– ಭಾರತದಾದ್ಯಂತ ಪರೀಕ್ಷಾ ಮೂಲಸೌಕರ್ಯವನ್ನು ನವೀಕರಿಸಲು ಯೋಜನೆ
ಮಾನೇಸರ್: ಆಟೋಮೊಬೈಲ್ (Automobile) ಕ್ಷೇತ್ರದ ಕ್ಷಮತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ರಾಷ್ಟ್ರದಲ್ಲಿರುವ ಎಲ್ಲಾ ಟೆಸ್ಟಿಂಗ್ ಏಜೆನ್ಸಿಗಳ ತಾಂತ್ರಿಕತೆಯನ್ನು ಮೇಲ್ದದ್ದುಗೇರಿಸುವುದಕ್ಕಾಗಿ 780 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರು ತಿಳಿಸಿದರು.
ಹರಿಯಾಣದ ಮಾನೇಸರ್ ನಲ್ಲಿರುವ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ ಕೇಂದ್ರ (ICAT) ಕೇಂದ್ರದಲ್ಲಿ ಸಂಸ್ಥೆಯ 20ನೇ ವಾರ್ಷಿಕೋತ್ಸವ ಕಾರ್ಯಕ್ರಮ (ICAT@20) ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಆಟೋಮೊಬೈಲ್ ಕ್ಷೇತ್ರ ಸಶಕ್ತವಾಗಿ ಬೆಳೆಯುವ ದಿಸೆಯಲ್ಲಿ ಟೆಸ್ಟಿಂಗ್ ಏಜೆನ್ಸಿಗಳ ಪತ್ರ ದೊಡ್ಡದು. ಹೀಗಾಗಿ ಅವುಗಳನ್ನು ಉನ್ನತೀಕರಿಸುವ ಕೆಲಸ ಮಾಡುತ್ತಿದ್ದೇವೆ. ಸಾಂಪ್ರದಾಯಿಕ ಇಂಧನ ಚಾಲಿತ ವಾಹನಗಳ ಜತೆಗೆ ಎಲೆಕ್ಟ್ರಿಕ್ ವಾಹನಗಳು(Electric Vehicle) ಕೂಡ ದೊಡ್ಡ ಪ್ರಮಾಣದಲ್ಲಿ ರಸ್ತೆಗಳಿಗೆ ಲಗ್ಗೆ ಇಡುತ್ತಿದ್ದು, ಈ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಮೂಲಸೌರ್ಯ ಮತ್ತಷ್ಟು ಮೇಲ್ದರ್ಜೆಗೆ ಏರಿಸಲು ನಾವು ಉದ್ದೇಶಿಸಿದ್ದೇವೆ ಎಂದು ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ದೂರದೃಷ್ಟಿ ನಾಯಕತ್ವದಲ್ಲಿ ನಾವು ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಕಾರ್ಯಗತ ಮಾಡುತ್ತಿದ್ದೇವೆ. ಪುಣೆಯ ಆಟೋಮೋಟಿವ್ ಸಂಶೋಧನಾ ಕೇಂದ್ರ (ARAI), ಮಾನೇಸರ್ ನಲ್ಲಿರುವ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ ಕೇಂದ್ರ, ಚೆನ್ನೈನಲ್ಲಿರುವ ಗಾರ್ಕ್ (ಗ್ಲೋಬಲ್ ಆಟೋಮ್ಯಾಟಿವ್ (GARC), ಕಾಶ್ಮೀರದಲ್ಲಿರುವ ರಾಷ್ಟ್ರೀಯ ಆಟೋಮೋಟಿವ್ ಟ್ರ್ಯಾಕ್ಸ್ (NATRAX) ಸಂಸ್ಥೆಗಳ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಟೆಸ್ಟಿಂಗ್ ವ್ಯವಸ್ಥೆಯ ಪೂರಕ ವ್ಯವಸ್ಥೆಯನ್ನು ಬಲಪಡಿಲಾಗುವುದು ಎಂದು ಸಚಿವರು ನುಡಿದರು. ಇದನ್ನೂ ಓದಿ: ರೈತರ ಪರವಾಗಿ ಜೈಲಿಗೆ ಹೋಗಲು ನಾನು ಸಿದ್ಧ: ಬಿಡದಿ ಟೌನ್ಶಿಪ್ ರೈತರಿಗೆ ಧೈರ್ಯ ತುಂಬಿದ ಹೆಚ್ಡಿಡಿ
ಮಾನೇಸರ್ನಲ್ಲಿರುವ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ ಕೇಂದ್ರವು ಭಾರತದ ವ್ಯೂಹಾತ್ಮಕ ಟೆಸ್ಟಿಂಗ್ ಏಜೆನ್ಸಿ ಆಗಿದ್ದು, ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಸಂಸ್ಥೆಯು ಅಪಾರ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದೆ. ಲಾಭದ ದಿಕ್ಕಿನಲ್ಲಿ ಮುನ್ನೆಡೆಯುತ್ತಾ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಮಾಡುತ್ತಿದೆ ಎಂದು ಹೇಳಿದರು ಸಚಿವರು.
ಈ ಸಂಸ್ಥೆಯು ಭಾರತದ ಆಟೋಮೋಟಿವ್ ಪರೀಕ್ಷೆ, ಪ್ರಮಾಣೀಕರಣ, ಸಂಶೋಧನೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಎರಡು ದಶಕಗಳ ಅವಿರತ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಬೃಹತ್ ಕೈಗಾರಿಕಾ ಸಚಿವಾಲಯವು ಭಾರತದ ಆಟೋಮೊಬೈಲ್ ಕ್ಷತ್ರದ ನಕ್ಷೆಯನ್ನು ಮರು ರಾಜ್ಯ ರೂಪಿಸುತ್ತಿದೆ ಎಂದು ಪ್ರತಿಪಾದಿಸಿದ ಅವರು; ಮುಂಬರುವ ದಶಕಗಳಲ್ಲಿ ಭಾರತವು ಈ ಕ್ಷೇತ್ರದಲ್ಲಿ ಗಣನೀಯ ಮುನ್ನಡೆ ಸಾಧಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರು; ಐಸಿಎಟಿಯಲ್ಲಿ ಅಭಿವೃದ್ಧಿಪಡಿಸಲಾದ ಲೋಡ್ ಕಾರ್ ಮತ್ತು ಕೃಷಿ ಯಂತ್ರ ಪರೀಕ್ಷಾ ಸೌಲಭ್ಯದ ಉದ್ಘಾಟನೆ ಮತ್ತು ಲಿಫ್ಟ್ ಕೆಪಾಸಿಟಿ ಫೆಸಿಲಿಟಿಯನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಬೃಹತ್ ಕೈಗಾರಿಕೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹನೀಫ್ ಖುರೇಷಿ, ಐಸಿಎಟಿ ನಿರ್ದೇಶಕ ಸೌರಭ ದಲೀಲ ಮುಂತಾದವರು ಭಾಗಿಯಾಗಿದ್ದರು.

