ಬಿಗ್ ಬಾಸ್ ಮನೆಯಲ್ಲಿ ಒಂಟಿಯಾಗಿ ಹೋದವರು, ವಾಪಸ್ಸು ಜಂಟಿಯಾಗಿಯೇ ಬರುತ್ತಾರೋ ಎನ್ನುವಷ್ಟು ಪ್ರೇಮಕಥೆಗಳು ಅರಳುತ್ತಿವೆ. ಈಗಾಗಲೇ ಸ್ಫೂರ್ತಿ ಗೌಡ, ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ತ್ರಿಕೋನ ಪ್ರೇಮ ಶುರುವಾಗಿದೆ. ಯಾರು, ಯಾರನ್ನು ಲವ್ ಮಾಡುತ್ತಿದ್ದಾರೋ ಅವರಿಗೇ ಗೊತ್ತಿರುವ ವಿಚಾರವಾದರೂ, ಜನರಿಗೆ ತಮ್ಮ ಮೂವರೊಳಗೆ ಇನ್ನ್ಯಾರೋ ಇದ್ದಾರೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮತ್ತೊಂದು ಲವ್ ಸ್ಟೋರಿ ಚಿಗುರೊಡೆಯುತ್ತಿದೆ.
Advertisement
ಈಗಾಗಲೇ ಜೀವನಲ್ಲಿ ಒಂದು ಲವ್ ಫೆಲ್ಯೂವರ್ ಕಂಡಿರುವ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ನಡುವೆ ಏನೋ ನಡೀತಾ ಇದೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿದ್ದವರ ಗುಮಾನಿ. ಅದಕ್ಕೆ ಪುಷ್ಠಿ ಎನ್ನುವಂತೆ ಈ ಜೋಡಿ ಸದಾ ಜೊತೆಯಾಗಿಯೇ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತದೆ. ತಮ್ಮ ನಡುವೆ ಏನೋ ಇದೆ ಎನ್ನುವಂತೆ ನಡೆದುಕೊಳ್ಳುತ್ತಿದೆ. ಹೀಗಾಗಿ ದೊಡ್ಮನೆಯಲ್ಲಿ ಈ ಜೋಡಿಯ ಬಗ್ಗೆ ಗುಸುಗುಸು ಶುರುವಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ
Advertisement
Advertisement
ರೂಪೇಶ್ ಮತ್ತು ತಮ್ಮ ನಡುವಿನ ಅತೀ ಸಲುಗೆ ಇರುವ ವಿಚಾರವು ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ತಿಳಿದಿದೆ ಎಂದು ಸ್ವತಃ ಸಾನ್ಯಾಗೂ ಗೊತ್ತಾಗಿದೆ. ಹಾಗಾಗಿಯೇ ಅವರು ಇದಕ್ಕೆ ಸ್ಪಷ್ಟ ಪಡಿಸಲು ಹೋಗುತ್ತಾರೆ. ರೂಪೇಶ್ ಮತ್ತು ತಮ್ಮ ನಡುವೆ ಅಂಥದ್ದೂ ಏನೂ ಇಲ್ಲ, ನಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ತಿಳಿಗೊಳಿಸಲು ಪ್ರಯತ್ನಿಸುತ್ತಾರೆ. ಏನೇ ಪ್ರಯತ್ನಿಸಿದರೂ, ಅವರುಗಳ ನಡೆ ಮಾತ್ರ ಈಗಲೂ ಪ್ರೇಮಿಗಳ ಲಕ್ಷಣಗಳಂತೆ ಗೋಚರಿಸುತ್ತಿರುವುದನ್ನು ಸ್ಪರ್ಧಿಗಳು ನೋಟಿಸ್ ಮಾಡುತ್ತಿದ್ದಾರೆ.