ಕುರಿಯೊಂದು ಜಮೀನಿಂದ ಮನೆಗೆ ತೆರಳಲು ಪೊಲೀಸ್ ವಾಹನದಲ್ಲಿ ಲಿಫ್ಟ್ ಪಡೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕುರಿಯ ಮುಗ್ದತೆಗೆ ನೆಟ್ಟಿಗರುಮನಸೋತಿದ್ದಾರೆ.
Advertisement
ಓಲ್ಡ್ ಟೌನ್ ಪೊಲೀಸ್ ಇಲಾಖೆ ತನ್ನ ಫೇಸ್‍ಬುಕ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ ಕುರಿಯೊಂದು ಜಮೀನುವೊಂದರಲ್ಲಿ ಅಲೆದಾಡುತ್ತಿರುವುದಾಗಿ ನಮಗೆ ಕರೆ ಬಂದಿತ್ತು. ನಂತರ ಸ್ಥಳಕ್ಕೆ ತಲುಪಿ ಕುರಿಯನ್ನು ತೆಗೆದುಕೊಂಡು ನಮ್ಮ ವಾಹನದ ಹಿಂದಿನ ಸೀಟಿನಲ್ಲಿ ಕುರಿಸಿಕೊಂಡು ಅದರ ಮನೆಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಸಮೀಪದಲ್ಲಿಯೇ ವ್ಯಕ್ತಿಯೋರ್ವ ಕುರಿಗಳನ್ನು ಸಾಕುತ್ತಿವ ಬಗ್ಗೆ ಮಾಹಿತಿ ದೊರೆಯಿತು. ಹೀಗಾಗಿ ವ್ಯಕ್ತಿಯನ್ನು ಭೇಟಿ ಮಾಡಿ ವಿಚಾರಣೆ ನಡೆಸಿದಾಗ ಕುರಿ ನಿವಾಸ ಅದೇ ಎಂದು ತಿಳಿದುಬಂದಿದ್ದು, ನಂತರ ಮಾಲೀಕರಿಗೆ ಕುರಿಯನ್ನು ಹಿಂತಿರುಗಿಸಿದ್ದೇವೆ ಎಂದು ಸಾರ್ಜೆಂಟ್ ಬೈಲಿ ಮತ್ತು ಡೆಪ್ಯೂಟಿ ಚೀಫ್ ಮಿಲ್ಲರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾರು ಹೊಳೆಗೆ ಉರುಳಿದ ಪ್ರಕರಣ- ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಾರು ಪತ್ತೆ
Advertisement
ವೀಡಿಯೋದಲ್ಲಿ ಪೊಲೀಸ್ ವಾಹನದ ಹಿಂದಿನ ಸೀಟಿನಲ್ಲಿ ಕುರಿ ಕುಳಿತುಕೊಂಡು, ವಾಹನದ ಕಿಟಕಿಯಿಂದ ಇಣುಕಿ, ಪಿಳಿ-ಪಿಳಿ ಎಂದು ಕಣ್ಣು ಮಿಟುಕಿಸುತ್ತಾ ರಸ್ತೆಯಲ್ಲಿ ಓಡಾಡುವ ಜನರನ್ನು ಮುದ್ದು, ಮುದ್ದಾಗಿ ನೋಡುತ್ತಾ, ಜಾಲಿ ರೈಡ್ ಅನ್ನು ಎಂಜಾಯ್ ಮಾಡುತ್ತಿದೆ. ಮತ್ತೊಂದೆಡೆ ಕುರಿಯನ್ನು ನೋಡುತ್ತಾ ಪೊಲೀಸರು ನಗುತ್ತಿರುವ ಶಬ್ದವನ್ನು ಕೇಳಬಹುದಾಗಿದೆ.
Advertisement
Advertisement
ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋಗೆ ನೆಟ್ಟಿಗರು ಫಿದಾ ಆಗಿದ್ದು, 500ಕ್ಕೂ ಹೆಚ್ಚು ಲೈಕ್‍ಗಳು ಮತ್ತು ಹಲವಾರು ಕಾಮೆಂಟ್‍ಗಳು ಹರಿದುಬರುತ್ತಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಭರ್ತಿಗೆ 1 ಅಡಿ ಬಾಕಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ