ಕಠ್ಮಂಡು: ನೇಪಾಳದಲ್ಲಿ (Nepal) ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಾಗ್ಮತಿ ನದಿಯು (Bagmati River) ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ದಂಡೆಯ ತಗ್ಗು ಪ್ರದೇಶಗಳಲ್ಲಿ ಆತಂಕ ಮನೆಮಾಡಿದೆ. ಇದರ ಬೆನ್ನಲ್ಲೇ ನೇಪಾಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಧಾರಾಕಾರ ಮಳೆಯಿಂದಾಗಿ ಬಾಗ್ಮತಿ ನದಿಯು ಉಕ್ಕಿ ಹರಿಯುತ್ತಿದ್ದು, ಇದರಿಂದ ಪ್ರವಾಹ ಹಾಗೂ ಭೂಕುಸಿತದ ಭೀತಿ ಎದುರಾಗಿದೆ. ಹೀಗಾಗಿ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಗ್ಮತಿ ನದಿಯು ಉಕ್ಕಿ ಹರಿಯುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ಆಟೋಮೊಬೈಲ್ ಕ್ಷೇತ್ರದ ಟೆಸ್ಟಿಂಗ್ ಸೌಲಭ್ಯ ಅಭಿವೃದ್ಧಿಗೆ 780 ಕೋಟಿ ಮೀಸಲು:ಹೆಚ್‌ಡಿಕೆ
ಇನ್ನೂ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕಠ್ಮಂಡುವನ್ನು ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಭೂಕುಸಿತ ಮತ್ತು ಪ್ರವಾಹದಿಂದಾಗಿ ಬಂದ್ ಆಗಿವೆ. ಅಲ್ಲದೇ ಕೆಲವೆಡೆ ವಾಹನಗಳು ರಸ್ತೆಯಲ್ಲಿಯೇ ಸಿಲುಕಿಕೊಂಡಿವೆ ಎಂದು ವರದಿಯಾಗಿದೆ.
#WATCH | Kathmandu, Nepal: The swollen Bagmati River overflows its banks following persistent heavy rainfall, triggering a high alert in low-lying riverside communities.
Key arterial highways connecting Kathmandu to the rest of the country, including the Prithvi Highway, BP… pic.twitter.com/VTRx4F5dgu
— ANI (@ANI) September 25, 2026
ನಿರಂತರ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ತೀರದ ವಸತಿ ಪ್ರದೇಶಗಳು ಅಪಾಯಕ್ಕೆ ಸಿಲುಕಿವೆ. ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಪ್ರವಾಹದ ಎಚ್ಚರಿಕೆ ನೀಡಿಲಾಗಿದೆ. ಜೊತೆಗೆ ನದಿಯ ಸಮೀಪ ವಾಸಿಸುವವರು ಹಾಗೂ ಭೂಕುಸಿತ ಸಂಭವಿಸುವ ಸೂಕ್ಷ್ಮ ಪ್ರದೇಶಗಳಲ್ಲಿರುವ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.ಇದನ್ನೂ ಓದಿ: ಭಯೋತ್ಪಾದನೆಗೆ ಪಿತೂರಿ ಪ್ರಕರಣ – ಚಿಕ್ಕಬಳ್ಳಾಪುರ ಪೊಲೀಸರಿಂದ ಮತ್ತೋರ್ವನ ಬಂಧನ
ಕೋಶಿ, ಬಾಗ್ಮತಿ, ಗಂಡಕಿ, ಲುಂಬಿನಿ ಮತ್ತು ಕರ್ನಾಲಿ ಪ್ರಾಂತ್ಯಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹನ್ನೆರಡು ಜಿಲ್ಲೆಗಳನ್ನು ಪ್ರವಾಹದ ಹೈ ರಿಸ್ಕ್ ಪಟ್ಟಿಯಲ್ಲಿ ಇರಿಸಲಾಗಿದ್ದು, ಸಣ್ಣ ನದಿಗಳಲ್ಲಿ ನೀರಿನ ಮಟ್ಟ ವೇಗವಾಗಿ ಏರಿ ಹಠಾತ್ ಪ್ರವಾಹ ಉಂಟಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ಸಿದ್ದರಾಮಯ್ಯರನ್ನು ವಿಲನ್ ಮಾಡಲು ಡಿಕೆಶಿಯಿಂದ ಆರ್ಥಿಕ ಇಲಾಖೆ ಪತ್ರ ಲೀಕ್: ಅಶೋಕ್

