BollywoodCinemaCrimeLatestMain PostNational

ಡ್ರಗ್ಸ್ ಸೇವಿಸಿ ಕಾರು ಅಪಘಾತ ಮಾಡಿಕೊಂಡಿದ್ದ ಖ್ಯಾತ ನಟಿ ಕೊನೆಗೂ ಉಳಿಯಲಿಲ್ಲ: ನಟಿಯ ನಿಧನಕ್ಕೆ ಹಾಲಿವುಡ್ ಕಂಬನಿ

ಆಗಸ್ಟ್ 5 ರಂದು ನಡೆದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಾಲಿವುಡ್ ಖ್ಯಾತ ನಟಿ ಎನ್ ಹಿಚ್ (53) ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರ ಪುತ್ರ ಹೋಮರ್ ಖಚಿತ ಪಡಿಸಿದ್ದಾರೆ. ಸಿಕ್ಸ್ ಡೇಸ್ ಸೆವನ್ ನೈಟ್ಸ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಇವರು ಕಾರು ಅಪಘಾತದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ಬಹುತೇಕ ಸುಟ್ಟು ಹೋಗಿದ್ದರು.  ಅಪಾರ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸಿದ್ದ ಹಿನ್ನೆಲೆಯಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡ್ರಗ್ಸ್ ಸೇವಿಸಿ ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಎನ್.ಹಿಚ್, ವೇಗದ ಕಂಟ್ರೋಲ್ ತಪ್ಪಿ ಮನೆಯೊಂದರ ಗೋಡೆಗೆ ಕಾರು ನುಗ್ಗಿಸಿದ್ದಾರೆ. ಗೋಡೆಗೆ ಕಾರು ಢಿಕ್ಕಿ ಹೊಡೆಯುತ್ತಿದ್ದಂತೆಯೇ ದಿಢೀರ್ ಅಂತ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಬೆಂಕಿಯ ಕಾರಣದಿಂದಾಗಿ ನಟಿಯನ್ನು ಆಚೆ ಕರೆದುಕೊಂಡು ಬರುವುದಕ್ಕೆ ಸಾಧ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು, ನಟಿಯನ್ನು ಆಚೆ ತರುವಲ್ಲಿ ಬಹುತೇಕ ಸುಟ್ಟು ಹೋಗಿದ್ದಾರೆ ಎನ್.ಹಿಚ್. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

ಬಹುತೇಕ ಸುಟ್ಟು ನರಳಾಡುತ್ತಿದ್ದ ಎನ್.ಹಿಚ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಅವರು ಕೋಮಾಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಜೀವ ಉಳಿಸುವುದು ತೀರಾ ಕಷ್ಟವೆಂದು ವೈದ್ಯರು ಹೇಳಿರುವ ಕಾರಣದಿಂದಾಗಿ ನಟಿ ಅಂಗಾಂಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗಿದೆ ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಹಾಲಿವುಡ್ ನ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button