಗೆ ಕುಸಿದ ಚೀನಾ ಜನಸಂಖ್ಯೆ – ಇದು ಹೇಗಾಯ್ತು ಗೊತ್ತಾ?

PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

ಬರಿದಾಗುತ್ತಿದೆ ತೈಲ ದಾಸ್ತಾನು: 
ಡಾಲರ್ ವಿನಿಮಯದಲ್ಲಿನ ಸಮಸ್ಯೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಮೇಲೆ ಹೇರಿದ ನಿರ್ಬಂಧಗಳಿಂದಾಗಿ ಇತರ ವಲಯಗಳಂತೆ ತೈಲ ಉದ್ಯಮವು ಸಾಲಪತ್ರ ಪಡೆಯುವಲ್ಲಿ ಸಮಸ್ಯೆ ಅನುಭವಿಸುತ್ತಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನ್ ಸ್ಟೇಟ್ ಆಯಿಲ್ (ಪಿಎಸ್‌ಒ)ನ ಒಂದು ತೈಲ ಹಡಗು ಮಾಡಿಕೊಂಡಿದ್ದ ಒಪ್ಪಂದ ಈಗಾಗಲೇ ರದ್ದುಗೊಂಡಿದೆ. ಜ.23ರಂದು ಲೋಡ್ ಆಗಲು ನಿಗದಿಯಾಗಿದ್ದ ಮತ್ತೊಂದು ಹಡಗಿಗೂ ಸಾಲಪತ್ರ ಇನ್ನೂ ಖಚಿತವಾಗಿಲ್ಲ. ಇದನ್ನೂ ಓದಿ: ಕಗ್ಗತ್ತಲಲ್ಲಿ ಪಾಕಿಸ್ತಾನ, ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ- ಲಕ್ಷಾಂತರ ಜನರಿಗೆ ತೊಂದರೆ

PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

ಕತ್ತಲಲ್ಲಿ ಮುಳುಗಿದ ದೇಶ: ಆರ್ಥಿಕ, ಆಹಾರ ಬಿಕ್ಕಟ್ಟಿನಲ್ಲಿ ಮುಳುಗಿರುವ ಪಾಕ್‌ನಲ್ಲಿ ವಿದ್ಯುತ್‌ ಸಮಸ್ಯೆಯೂ (Pakistan Power Crisis) ಎದುರಾಗಿದೆ. ರಾಷ್ಟ್ರೀಯ ವಿದ್ಯುತ್‌ ಗ್ರಿಡ್‌ನಲ್ಲಿ ವೈಫಲ್ಯ ಕರೆಂಟ್‌ ಇಲ್ಲದೇ ದೇಶ ಕತ್ತಲಲ್ಲಿ ಮುಳುಗಿತ್ತು. ಕರಾಚಿ, ಲಾಹೋರ್‌, ಪೇಶಾವರ್‌ ಸೇರಿದಂತೆ ಪ್ರಮುಖ ನಗರಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button