ಯಾದಗಿರಿ: ಕೊರೊನಾ, ಕಳ್ಳಾಟ, ಪ್ರವಾಹ, ಅಕಾಲಿಕ ಮಳೆ ಹೀಗೆ ಒಂದಲ್ಲ ಒಂದು ಅಡೆತಡೆಯ ಪರಿಸ್ಥಿತಿಯಲ್ಲಿ, ಭತ್ತ ನಾಟಿ ಮಾಡಿ ಸದ್ಯ ಕಟಾವು ಮಾಡಿರುವ ರೈತರಿಗೆ ಸರ್ಕಾರ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದೆ. ಸಕಾಲಕ್ಕೆ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸದೆ. ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ, ರೈತರಿಗೆ ಶಾಪವಾಗಿ ಪರಿಗಣಿಸಿದೆ.
Advertisement
ಅನ್ನದಾತರ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ದಲ್ಲಾಳಿಗಳು, ಅತೀ ಕಡಿಮೆ ದರಕ್ಕೆ ಭತ್ತ ಖರೀದಿ ಮಾಡುತ್ತಿದ್ದಾರೆ. ಕನಿಷ್ಠ ಬೆಲೆ ಯೋಜನೆಯಡಿ ಜಿಲ್ಲಾಡಳಿತ ಈಗಾಗಲೇ 10 ಕಡೆ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುವ ಭರವಸೆ ನೀಡಿದೆ. ಆದರೆ ಈ ಭರವಸೆ ಇನ್ನೂ ಭರವಸೆಯಾಗಿದ್ದು, ಯಾವುದೇ ಖರೀದಿ ಕೇಂದ್ರಗಳು ಅಧಿಕೃತವಾಗಿ ಆರಂಭಗೊಂಡಿಲ್ಲ. ಬರೀ ನೋಂದಣಿಗಷ್ಟೇ ಸೀಮಿತವಾಗಿವೆ. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ
Advertisement
Advertisement
ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಸಾಮಾನ್ಯ ಭತ್ತಕ್ಕೆ 1,940 ರೂ. ಹಾಗೂ ಎ ಗ್ರೇಡ್ ಭತ್ತಕ್ಕೆ 1,960 ಪ್ರತಿ ಕ್ವಿಂಟಾಲ್ ನಿಗದಿ ಮಾಡಿದೆ. ಆದರೆ, ಭತ್ತ ಖರೀದಿ ಕೇಂದ್ರ ಆರಂಭ ಮಾಡಿದೆ, ಇನ್ನೂ ಹೆಸರು ನೋಂದಣಿಯಲ್ಲೇ ಅಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ. ಒಂದು ಕಡೆ ಭತ್ತವನ್ನು ಸಂಗ್ರಹಿಸಲು ಸರಿಯಾದ ಸ್ಥಳವಿಲ್ಲದೆ ಮತ್ತೊಂದು ಕಡೆ ಕೈಯಲ್ಲಿ ಹಣವಿಲ್ಲದೆ. ರೈತರು ದಲ್ಲಾಳಿಗಳ ಮೋರೆ ಹೋಗುತ್ತಿದ್ದು, ರೈತರ ಅಸಹಾಯಕ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡಿರುವ ದಲ್ಲಾಳಿಗಳು ಪ್ರತಿ ಕ್ವಿಂಟಾಲ್ ಭತ್ತಕ್ಕೆ 1,300 ರಿಂದ 1,400 ರೂ ವರಗೆ ದರ ನಿಗದಿ ಮಾಡಿ ಭತ್ತ ಖರೀದಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ: ಹಂಸಲೇಖ
Advertisement