ನವದೆಹಲಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ (Karnataka) ಸಂಚು ನಡೆಸ್ತಿದೆ. ಮಹಾರಾಷ್ಟ್ರದ (Maharashtra) ಸಮಗ್ರತೆಗೆ ಧಕ್ಕೆ ತರುವಂತಹ ಹೇಳಿಕೆಯನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡುತ್ತಿದ್ದಾರೆ ಎಂದು ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ (Supriya Sule) ಮೊದಲ ದಿನವೇ ಸಂಸತ್‍ನಲ್ಲಿ (Lokasabha) ಗುಡುಗಿದ್ದಾರೆ.
ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಪದೇಪದೇ ಬಾಲ ಬಿಚ್ಚುತ್ತಿದೆ. ಹಿರೇಬಾಗೇವಾಡಿ ಘಟನೆ ಬಗ್ಗೆ ಕೇಂದ್ರಕ್ಕೆ ಫಡ್ನಾವೀಸ್ ದೂರು ಕೊಟ್ಟಿದ್ದಾರೆ. ಎಂಎನ್‍ಎಸ್ ಮತ್ತು ಶಿವಸೇನೆಯವರು ಪುಂಡಾಟ ಮೆರೆಯುತ್ತಿದ್ದಾರೆ. ಇನ್ನು, ದಾಳಿ ನಿಲ್ಲಿಸದಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಕರ್ನಾಟಕಕ್ಕೆ ಶರದ್ ಪವಾರ್ ವಾರ್ನಿಂಗ್ ನೀಡುತ್ತಿದ್ದಾರೆ. ಇದೀಗ ಮೊದಲ ದಿನದ ಸಂಸತ್‍ನಲ್ಲಿ ಸಂಸದೆ ಸುಪ್ರಿಯಾ ಸುಳೆಯವರೂ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಗಡಿಯಲ್ಲಿ ಮಹಾರಾಷ್ಟ್ರಿಗರ ಮೇಲೆ ಕರ್ನಾಟಕ ದಾಳಿ ನಡೆಸ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಗೃಹಮಂತ್ರಿ ಅಮಿತ್ ಶಾ ಮಧ್ಯಪ್ರವೇಶ ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ. ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್
ಇದಕ್ಕೆ ಶಿವಕುಮಾರ್ ಉದಾಸಿ ತಿರುಗೇಟು ನೀಡಿದ್ದಾರೆ. ಗಡಿ ಕ್ಯಾತೆ ತೆಗೆದಿದ್ದೇ ಅವರು, ಸುಮ್ನೆ ಕನ್ನಡಿಗರ ಮೇಲೆ ಗೂಬೆ ಕೂರಿಸ್ತಿದ್ದಾರೆ ಎಂದಿದ್ದಾರೆ. ಆದರೆ, ಅದ್ಯಾಕೋ ಏನೋ ಬೊಮ್ಮಾಯಿ ಸರ್ಕಾರ ಮಾತ್ರ ಶಾಂತಿ ಮಂತ್ರ ಪಠಿಸುತ್ತಿದೆ. ಸಿಎಂ ಜೊತೆ ಚರ್ಚೆ ಬಳಿಕ ಮಾತಾಡಿದ ಸಚಿವ ಗೋವಿಂದ ಕಾರಜೋಳ ಅವರು ಕೂಡ, ಮಹಾರಾಷ್ಟ್ರದ ಪುಂಡರನ್ನು ತೆಗಳೋದಿಕ್ಕಿಂತಲೂ ಹೆಚ್ಚಾಗಿ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿದಂತೆ ಕಂಡುಬಂತು. ಸಿದ್ದರಾಮಯ್ಯ ಬಯಸಿದಂತೆ ರಾಜಕೀಯ ಮಾಡೋಕೆ ಬಿಜೆಪಿ ಸಿದ್ಧವಿಲ್ಲ. ಯಾವಾಗ ಸಭೆ ಕರೆಯಬೇಕು ಅಂತ ನಮಗೆ ಗೊತ್ತಿದೆ ಎಂದರು. ಇನ್ನು, ಸಿಟಿ ರವಿ ಎಂದಿನಂತೆ, ನಾವೆಲ್ಲಾ ಭಾರತೀಯರು ಎಂಬ ಭಾವನೆ ಇಟ್ಕೊಂಡು ಕೆಲಸ ಮಾಡ್ಬೇಕು ಅಂತಾ ಬೋಧಿಸಿದರು. ಪಾರಿವಾಳ ಹಿಡಿಯಲು ಹೋಗಿ ಕರೆಂಟ್ ಶಾಕ್ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಬಾಲಕ ಸಾವು