ನವದೆಹಲಿ: 2024 ರ ಜಿ20 ಶೃಂಗಸಭೆಯ (G20 Summit) ಅಧ್ಯಕ್ಷತೆಯನ್ನು ಬ್ರೆಜಿಲ್ (Brazil) ದೇಶ ವಹಿಸಿಕೊಂಡಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಜಿ20 ಶೃಂಗಸಭೆಯ ಅಧ್ಯಕ್ಷತೆ ಜವಾಬ್ದಾರಿಯನ್ನು ಬ್ರೆಜಿಲ್ ದೇಶದ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ.
ಜಿ20 ಶೃಂಗಸಭೆಯ ಭಾಗವಾಗಿ 2ನೇ ದಿನದಂದು (ಭಾನುವಾರ) ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ ವಿಶ್ವ ನಾಯಕರು ದೆಹಲಿಯಲ್ಲಿರುವ ರಾಜ್ಘಾಟ್ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ನಡೆದ ಅಧಿವೇಶನದಲ್ಲಿ ಪ್ರಧಾನಿ ಮೋದಿ (Narendra Modi) ಅವರು ಮುಂದಿನ ವರ್ಷದ ಜಿ20 ಅಧ್ಯಕ್ಷತೆ ಜವಾಬ್ದಾರಿ ಹೊರಲು ಬ್ಯಾಟನ್ ಅನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (Luiz Inacio Lula da Silva) ಅವರಿಗೆ ನೀಡಿದ್ದಾರೆ. ಇದನ್ನೂ ಓದಿ: G-20 Summitː ಶಿಷ್ಟಾಚಾರ ಉಲ್ಲಂಘನೆ – ಜೋ ಬೈಡನ್ ಬೆಂಗಾವಲು ವಾಹನ ಚಾಲಕ ವಶಕ್ಕೆ
ಸೆಪ್ಟೆಂಬರ್ 9 ರಂದು ನವದೆಹಲಿಯ ಭಾರತ್ ಮಂಟಪಂ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕನ್ವೆನ್ಷನ್ ಸೆಂಟರ್ನಲ್ಲಿ G20 ನಾಯಕರ ಶೃಂಗಸಭೆಗೆ ಚಾಲನೆ ನೀಡಲಾಗಿತ್ತು. ಜಿ20 ನಾಯಕರು ಆಫ್ರಿಕಾ ಒಕ್ಕೂಟವನ್ನು ಖಾಯಂ ಸದಸ್ಯರನ್ನಾಗಿ ತಮ್ಮ ಗುಂಪಿಗೆ ಸ್ವಾಗತಿಸಿದರು.
G20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಭಾರತವು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಧ್ಯೇಯವಾಕ್ಯ ಈ ವರ್ಷದ ಶೃಂಗಸಭೆಯ ವಿಷಯ ಎಂದು ಪ್ರತಿಪಾದಿಸಿದೆ. ಇದನ್ನೂ ಓದಿ: G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ
Web Stories