ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತದಲ್ಲಿ ಸಖತ್ ಸದ್ದು ಮಾಡಿದ ಚಿತ್ರ. ಕಾಶ್ಮೀರ್ ಪಂಡಿತರ ಹತ್ಯೆಯನ್ನು ಆಧರಿಸಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ 200 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಸದ್ದು ಮಾಡಿತ್ತು. ಈ ಸಿನಿಮಾವನ್ನು ಪ್ರತಿಯೊಬ್ಬರೂ ನೋಡಲೇಬೇಕು ಎನ್ನುವ ಕಾರಣಕ್ಕಾಗಿ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ತೆರಿಗೆ ವಿನಾಯತಿ ಘೋಷಣೆ ಮಾಡಿದ್ದವು. ಅನೇಕರು ಈ ಸಿನಿಮಾ ಬಗ್ಗೆ ಕೊಂಡಾಡಿದ್ದರು. ಆದರೆ, ಇಲ್ಲೊಬ್ಬ ನಿರ್ದೇಶಕರು ಈ ಸಿನಿಮಾವನ್ನುಕಸಕ್ಕೆ ಹೋಲಿಸಿದ್ದಾರೆ.
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಆಸ್ಕರ್ ಪ್ರಶಸ್ತಿಗಾಗಿ ಕಳುಹಿಸುವ ಕುರಿತು ಭಾರೀ ಚರ್ಚೆ ನಡೆದಿದೆ. ಇದೇ ಸಂದರ್ಭದಲ್ಲಿ ಕೆನಡಾದ ಹೆಸರಾಂತ ನಿರ್ದೇಶಕ ಡಿಲನ್ ಮೋಹನ್ ಗ್ರೇ ಸಿನಿಮಾದ ಕಂಟೆಂಟ್ ಕುರಿತು ಕಟುವಾಗಿಯೇ ಟೀಕೆ ಮೂಡಿದ್ದಾರೆ. ಈ ಸಿನಿಮಾ ದ್ವೇಷ ಬಿತ್ತುವ ಕಸ ಎಂದು ನುಡಿದಿದ್ದಾರೆ. ಇಂತಹ ಸಿನಿಮಾಗಳಿಗೆ ಮಾನ್ಯತೆ ನೀಡಬಾರದು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಅವಘಡ: ಆಸ್ಪತ್ರೆ ಸೇರಿದ ಬಾಹುಬಲಿ ಬಿಜ್ಜಳದೇವ ಪಾತ್ರಧಾರಿ ನಾಸರ್
Advertisement
Advertisement
ದಿ ಕಾಶ್ಮೀರ್ ಫೈಲ್ಸ್ ಕಲಾತ್ಮಕ ಅರ್ಹತೆ ಇಲ್ಲದ ಸಿನಿಮಾ. ಇಂತಹ ಸಿನಿಮಾವೇನಾದರೂ ಆಸ್ಕರ್ ಯಾದಿಯಲ್ಲಿ ಕಾಣಿಸಿಕೊಂಡರೆ, ಅದು ಭಾರತಕ್ಕೆ ಆಗುವ ಅವಮಾನ ಎಂದೂ ಡಿಲನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇಂತಹ ಸಿನಿಮಾಗಳನ್ನು ಭಾರತದಂತಹ ಶಾಂತಿ ನಾಡಿನಲ್ಲಿ ಪೋಷಿಸಿದ್ದು ನನಗೆ ಅಚ್ಚರಿ ತಂದಿದೆ ಎಂದೂ ಅವರು ಬರೆದುಕೊಂಡಿದ್ದಾರೆ.