ನವದೆಹಲಿ: ಕೋವಿಡ್-19 (Covid-19) ಸೋಕಿನ ವಿರುದ್ಧ ಹೋರಾಡಲು 2ನೇ ಬೂಸ್ಟರ್ ಡೋಸ್ (2nd Booster Dose) ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಮೊದಲು ನಾವು ದೇಶದಲ್ಲಿ ಕೋವಿಡ್‌ನ ಮೊದಲನೇ ಬೂಸ್ಟರ್ ಡ್ರೈವ್ ಅನ್ನು ಪೂರ್ಣಗೊಳಿಸಬೇಕಿದೆ. ಸದ್ಯ ಮೊದಲನೇ ಬೂಸ್ಟರ್ ಡೋಸ್ ತೆಗೆದುಕೊಂಡಿರುವವರು 2ನೇ ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದೆ.
Advertisement
Advertisement
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 220.11 ಕೋಟಿ ಲಸಿಕೆಗಳನ್ನು (Vaccine) ನೀಡಲಾಗಿದ್ದು, ಅದರಲ್ಲಿ 95.13 ಕೋಟಿ ಜನರು 2ನೇ ಡೋಸ್ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ 22.41 ಕೋಟಿ ಜನರು ಮಾತ್ರವೇ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: BPL ಪಡಿತರದಾರರಿಗೆ 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ – ಸರ್ಕಾರ ಆದೇಶ
Advertisement
Advertisement
ಕೋವಿಡ್‌ನ ಹೊಸ ರೂಪಾಂತರಗಳಿಂದಾಗಿ ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳವಾರ ಭಾರತದಲ್ಲಿ 134 ಹೊಸ ಕೋವಿಡ್ ಕೇಸ್ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,582 ಇದೆ. ಇಲ್ಲಿಯವರೆಗೆ ಸುಮಾರು 4.46 ಕೋಟಿ ಪ್ರಕರಣಗಳು ದಾಖಲಾಗಿವೆ. ಒಟ್ಟು ಕೋವಿಡ್‌ನಿಂದಾಗಿ 5,30,707 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ರ‍್ಯಾಲಿಯಲ್ಲಿ ಕಾಲ್ತುಳಿತಕ್ಕೆ 11 ಸಾವು- ರ‍್ಯಾಲಿ, ಸಾರ್ವಜನಿಕ ಸಭೆಗೆ ಆಂಧ್ರ ಸರ್ಕಾರ ನಿಷೇಧ