ಧಾರವಾಡ: ಕರ್ತವ್ಯ ನಿರತ ಯೋಧ (Soldier) ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದೆ.
ಧಾರವಾಡ ತಾಲೂಕಿನ ಗರಗ ಗ್ರಾಮದ ಯೋಧ ವಸಂತರೆಡ್ಡಿ ಕೆಂಚರೆಡ್ಡಿನವರ್ (45) ಮೃತ ಯೋಧ. ವಸಂತರೆಡ್ಡಿ ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿದ್ದರು. ಇನ್ನೂ 4 ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದರು. ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ಜಾಲ ನಿರ್ಮೂಲನೆಗೆ ಕೇಂದ್ರದ ಕಠಿಣ ಮಸೂದೆ: ಪ್ರಲ್ಹಾದ ಜೋಶಿ
ವಸಂತರೆಡ್ಡಿ 18 ಇನ್ಫಂಟ್ರಿಯಲ್ಲಿ ಸೇವೆ ಸಲ್ಲಿಸಿದ್ದರು. ವೀರ ಯೋಧನ ಪಾರ್ಥಿವ ಶರೀರ ಇಂದು ರಾತ್ರಿ ಸ್ವಗ್ರಾಮಕ್ಕೆ ಬರಲಿದೆ. ಇದನ್ನೂ ಓದಿ: ಕೇಸರಿ ಬಣ್ಣದಲ್ಲಿ ಹಾಕಿ ತಂಡ| ಇದು ದೇಶದ ಇತಿಹಾಸ ಬದಲಿಸುವ ಯತ್ನ: ಪ್ರಿಯಾಂಕಾ ಆಕ್ರೋಶ
