ಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿರುವ ವಿದೇಶಿ ಒರಾಂಗೂಟಾನ್‍ಗಳಿಗೆ ಹೊಸದಾಗಿ ಮನೆಯನ್ನು ನಿರ್ಮಿಸಲಾಗಿದೆ.
Advertisement
ಬ್ಯಾಂಕ್ ನೋಟ್ ಪೇಪರ್ ಇಂಡಿಯಾ ವತಿಯಿಂದ ಸಿಎಸ್‍ಆರ್ ನಿಧಿಯಡಿ 70 ಲಕ್ಷ ರೂ. ನೆರವು ನೀಡಲಾಗಿತ್ತು. ಸುಮಾರು 1.2 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಇದನ್ನೂ ಓದಿ: ಕೋತಿಗಳಿಗೆ ಬಾಳೆಹಣ್ಣು ತಿನ್ನಿಸಿದ ಸಾರಿಗೆ ಸಚಿವ ಶ್ರೀರಾಮುಲು
Advertisement
ಬ್ಯಾಂಕ್ ನೋಟ್ ಪೇಪರ್ ಇಂಡಿಯಾದ ಅಧ್ಯಕ್ಷೆ ತೃಪ್ತಿ ಪಾತ್ರ ಘೋಷ್ ಅವರು ಈ ನೂತನ ಮನೆಯನ್ನು ಉದ್ಘಾಟಿಸಿದರು.
Advertisement
Advertisement
ಮಲೇಶಿಯಾ, ಸಿಂಗಾಪುರ್‍ನಿಂದ ತಂದಿರುವ 2 ಜೊತೆ ಒರಾಂಗೂಟಾನ್‍ಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ. ಮೃಗಾಲಯದಲ್ಲಿ ಅವುಗಳಿಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: 75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ
ಮನೆ ಉದ್ಘಾಟನೆ ವೇಳೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಉಪಸ್ಥಿತರಿದ್ದರು.