ಭುವನೇಶ್ವರ: ಜನಸಂಖ್ಯೆ ನಿಯಂತ್ರಣಾ ಕ್ರಮಗಳ ಭಾಗವಾಗಿ ಒಡಿಶಾ ಸರ್ಕಾರವು ಹೊಸ ಉಪಕ್ರಮವನ್ನು ಪರಿಚಯಿಸುತ್ತಿದೆ. ಕಾಂಡೋಮ್ ಸೇರಿದಂತೆ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಇತರ ಅಗತ್ಯ ವಸ್ತುಗಳನ್ನು ಹೊಂದಿರುವ `ವೆಡ್ಡಿಂಗ್ ಕಿಟ್’ಗಳನ್ನು ಉಡುಗೊರೆಯಾಗಿ ನೀಡಲು ಸರ್ಕಾರ ಸಿದ್ಧವಾಗಿದೆ. ಇದು ಕುಟುಂಬ ಯೋಜನೆ (ಫ್ಯಾಮಿಲಿ ಪ್ಲ್ಯಾನಿಂಗ್) ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಹೆಚ್‌ಎಂ) ಅಡಿಯಲ್ಲಿ `ನಯಿ ಪಹಲ್ ಯೋಜನೆ’ ಅಥವಾ `ನಬದಂಪತಿ ಕಿಟ್’ ವಿತರಿಸುವ ಹೊಸ ಉಪಕ್ರಮವನ್ನು ಜಾರಿಗೆ ತರುತ್ತಿದೆ. ಇದು ಯುವ ಜೋಡಿಗಳು ತಾತ್ಕಾಲಿಕ ಅಥವಾ ಶಾಶ್ವತ ಕುಟುಂಬ ಯೋಜನೆಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನೂ ಸರ್ಕಾರ ಹೊಂದಿದೆ. ಇದನ್ನೂ ಓದಿ: ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಿಜೆಪಿ, ಆರ್‌ಎಸ್‍ಎಸ್‍ನ ಯಾವುದೇ ಪಾತ್ರವಿಲ್ಲ: ಸತೀಶ್ ಜಾರಕಿಹೊಳಿ
ವೆಡ್ಡಿಂಗ್ ಕಿಟ್‌ನಲ್ಲಿ ಏನಿರಲಿದೆ?
ವಿವಾಹದ ಕಿಟ್‌ನಲ್ಲಿ ಕುಟುಂಬ ಮದುವೆ ನೋಂದಣಿ ನಮೂನೆ (ಅರ್ಜಿ), ಕಾಂಡೋಮ್‌ಗಳು, ಗರ್ಭನಿರೋಧಕ (ಒಸಿಪಿ) ಹಾಗೂ ತುರ್ತು ಗರ್ಭನಿರೋಧಕ ಮಾತ್ರೆಗಳು (ಇಸಿಪಿ) ಹಾಗೂ ಕುಟುಂಬ ಯೋಜನೆ ಮತ್ತು ಅದರ ಪ್ರಯೋಜನಗಳನ್ನು ತಿಳಿಸುವ ಒಂದು ಕಿರುಪುಸ್ತಿಕೆಯನ್ನು ಒಳಗೊಂಡಿರುತ್ತದೆ. ಇದರ ಹೊರತಾಗಿ, ಗರ್ಭಧಾರಣೆ ಪರೀಕ್ಷಾ ಕಿಟ್ (ಫ್ರೆಗ್ನೆನ್ಸಿ ಕಿಟ್), ಟವೆಲ್, ಬಾಚಣಿಗೆ, ಬಿಂದಿ, ಉಗುರು ಕತ್ತಿರಿಸುವ ಸಾಧನ (ನೇಲ್ಸ್ ಕಟ್ಟರ್) ಹಾಗೂ ಕನ್ನಡಿ ಸೇರಿದಂತೆ ಇತರ ಸಾಮಗ್ರಿಗಳನ್ನು ಸಹ ಒಳಗೊಂಡಿರುತ್ತದೆ. ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಕಾರು ಅಪಘಾತ ಮಾಡಿಕೊಂಡಿದ್ದ ಖ್ಯಾತ ನಟಿ ಕೊನೆಗೂ ಉಳಿಯಲಿಲ್ಲ: ನಟಿಯ ನಿಧನಕ್ಕೆ ಹಾಲಿವುಡ್ ಕಂಬನಿ
ಈ ವರ್ಷದ ಸೆಪ್ಟಂಬರ್ ತಿಂಗಳಿನಿಂದ ನವ ವಿವಾಹಿತರಿಗೆ ವೆಡ್ಡಿಂಗ್ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾನ್ಯತೆ ಪಡೆದ ಆಶಾ ಕಾರ್ಯಕರ್ತರಿಗೆ ವಿತರಿಸುವ ಜವಾಬ್ದಾರಿ ನೀಡಲಾಗುತ್ತದೆ. ಅವರು ವಿವಾಹ ನಡೆಯುವ ಮನೆಗಳಿಗೆ ತೆರಳಿ ವೆಡ್ಡಿಂಗ್ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಕುಟುಂಬ ಯೋಜನಾ ನಿರ್ದೇಶಕ ಡಾ. ಬಿಜಯ್ ಪಾಣಿಗ್ರಾಹಿ ಹೇಳಿದ್ದಾರೆ.