ಬಾಲಿವುಡ್ ನಟ ವಿಕ್ಕಿ ಕೌಶಲ್ ನಟನೆಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಅದರಲ್ಲೂ ವಿಕ್ಕಿಗೆ ಹೆಣ್ಣು ಮಕ್ಕಳ ಫ್ಯಾನ್ಸ್ ತುಸು ಜಾಸ್ತಿ. ಹೀಗಿರುವಾಗ ನೆಚ್ಚಿನ ನಟನನ್ನು ಭೇಟಿಯಾಗಲು ವಧು ಹಸೆಮಣೆ ಬಿಟ್ಟು ವಿಕ್ಕಿ ಕೌಶಲ್ ನೋಡಲು ಕಾಯುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
View this post on Instagram
ವಧು ವಿಕ್ಕಿ ಕೌಶಲ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಆ ಅಭಿಮಾನದಿಂದ ವರನು ಪೇಚಿಗೆ ಸಿಲುಕಿದ್ದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ವಿಕ್ಕಿ ಕೌಶಲ್ ತಂಗಿದ್ದ ಹೋಟೆಲ್ ಈಗ ತನ್ನ ಮದುವೆಯ ಸ್ಥಳ ಎಂದು ತಿಳಿದ ಮದುಮಗಳು ಹಸೆಮಣೆ ಏರಲು ನಿರಾಕರಿಸಿದ್ದಾಳೆ. ಮೊದಲು ನೆಚ್ಚಿನ ನಟ ವಿಕ್ಕಿ ಜೊತೆ ಭೇಟಿ, ಆಮೇಲೆ ಮದುವೆ ಅಂತಾ ಹಸೆಮಣೆ ಬಿಟ್ಟು ವಿಕ್ಕಿ ತಂಗಿದ್ದ ರೂಂ ಬಳಿ ಹೋಗಿದ್ದಾಳೆ. ನಟನ ಭೇಟಿಗಾಗಿ ವಧು ವಿಕ್ಕಿ ತಂಡದ ಜತೆ ಮಾತನಾಡಿದ್ದಾಳೆ. ಇದನ್ನೂ ಓದಿ:ಮತ್ತೆ ನಿರ್ದೇಶನದತ್ತ ಮುಖ ಮಾಡಿದ ಅಜಯ್ ದೇವಗನ್
View this post on Instagram
ಆದರೆ ಈ ಮೊದಲೇ ವಿಕ್ಕಿ ಚಿತ್ರೀಕರಣಕ್ಕಾಗಿ ಲೋಕೇಷನ್ಗೆ ಹೋಗಿದ್ದರು. ಹಾಗಾಗಿ ವಧು ವಿಕ್ಕಿ ಅನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಒಟ್ನಲ್ಲಿ ವಿಕ್ಕಿಗಾಗಿ ಕಾದು ಕೂತಿದ್ದ ವಧುಗೆ ನಿರಾಸೆಯಾಗಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.