DistrictsKarnatakaLatestMain PostYadgir

ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ

Advertisements

ಯಾದಗಿರಿ: ತನ್ನ ತಂದೆಗೆ ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿಯೊಬ್ಬಳು ದಿಢೀರ್ ಕಾಣೆಯಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.

POLICE JEEP

ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಚಾಮನಾಳ ಮಡ್ಡಿ ತಾಂಡದ ಸ್ನೇಹಲ್(19) ಕಾಣೆಯಾದ ಯುವತಿ. ಸ್ನೇಹಲ್ ಯಾದಗಿರಿ ನಗರದ ನಿವೇದಿತಾ ಕಾಲೇಜಿನಲ್ಲಿ ಮೊದಲನೇ ವರ್ಷದ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದಳು. ನಗರದ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ಹಾಸ್ಟಲ್‍ನಲ್ಲಿ ಇದ್ದ ಸ್ನೇಹಲ್ ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ನವೆಂಬರ್ 29 ರಂದು ಸ್ನೇಹಲ್ ತಂದೆ ಆಸ್ಪತ್ರೆಗೆ ತೋರಿಸಲು, ಆಕೆಯನ್ನು ಹಾಸ್ಟೆಲ್ ನಿಂದ ಆಸ್ಪತ್ರೆಯತ್ತ ಕರೆದುಕೊಂಡು ಹೋಗುತ್ತಿದ್ದರು. ತಂದೆ ಜೊತೆಗೆ ಸ್ವಲ್ಪ ದೂರ ನಡೆದ ಸ್ನೇಹಲ್, ಇದ್ದಕ್ಕಿದ್ದಂತೆ ಆಸ್ಪತ್ರೆಗೆ ಬೇಡ, ನನಗೆ ಅಜ್ಜಿ ತಾತನ ನೆನಪು ಆಗುತ್ತಿದೆ ನಾನು ಊರಿಗೆ ಬರುತ್ತೇನೆ ಹಾಸ್ಟೆಲ್ ಹೋಗಿ ಬ್ಯಾಗ್ ತರುತ್ತೇನೆ ಎಂದು ತಂದೆಯನ್ನು ದಾರಿಯಲ್ಲೇ ನಿಲ್ಲಿಸಿ ಹಾಸ್ಟೆಲ್‍ಗೆ ತೆರಳಿದ್ದಾಳೆ. ಇದನ್ನೂ ಓದಿ: ಪ್ರೀತಿ ಮಾಡುತ್ತಿದ್ದ ಜೋಡಿಗೆ ಮದುವೆ ಮಾಡಿಸಿದಕ್ಕೆ ಸ್ನೇಹಿತನನ್ನೇ ಕೊಂದ್ರು

ಹಾಸ್ಟೆಲ್‍ಗೆ ತೆರಳಿದ ಸ್ನೇಹಲ್ ಹಲವಾರು ಗಂಟೆ ಕಳೆದರು ಬಾರದ ಹಿನ್ನೆಲೆ, ಆಕೆಯ ತಂದೆ ಹಾಸ್ಟೆಲ್ ತೆರಳಿ ವಿಚಾರಿಸಿದಾಗ ಮಗಳು ಬ್ಯಾಗ್ ತೆಗೆದುಕೊಂಡು ಹೋಗಿರುವುದಾಗಿ ಹಾಸ್ಟೆಲ್ ವಾರ್ಡ್‍ನ ಹೇಳಿದ್ದಾರೆ. ಇದರಿಂದಾಗಿ ಗಾಬರಿಯಾದ ಸ್ನೇಹಲ್ ತಂದೆ ಮನೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಮನೆಗೂ ಸಹ ಸ್ನೇಹಲ್ ತೆರಳದೆ ಇರುವ ವಿಚಾರ ತಿಳಿದಿದೆ. ಈ ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಶಂಕೆ- ಮಗ ಸಾವು

Leave a Reply

Your email address will not be published.

Back to top button