LatestMain PostNational

ಮಧ್ಯಾಹ್ನದ ಊಟ ಇಲ್ಲ, ಶಿಕ್ಷಕರಿಗೆ ಮಸಾಜ್ ಬೇಕಂತೆ – ವಿದ್ಯಾರ್ಥಿಗಳಿಂದಲೇ ಶಾಲೆಯ ಆಸ್ತಿ ಧ್ವಂಸ

Advertisements

ಪಾಟ್ನಾ: ಶಾಲೆಯಲ್ಲಿ ಮಧ್ಯಾಹ್ನದ ಊಟದ ಯೋಜನೆ ಅನುಷ್ಠಾನದಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಗಲಾಟೆ ಮಾಡಿ ಶಾಲೆಯ ಆಸ್ತಿಯನ್ನು ಧ್ವಂಸಗೊಳಿಸಿರುವ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ.

ವರದಿಗಳ ಪ್ರಕಾರ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಊಟ ನೀಡುತ್ತಿಲ್ಲ, ತಮ್ಮ ಶಿಕ್ಷಕರು ಪಾಠ ಕಲಿಸುವ ಬದಲು ಮಸಾಜ್ ಮಾಡುವಂತೆ ಒತ್ತಾಯಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಘಟನೆ ಕತಿಹಾರ್ ಬರ್ಸೋಯ್ ಬ್ಲಾಕ್‌ನ ಅಬಾದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬರಿಯೌಲ್ ಮಿಡಲ್ ಸ್ಕೂಲ್‌ನಲ್ಲಿ ವರದಿಯಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಆಸ್ತಿಯನ್ನು ಧ್ವಂಸಗೊಳಿಸುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಪೊಲೀಸ್ ವಾಹನದಲ್ಲಿ ಕುರಿ ದರ್ಬಾರ್ – ಮುಗ್ದ ಪ್ರಾಣಿಯ ಜಾಲಿ ರೈಡ್ ನೋಡಿ ನೆಟ್ಟಿಗರು ಫಿದಾ

ಶಾಲೆಯ ಆವರಣದಲ್ಲಿ ಗಲಾಟೆ ನಡೆಸಲು ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಪ್ರಚೋದಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜಿಲ್ಲಾಡಳಿತ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ತನಿಖೆಗೆ ಆದೇಶಿಸಿದೆ.

ಘಟನೆ ಬಳಿಕ ಜಿಲ್ಲಾ ಪರಿಷತ್ ಸದಸ್ಯ ಮೊಹಮ್ಮದ್ ಗುಲ್ಜಾರ್ ಆಲಂ ಮಾಹಿತಿ ಪಡೆದು ವಿದ್ಯಾರ್ಥಿಗಳೊಂದಿಗೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಶಾಲೆಯಲ್ಲಿ ಊಟವನ್ನು ಸರಿಯಾಗಿ ನೀಡುತ್ತಿಲ್ಲ, ಶಿಕ್ಷಕರು ಪಾಠ ಹೇಳಿಕೊಡುವ ಬದಲು ಮಸಾಜ್ ನೀಡುವಂತೆ ಒತ್ತಾಯಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾರು ಹೊಳೆಗೆ ಉರುಳಿದ ಪ್ರಕರಣ- ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಾರು ಪತ್ತೆ

ಇದು ನಾಚಿಕೆಗೇಡಿನ ಸಂಗತಿ:
ಘಟನೆ ಬಳಿಕ ಶಿಕ್ಷಣಾಧಿಕಾರಿ ಮಮ್ತಾಜ್ ಅಹಮದ್ ಶಾಲೆಯ ಮುಖ್ಯೋಪಾಧ್ಯಾಯ ಗೋಪೈನ್ ಚಂದ್ರ ಅವರೊಂದಿಗೆ ಮಾತನಾಡಿ, ಇದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button