LatestMain PostNational

75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ

ಕೋಲ್ಕತ್ತಾ: ಸುಂದರ್ ಬನ್ಸ್ ನದಿಯಲ್ಲಿ ಸಿಕ್ಕಿಬಿದ್ದ 75 ಕೆಜಿಯ ದೈತ್ಯ ಮೀನನ್ನು 36 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದು ಸುದ್ದಿಯಾಗಿದೆ.

ಸುಮಾರು 7 ಅಡಿ ಉದ್ದ ಮತ್ತು 78.4 ಕಿಲೋ ತೂಕದ ದೈತ್ಯಾಕಾರದ ಟೆಲಿಯಾ ಭೋಲಾ ಮೀನು ಇದಾಗಿದೆ. ಈ ಬೃಹತ್ ಗಾತ್ರದ ಮೀನು ಹಿಡಿದ 5 ಜನ ಮೀನುಗಾರರಿಗೆ ಆಶ್ಚರ್ಯವಾಗಿತ್ತು. ತಮ್ಮ ಬಲೆಗೆ ಸಿಕ್ಕಿಬಿದ್ದ ಬೃಹತ್ ಮೀನುಗಳನ್ನು ಮೇಲಕ್ಕೆ ಎಳೆದು ತಂದಿದ್ದರು. ಈ ಬೃಹತ್ ಮತ್ತು ಅಪರೂಪದ ಮೀನನ್ನು ನೋಡಲು ಸ್ಥಳೀಯರು ಜಮಾಯಿಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮಳೆ ಅವಾಂತರ- ಹೂ ತೋಟಗಳು ಜಲಾವೃತ

75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ

ಬಲೆಗೆ ಬಿದ್ದ ದೈತ್ಯ ಮೀನನ್ನು ಮೀನುಗಾರರು ಸಂಜೆ ಕ್ಯಾನಿಂಗ್ ಮಾರುಕಟ್ಟೆಗೆ ಹರಾಜಿಗಾಗಿ ತಂದರು. ಇದೇ ಮೊದಲ ಬಾರಿಗೆ ಇಷ್ಟೊಂದು ಬೃಹತ್ ಗಾತ್ರದ ಮೀನನ್ನು ಹರಾಜಿಗಾಗಿ ಮಾರುಕಟ್ಟೆಗೆ ತರಲಾಗಿದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ. ಈ ಮೀನನ್ನು 36, 53,605 ರೂಪಾಯಿಗೆ ಹರಾಜು ಮಾಡಲಾಗಿದ್ದು, ಕೋಲ್ಕತ್ತಾ ಮೂಲದ ಕೆಎಂಪಿ ಎಂಬ ಮೀನು ವ್ಯಾಪಾರ ಕಂಪನಿ ಅದನ್ನು ಖರೀದಿಸಿದೆ ಎಂದು ಖಾಸಗಿವಾಹಿನಿಯೊಂದು ವರದಿ ಮಾಡಿದೆ. ಇದನ್ನೂ ಓದಿ: ಬೆಂಗಳೂರು ನಗರ ಸೇರಿ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ

ಈ ಮಾರುಕಟ್ಟೆಯಲ್ಲಿ ಅಂತಹ ದೈತ್ಯ ಮೀನನ್ನು ನಾವು ನೋಡಿರಲಿಲ್ಲ. ಹರಾಜಿನಲ್ಲಿ ಪ್ರತಿ ಕಿಲೋಗೆ ರೂ.47,880 ದರದಲ್ಲಿ ಮೀನನ್ನು ಮಾರಾಟ ಮಾಡಲಾಗಿದೆ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

ಈ ಮೀನು ತುಂಬಾ ದುಬಾರಿ ಯಾಕೆ?: ಮೀನುಗಾರರ ಪ್ರಕಾರ, ಆಡುಮಾತಿನಲ್ಲಿ ಟೆಲಿಯಾ ಭೋಲಾ ಎಂದು ಕರೆಯಲ್ಪಡುವ ಈ ದೈತ್ಯ ಮೀನು ಅಪಾರ ಪ್ರಮಾಣದ ಔಷಧೀಯ ಮೌಲ್ಯವನ್ನು ಹೊಂದಿದೆ. ಮೀನಿನ ಹೊಟ್ಟೆಯಲ್ಲಿ ಕೆಲವು ಅಮೂಲ್ಯವಾದ ಸಂಪನ್ಮೂಲಗಳಿವೆ ಎಂದು ಹೇಳಲಾಗುತ್ತದೆ. ಅದು ತುಂಬಾ ದುಬಾರಿಯಾಗಿದೆ. ಈ ಮೀನು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಲು ರಫ್ತು ಮಾಡಲಾಗುತ್ತದೆ ಎಂದಿದ್ದಾರೆ.

75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ

ಇತ್ತೀಚೆಗೆ, ಮಹಾರಾಷ್ಟ್ರದ ಪಾಲ್ಘರ್‍ನಲ್ಲಿ ಮೀನುಗಾರರೊಬ್ಬರು 1.33 ಕೋಟಿ ಮೌಲ್ಯದ 157 ಘೋಲ್ ಮೀನುಗಳನ್ನು ಹಿಡಿದಿದ್ದರು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಘೋಲ್ ಮೀನು ವಿಶ್ವದ ಅತ್ಯಂತ ದುಬಾರಿ ಸಮುದ್ರ ಮೀನುಗಳಲ್ಲಿ ಒಂದಾಗಿದೆ. ಪೂರ್ವ ಏಷ್ಯಾದಲ್ಲಿ ಮೀನನ್ನು ಅದರ ಔಷಧೀಯ ಗುಣಗಳಿಗಾಗಿ ಪ್ರಶಂಶಿಸಲಾಗುತ್ತದೆ.

Related Articles

Leave a Reply

Your email address will not be published. Required fields are marked *