ನಿತಿನ್, ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಟೀಸರ್‌ ಔಟ್-‌ ರಿಲೀಸ್‌ ಡೇಟ್‌ ಅನೌನ್ಸ್

Public TV
1 Min Read
sreeleela 1 3

ನ್ನಡದ ಭರಾಟೆ ಬ್ಯೂಟಿ ಶ್ರೀಲೀಲಾ (Sreeleela) ಮತ್ತು ನಿತಿನ್ ನಟನೆಯ ‘ರಾಬಿನ್‌ಹುಡ್‌’ (Robinhood) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ‘ರಾಬಿನ್‌ಹುಡ್’ ಸಿನಿಮಾದ ಹೊಸ ಬಿಡುಗಡೆ ಚಿತ್ರತಂಡ ತಿಳಿಸಿದೆ. ಮತ್ತೆ ರಿಲೀಸ್‌ ಡೇಟ್‌ ಅನ್ನು ಚಿತ್ರತಂಡ ಮುಂದಕ್ಕೆ ಹಾಕಿದೆ. ಇದನ್ನೂ ಓದಿ:BBK 11: ಧರ್ಮ ಜೊತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ ಐಶ್ವರ್ಯಾ

nithiin

‘ರಾಬಿನ್‌ಹುಡ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಿತಿನ್ ನಟನೆ, ಶ್ರೀಲೀಲಾ (Sreeleela) ಗ್ಲ್ಯಾಮರ್ ನೋಡುಗರಿಗೆ ಕಿಕ್ ಕೊಟ್ಟಿದೆ. 1:34 ಸೆಕೆಂಡಿನ ಟೀಸರ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವರ್ಷದ ಅಂತ್ಯ ಡಿ.25ಕ್ಕೆ ಶ್ರೀಲೀಲಾ ನಟನೆಯ ಈ ಚಿತ್ರ ರಿಲೀಸ್ ಆಗಲಿದೆ. ಈ ಹಿಂದೆ ಡಿ.20ಕ್ಕೆ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿತ್ತು. ಕಾರಣಾಂತರಗಳಿಂದ ಇನ್ನೂ 5 ದಿನ ಮುಂದಕ್ಕೆ ರಿಲೀಸ್ ದಿನಾಂಕವನ್ನು ಘೋಷಿಸಿದೆ ಚಿತ್ರತಂಡ.

ಈ ಹಿಂದೆ ಎಕ್ಸ್ಟಾಆರ್ಡಿನರಿ ಸಿನಿಮಾದಲ್ಲಿ ನಿತಿನ್, ಶ್ರೀಲೀಲಾ ಜೊತೆಯಾಗಿ ನಟಿಸಿದರು. `ರಾಬಿನ್‌ಹುಡ್’ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

Share This Article