ರೋಮ್: ಆಸ್ಕರ್ ಪ್ರಶಸ್ತಿ ವಿಜೇತ ಕೆನಡಾದ ನಿರ್ದೇಶಕ ಪಾಲ್ ಹ್ಯಾಗಿಸ್ ಅವರು ದಕ್ಷಿಣ ಇಟಲಿಯಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಕೆನಡಾ ಮೂಲದ ಹ್ಯಾಗಿಸ್(69) ಅವರು ಓಸ್ಟುನಿಯಲ್ಲಿ ಮಂಗಳವಾರ ಪ್ರಾರಂಭವಾಗುವ ಚಲನಚಿತ್ರೋತ್ಸವಕ್ಕಾಗಿ ಇಟಲಿಯಲ್ಲಿದ್ದಾರೆ. ಈ ವೇಳೆ ಯುವ ವಿದೇಶಿ ಮಹಿಳೆಯೊಬ್ಬಳು ಎರಡು ದಿನಗಳಿಂದ ನನಗೆ ಹ್ಯಾಗಿಸ್ ಅವರು ಲೈಂಗಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಆದರೆ ಹ್ಯಾಗಿಸ್ ಅವರ ಮೇಲೆ ದೂರು ಕೊಟ್ಟ ಮಹಿಳೆ ತನ್ನ ರಾಷ್ಟ್ರೀಯತೆ ಮತ್ತು ವಯಸ್ಸನ್ನು ಉಲ್ಲೇಖಿಸಿಲ್ಲ. ಇದನ್ನೂ ಓದಿ: ಕಾಬೂಲ್ ಗುರುದ್ವಾರ ದಾಳಿ: 3 ಗಂಟೆಗಳ ಕಾಲ ದೇವಾಲಯ ರಕ್ಷಿಸಲು ಹೋರಾಡಿದ ತಾಲಿಬಾನ್
- Advertisement 2
- Advertisement 3
ಮಹಿಳೆ ದೂರಿನ ಆಧಾರದ ಮೇಲೆ ಇಟಲಿ ಪೊಲೀಸರು ಹ್ಯಾಗಿಸ್ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬೃಂಡಿಸಿ ಪ್ರಾಸಿಕ್ಯೂಟರ್ ಕಚೇರಿ ಭಾನುವಾರ ಮುಚ್ಚಲಾಗಿತ್ತು. ಈ ಹಿನ್ನೆಲೆ ಹ್ಯಾಗಿಸ್ ಅವರನ್ನು ಇಂದು ಕಛೇರಿಗೆ ಕರೆದುಕೊಂಡು ಹೋಗಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- Advertisement 4
ಹ್ಯಾಗಿಸ್ ಹಿರಿಯ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಅವರು 2006 ರಲ್ಲಿ ‘ಕ್ರ್ಯಾಶ್’ ಸಿನಿಮಾಗಾಗಿ ಅತ್ಯುತ್ತಮ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು. ಇದನ್ನೂ ಓದಿ: ಬರೋಬ್ಬರಿ 11 ತಿಂಗಳ ಬಳಿಕ ಪ್ರಧಾನಿ ಭೇಟಿಯಾಗಲಿರುವ ಬಿಎಸ್ವೈ