ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayantara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಡಿವೋರ್ಸ್ ವಿಚಾರ ಭಾರೀ ಸದ್ದು ಮಾಡಿತ್ತು. ಸೋಷಿಯಲ್ ಮೀಡಿಯಾದಲ್ಲಂತೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೂ, ಈ ಕುರಿತಂತೆ ಇಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ. ಸತ್ಯ ಅಥವಾ ಸುಳ್ಳು ಅಂತಾನೂ ಸ್ಪಷ್ಟ ಪಡಿಸಲಿಲ್ಲ. ಆದರೆ, ಇದೀಗ ನಯನತಾರಾ ಈ ಕುರಿತಂತೆ ರಿಯ್ಯಾಕ್ಟ್ ಮಾಡಿದ್ದಾರೆ. ಹಾರ್ಟ್ ಸಿಂಬಲ್ ಹಾಕಿ, ಅಭಿಮಾನಿಗಳ ಹಾರ್ಟ್ ಬಿಟ್ ಹೆಚ್ಚಿಸಿದ್ದಾರೆ.
ಕೊಳಲು ವಾದಕ ನವೀನ್ ಎನ್ನುವವರು ತಾವು ಕೊಳಲು ನುಡಿಸುತ್ತಿರುವ ಮತ್ತು ಅದನ್ನು ತನ್ಮತೆಯಿಂದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೇಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ನಯನತಾರಾ ಶೇರ್ ಮಾಡುವ ಮೂಲಕ ಹಾರ್ಟ್ ಸಿಂಬಲ್ ಹಾಕಿದ್ದಾರೆ. ಅಲ್ಲಿಗೆ ತಮ್ಮ ಜೀವನದಲ್ಲಿ ಯಾವುದೇ ಡಿವೋರ್ಸ್ ಬಿರುಗಾಳಿ ಎದ್ದಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.
ತಮಿಳಿನ ಬೆಸ್ಟ್ ಕಪಲ್ ಆಗಿ ಹೈಲೆಟ್ ಆಗಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಳಲ್ಲಿ ಬಿರುಗಾಳಿ ಬೀಸಿದ್ಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ನಟಿ ನಯನತಾರಾ ಅವರು ಪತಿ ವಿಘ್ನೇಶ್ರನ್ನು ಇನ್ಸ್ಟಾದಲ್ಲಿ ಅನ್ಫಾಲೋ ಮಾಡಿದ್ದರಿಂದ ಇಂಥದ್ದೊಂದು ಪ್ರಶ್ನೆ ಮೂಡಿತ್ತು.
ಪತ್ನಿಯನ್ನು ವಿಘ್ನೇಶ್ ಫಾಲೋ ಮಾಡ್ತಿದ್ದಾರೆ. ಆದರೆ ನಯನತಾರಾ ಅನ್ಫಾಲೋ ಮಾಡಿ ಫುಲ್ ಸೈಲೆಂಟ್ ಆಗಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ನಟಿ ಅಳಲು ತೋಡಿಕೊಂಡಿದ್ದರು. ‘ಕಣ್ಣಲ್ಲಿ ನೀರು ಬರುತ್ತಿದ್ದರೂ ಇದು ನನಗೆ ಸಿಕ್ಕಿತು’ ಎಂದು ಬರೆದುಕೊಂಡಿದ್ದರು. ಇಬ್ಬರ ನಡುವೆ ಇದೀಗ ಬಿರುಕು ಮೂಡಿದೆ ಎನ್ನಲಾಗುತ್ತಿತ್ತು. ಡಿವೋರ್ಸ್ಗೆ (Divorce) ಈ ಜೋಡಿ ಮುಂದಾಗಿದೆ ಎಂದೇ ಹೇಳಲಾಗುತ್ತಿತ್ತು.
ಹಲವು ವರ್ಷಗಳು ಪ್ರೀತಿಸಿ, ಕಳೆದ ವರ್ಷ ಜೂನ್ನಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಅದ್ಧೂರಿಯಾಗಿ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಖುಷಿ ಖುಷಿಯಿಂದ ಬದುಕುತ್ತಿದ್ದ ಈ ಜೋಡಿ ಈಗ ಬೇರೇ ಆಗ್ತಾರೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದ್ದಂತೆ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದರು. ಇದೀಗ ಎಲ್ಲದಕ್ಕೂ ಸುಖಾಂತ್ಯವಾಗಿದೆ.