ಹೈದರಾಬಾದ್: ಚಲಿಸುತ್ತಿದ್ದ ಎಸ್ಕಲೇಟರ್‌ನಿಂದ ಜಾರಿ ಬಿದ್ದು ಒಂಬತ್ತು ಮಕ್ಕಳು ಗಾಯಗೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
1982ರಲ್ಲಿ ಬಿಡುಗಡೆಯಾಗಿದ್ದ ಗಾಂಧಿ ಸಿನಿಮಾದ ಉಚಿತ ಪ್ರದರ್ಶನವನ್ನು ನಗರದ ಬಂಜಾರಾ ಹಿಲ್ಸ್‍ನ ಪಿವಿಆರ್ ಸಿನೆಪ್ಲೆಕ್ಸ್‍ನಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಈ ವೇಳೆ ಎಸ್ಕಲೇಟರ್‌ನಿಂದ ಜಾರಿ ಬಿದ್ದು ಮಕ್ಕಳು ಗಾಯಗೊಂಡಿದ್ದಾರೆ. ಇದೀಗ ಗಾಯಗೊಂಡಿರುವ ಮಕ್ಕಳನ್ನು ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ದ್ವೇಷದ ಕಸಕ್ಕೆ ಹೋಲಿಸಿದ ನಿರ್ದೇಶಕ ಡಿಲನ್ ಮೋಹನ್ ಗ್ರೇ
Advertisement
Advertisement
ತೆಲಂಗಾಣ ಸರ್ಕಾರವು ದೇಶಭಕ್ತಿ ಮತ್ತು ಸ್ವಾತಂತ್ರ್ಯ ಚಳವಳಿಯ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆಯನ್ನು ಮೂಡಿಸಲು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಸ್ಕ್ರೀನಿಂಗ್ ಕೂಡ ಒಂದಾಗಿದೆ. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುಮಾರು 22 ಲಕ್ಷ ಮಕ್ಕಳಿಗಾಗಿ 552 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಇದನ್ನೂ ಓದಿ : 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್ ಆಫರ್