BelgaumDistrictsKarnatakaLatestMain Post

ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಿಜೆಪಿ, ಆರ್‌ಎಸ್‍ಎಸ್‍ನ ಯಾವುದೇ ಪಾತ್ರವಿಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ದೊರಕಲು ಬಿಜೆಪಿ, ಆರ್‌ಎಸ್‍ಎಸ್ ಯಾವುದೇ ಪಾತ್ರವಿಲ್ಲ. ನಾವು ಸುಮ್ಮನೇ ಕುಳಿತರೆ ಮೋದಿಯವರೆ ದೇಶಕ್ಕೆ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳುತ್ತಾರೆ. ಹೀಗಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಲು ಕಾಂಗ್ರೆಸ್ ಪಕ್ಷದ ಪಾತ್ರ ಏನು ಎಂಬುವುದನ್ನು ಜನತೆಗೆ ಕಾರ್ಯಕರ್ತರು ತಿಳಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಕರೆ ನೀಡಿದರು.

ಗೋಕಾಕ ವಿಧಾನಸಭಾ ಮತಕ್ಷೇತ್ರದ ವಿವಿಧ ಪಟ್ಟಣ, ಗ್ರಾಮಗಳಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಆರ್‌ಎಸ್‍ಎಸ್‍ನವರು ತಮ್ಮ ಕಚೇರಿ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಲು ನಿರಾಕರಿಸಿದ್ದರು. ಆದರೆ ಇಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಎಲ್ಲೆಡೆ ಓಡಾಡುತ್ತಿದ್ದಾರೆ. ಆದರೆ ಸ್ವಾತಂತ್ರ್ಯ ದೊರಕಲು ಸಾಕಷ್ಟು ಮಹಾನ್ ನಾಯಕರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಆ ಮಹಾನ್ ನಾಯಕರನ್ನು ಸ್ಮರಿಸುವುದು ಅಗತ್ಯವಿದೆ. ಸುಳ್ಳು ಪ್ರಚಾರವನ್ನು ಯುವಕರು ನಂಬಬಾರದೆಂದು ಸಲಹೆ ನೀಡಿದರು. ಇದನ್ನೂ ಓದಿ: ಮಡಿಕೇರಿಗೆ ತೆರಳುತ್ತಿದ್ದ KSRTC ಬಸ್ ಅಪಘಾತ – ಜನರ ರಕ್ಷಣೆಗೆ ಮುಂದಾದ ಅಪ್ಪಚ್ಚು ರಂಜನ್

ನಂತರ ಪಾಮಲದಿನ್ನಿ, ಘಟಪ್ರಭ, ಶಿಂದಿಕುರಭೇಟಿ, ಧುಪದಾಳ, ಕೊಣ್ಣುರ, ಸಾವಳಗಿ, ಮರಡಿಮಠ, ಗೋಕಾಕ ಪಾಲ್ಸ್‍ನಲ್ಲಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಸಂಭ್ರಮದಿಂದ ನೆರವೇರಿತು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ : ಆರಗ ಜ್ಞಾನೇಂದ್ರ

Live Tv

Leave a Reply

Your email address will not be published.

Back to top button