– ಅಸೋಸಿಯೇಷನ್ ಸಭೆಯಲ್ಲಿ ನಿರ್ಧಾರ
ಬೆಂಗಳೂರು: ಔಟರ್ ರಿಂಗ್‌ರೋಡ್ (Outer Ring Road) ಕಾಮಗಾರಿಗಾಗಿ ಐಟಿ ಸಂಸ್ಥೆಗಳಿಗೆ (IT Company) ವರ್ಕ್ ಫ್ರಮ್ ಹೋಂಗೆ (Work From Home) ಜಿಬಿಎ ಮಾಡಿದ್ದ ಮನವಿಯನ್ನ ಅಸೋಸಿಯೇಷನ್ ತಿರಸ್ಕಾರ ಮಾಡಿದ್ದು, ಸದ್ಯ ವರ್ಕ್ ಫ್ರಮ್ ಹೋಂ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ.
ಔಟರ್ ರಿಂಗ್‌ರೋಡ್‌ನ ವೈಟ್ ಟ್ಯಾಪಿಂಗ್ ಕಾಮಗಾರಿಗಾಗಿ, ಟ್ರಾಫಿಕ್ ಒತ್ತಡ ಕಡಿಮೆ ಮಾಡಿ, ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಇದೇ ಅಕ್ಟೋಬರ್‌ನಿಂದ ಈ ಭಾಗದ ಕಂಪನಿಗಳಿಗೆ 50:50ರಷ್ಟು ಅನುಪಾತದಲ್ಲಿ ವರ್ಕ್ ಫ್ರಮ್ ಹೋಂಗೆ ಮನವಿ ಮಾಡಿತ್ತು. ಆದರೆ ಜಿಬಿಎ (GBA) ಮನವಿಯನ್ನು ಒಪ್ಪದ ಕಂಪನಿಗಳು, ವರ್ಕ್ ಫ್ರಮ್ ಹೋಂ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿವೆ. ಇದನ್ನೂ ಓದಿ: ಕಾವೇರಿ ವಿವಾದದ ನಡುವೆ ಸಿಎಂ ವಿಜಯ್-ಡಿ.ಕೆ ಶಿವಕುಮಾರ್ ಇಂದು ಭೇಟಿ
ಈ ಭಾಗದಲ್ಲಿ ಅನೇಕ ದಿನಗಳಿಂದ ಇರುವ ಸಮಸ್ಯೆಗಳ ಪೈಕಿ ಟ್ರಾಫಿಕ್ ಅತಿ ದೊಡ್ಡ ಸಮಸ್ಯೆ. ಟ್ರಾಫಿಕ್ ದಟ್ಟಣೆಯಿಂದಲೇ ಈ ಭಾಗ ಪದೇ ಪದೇ ಸುದ್ದಿಯಲ್ಲಿರುತ್ತದೆ. ಸದ್ಯ ಈ ಭಾಗದ ರಸ್ತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಜಿಬಿಎ ಈ ವ್ಯಾಪ್ತಿಯ 20 ಕಿ.ಮೀ ರಸ್ತೆಯನ್ನ ವೈಟ್ ಟ್ಯಾಪಿಂಗ್ ಮಾಡಲು ನಿರ್ಧಾರ ಮಾಡಿದೆ. ಇದೇ ಅಕ್ಟೋಬರ್‌ನಿಂದ ಕೆಲಸ ಆರಂಭ ಮಾಡುವ ಸಿದ್ಧತೆ ಕೂಡ ಮಾಡಿದೆ. ಕಾಮಗಾರಿ ವೇಗಕ್ಕಾಗಿ ಈ ಭಾಗದ ದಟ್ಟಣೆ ನಿವಾರಣೆ ಮಾಡಲು, ಜಿಬಿಎ ಇಲ್ಲಿನ ಕಂಪನಿಗಳಿಗೆ 50% ವರ್ಕ್ ಫ್ರಮ್ ಹೋಂಗೆ ಮನವಿ ಮಾಡಿತ್ತು. ಆದರೀಗ ಜಿಬಿಎ ಮನವಿಯಂತೆ ವರ್ಕ್ ಫ್ರಮ್ ಹೋಂ ಸಾಧ್ಯ ಇಲ್ಲ ಅನ್ನೋ ತೀರ್ಮಾನಕ್ಕೆ ಕಂಪನಿಗಳು ಬಂದಿವೆ. ಈ ಬಗ್ಗೆ ಕಂಪನಿ ಮುಖ್ಯಸ್ಥರು ಅಸೋಸಿಯೇಷನ್ ಸಭೆಯಲ್ಲಿ ವರ್ಕ್ ಫ್ರಮ್ ಹೋಂ ಸಾಧ್ಯ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಹಾದೇವಪುರದ ಪಾಳುಬಾವಿಯಲ್ಲಿ ನವವಿವಾಹಿತೆ ಮೃತದೇಹ ಪತ್ತೆ – ಇಬ್ಬರು ಆರೋಪಿಗಳ ಬಂಧನ
ಇನ್ನು, ವರ್ಕ್ ಫ್ರಮ್ ಹೋಂ ಅಂದರೆ ಕಂಪನಿ ಕೆಲಸಗಳ ವೇಗ ತಗ್ಗುವ ಕಾರಣ, ಸಾಧ್ಯ ಇಲ್ಲ. ಹಾಗಾಗಿ ಜಿಬಿಎ ಮನವಿಗೆ ಒಪ್ಪಿಗೆ ಸೂಚಿಸದಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಭಾರತದ ಪ್ರಮುಖ ಭಾಗ: ಅಮೆರಿಕ ಮಹತ್ವದ ಹೇಳಿಕೆ
ಅಸೋಸಿಯೇಷನ್ ನಿರ್ಧಾರಕ್ಕೆ ಕಾರಣವೇನು?
– ಜಿಬಿಎ ಅಂದುಕೊಂಡ ಸಮಯಕ್ಕೆ ಕೆಲಸ ಮುಗಿಸುವುದಿಲ್ಲ.
– ಹೇಳಿದ ಸಮಯಕ್ಕೆ ಎಲ್ಲೂ ಜಿಬಿಎ ಕೆಲಸ ಮುಗಿಸಿಲ್ಲ.
– ಒಂದೊಮ್ಮೆ ಇಲ್ಲೂ ಅದೇ ಪರಿಸ್ಥಿತಿ ಎದುರಾಗುವ ಸಾಧ್ಯತೆ.
– ಆಯ್ಕೆಗಳಿಲ್ಲದೇ ವರ್ಕ್ ಫ್ರಮ್ ಹೋಂ ಮುಂದುವರೆಸಬೇಕು.
– ಇದು ಸಂಸ್ಥೆಯ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ.
– ಈ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಇರುವ ಕಾರಣ ಹೇಳಿದ ಸಮಯಕ್ಕೆ ಕೆಲಸ ಮುಗಿಸುವುದು ಡೌಟ್ ಎಂದು ಅಸೋಸಿಯೇಷನ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಅಸೋಸಿಯೇಷನ್ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಜಿಬಿಎ ಮೇಲೆ ನಂಬಿಕೆ ಇಲ್ಲದೇ ಇರೋದು. ಜಿಬಿಎ ಕಾಮಗಾರಿ ವಿಳಂಬ ನೀತಿ, ಸಮಸ್ಯೆ ತಂದೊಡ್ಡಬಹುದೆಂಬ ಆತಂಕದಿಂದ ಹಿಂದೇಟು ಹಾಕುತ್ತಿವೆ. ಇನ್ನು ಕೆಲ ಸಲಹೆಗೂ ಅಸೋಸಿಯೇಷನ್ ಮುಂದಾಗಿದೆ. ಪ್ರಮುಖವಾಗಿ ನವೆಂಬರ್ ಬಳಿಕ ಈ ಭಾಗದಲ್ಲಿ ಕಾಮಗಾರಿ ಆರಂಭವಾದರೆ ಕ್ರಮೇಣ ವಾಹನ ಓಡಾಟ ಆ ಸಂಧರ್ಭದಲ್ಲಿ ಕಡಿಮೆ ಇರಲಿದೆ ಅನ್ನೋದು ಅಸೋಸಿಯೇಷನ್ ಅಭಿಪ್ರಾಯ. ಜೊತೆಗೆ ಮೊದಲು ಈ ರಸ್ತೆಯ ಸರ್ವೀಸ್ ರೋಡ್ ಅನ್ನು ಕ್ಲಿಯರ್ ಮಾಡಿ ಬಳಿಕ ಕಾಮಗಾರಿ ಆರಂಭಿಸಿ, ಹಂತ ಹಂತವಾಗಿ ಕಾಮಗಾರಿ ಮಾಡಿದರೆ ಕಡಿಮೆ ತೊಂದರೆ ಇರಲಿದೆ ಅನ್ನೋದು ಅಸೋಸಿಯೇಷನ್ ಅಭಿಪ್ರಾಯ. ಈ ಬಗ್ಗೆ ಜಿಬಿಎ ಜೊತೆ ಸಭೆಯಲ್ಲಿ ತಿಳಿಸಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬ – ಸಾವಿರದ ಗಡಿದಾಟಿದ ಹೂವುಗಳ ಬೆಲೆ, ಕೆ.ಆರ್ ಮಾರ್ಕೆಟ್‌ನಲ್ಲಿ ಜನವೋ ಜನ

