ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಅವರು ಸೋಮವಾರ (ಆ.24) ಚೀನಾದ ರಾಜಧಾನಿ ಬೀಜಿಂಗ್‌ಗೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಚೀನಾದ ವಾಂಗ್ ಯೀ ಅವರೊಂದಿಗೆ ಭಾರತ – ಚೀನಾ ಗಡಿ (India China Border) ಸಮಸ್ಯೆಗಳ ಕುರಿತು ವಿಶೇಷ ಪ್ರತಿನಿಧಿಗಳ (SR) ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಭಯ ದೇಶಗಳು ಮಂಗಳವಾರ (ಆ.25) 25ನೇ ಸುತ್ತಿನ ಮಾತುಕತೆ ನಡೆಸಲಿವೆ. ಇದನ್ನೂ ಓದಿ: ನಿವೃತ್ತಿ ಬೆನ್ನಲ್ಲೇ ತೇಜಸ್ ಮಾರ್ಕ್-2 ಜೆಟ್ ಕಾರ್ಯಕ್ಷಮತೆ ಟೀಕಿಸಿದ ವಾಯುಪಡೆ ಏರ್ ಮಾರ್ಷಲ್

ಮುಂಬರುವ ಸೆಪ್ಟೆಂಬರ್ 12-13 ರಂದು ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗಾಗಿ (BRICS Summit) ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನವೇ ಗಡಿ ಸಮಸ್ಯೆ ಕುರಿತು ನಡೆಯಲಿರುವ ಮಾತುಕತೆ ಮಹತ್ವದ್ದಾಗಿವೆ. ಜಿನ್‌ಪಿಂಗ್ ಭೇಟಿಯ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಿಲ್ಲದಿದ್ದರೂ, ವಿಶೇಷ ಪ್ರತಿನಿಧಿಗಳ ಮಾತುಕತೆ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.
ಭಾರತ-ಚೀನಾ ಗಡಿ ವಿವಾದ & ಮಾತುಕತೆ
ಭಾರತ ಮತ್ತು ಚೀನಾ ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಮಿಲಿಟರಿ ಮುಖಾಮುಖಿ ಕಡಿಮೆ ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ. 2020ರ ಜೂನ್‌ನಲ್ಲಿ ನಡೆದ ಗಾಲ್ವಾನ್ ಘರ್ಷಣೆಯ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಆಗಿನಿಂದಲೂ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇದೆ.
ಸದ್ಯ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಹೆಚ್ಚಿನ ಸಂಖ್ಯೆಯ ಸೈನಿಕರು ಮತ್ತು ಮಿಲಿಟರಿ ಸೌಲಭ್ಯಗಳನ್ನ ನಿಯೋಜನೆ ಮಾಡಿವೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶೇಷ ಪ್ರತಿನಿಧಿಗಳ ಮಾತುಕತೆ ಅತ್ಯಂತ ಮಹತ್ವದ್ದಾಗಿದೆ. ಇದನ್ನೂ ಓದಿ: ವ್ಯಾಪಾರ ಒಪ್ಪಂದ ಮಾತುಕತೆ ವಿಫಲ; ಕೆನಡಾ ಉತ್ಪನ್ನಗಳ ಮೇಲೆ ಯುಎಸ್ 50% ಸುಂಕ

