ನವದೆಹಲಿ: ಜಮ್ಮು ಮತ್ತು ಕಾಶ್ಮೀರ (Jammu Kashmir) ಭಾರತದ ಪ್ರಮುಖ ಭಾಗ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ (Sergio Gor) ಹೇಳಿಕೆ ನೀಡಿದ್ದಾರೆ.
ಸೆರ್ಗಿಯೋ ಅವರು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಎರಡು ದಿನಗಳ ಭೇಟಿಗಾಗಿ ಶ್ರೀನಗರಕ್ಕೆ ಆಗಮಿಸಿದ್ದರು. ಈ ವೇಳೆ, ಕೇಂದ್ರಾಡಳಿತ ಪ್ರದೇಶವನ್ನು ಭಾರತದ ಪ್ರಮುಖ ಭಾಗ ಎಂದಿದ್ದಾರೆ. ಇದನ್ನೂ ಓದಿ: ‘ಅಲ್ಲಿ ಪ್ರತಿ ಮತದಾರನಿಗೂ photo ID ಇದೆ’: ಭಾರತದ ಚುನಾವಣಾ ವ್ಯವಸ್ಥೆ ಬಣ್ಣಿಸಿದ ಟ್ರಂಪ್
ಕಾಶ್ಮೀರ ಭಾರತದ ಪ್ರಮುಖ ಭಾಗ. ನಾನು ಮೊದಲ ಬಾರಿಗೆ ಆ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ. ಇದು ನಂಬಲಾಗದಷ್ಟು ಸುಂದರವಾದ ಸ್ಥಳವಾಗಿದೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗಿನ ಭೇಟಿಯ ನಂತರ ಸೆರ್ಗಿಯೊ ತಿಳಿಸಿದ್ದಾರೆ.
ನಾವು ತುಂಬಾ ಆತ್ಮೀಯ ಸಭೆ ನಡೆಸಿದ್ದೇವೆ. ನಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ ಕಾಶ್ಮೀರಕ್ಕೆ ಅಧ್ಯಕ್ಷ ಟ್ರಂಪ್ ಅವರ ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿಶೇಷ ರಾಯಭಾರಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಅಮೆರಿಕದ ಉನ್ನತ ರಾಜತಾಂತ್ರಿಕರ ಮೊದಲ ಭೇಟಿ ಇದಾಗಿದೆ.
ಈ ಪ್ರದೇಶದಲ್ಲಿನ ಕಾರ್ಯತಂತ್ರದ ಬೆಳವಣಿಗೆಗಳ ಮಧ್ಯೆ, ಇತ್ತೀಚಿನ ವರ್ಷಗಳಲ್ಲಿ ಗೋರ್ ಅವರ ಭೇಟಿಯನ್ನು ಅಮೆರಿಕದ ಮಹತ್ವದ ರಾಜತಾಂತ್ರಿಕ ಸಂಬಂಧವೆಂದು ಪರಿಗಣಿಸಲಾಗಿದೆ. ಗೋರ್ ಅವರೊಂದಿಗಿನ ಭೇಟಿಯ ಕುರಿತು ಮಾತನಾಡಿದ ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರೀಕರಿಸಿ ಅಮೆರಿಕ-ಭಾರತ ಸಂಬಂಧಗಳ ಕುರಿತು ಚರ್ಚಿಸಲು ಅವಕಾಶ ಸಿಕ್ಕಿತು ಎಂದಿದ್ದಾರೆ. ಇದನ್ನೂ ಓದಿ: ಹಫೀಜ್ ಸಯೀದ್ 10,000 ಉಗ್ರರನ್ನು ಕಾಶ್ಮೀರಕ್ಕೆ ಕಳುಹಿಸಿದ್ದಾನೆ: ನಾಲಿಗೆ ಹರಿಬಿಟ್ಟ ಪಾಕ್ ಧರ್ಮಗುರು

