ಮೊನ್ನೆಯಷ್ಟೇ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದಿದ್ದ ತಮಿಳಿನ ಖ್ಯಾತ ನಟಿ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan), ಇದೀಗ ದೀಪಾವಳಿ ದಿನದಂದು ಮಕ್ಕಳನ್ನು (children) ಮನೆಗೆ ಬರಮಾಡಿಕೊಂಡಿದ್ದಾರೆ. ತಮ್ಮ ಮನೆಯ ನೂತನ ಸದಸ್ಯರ ಜೊತೆ ದೀಪಾವಳಿಯನ್ನು ಸಡಗರದಿಂದ ಆಚರಿಸಿದ್ದಾರೆ.
ಅವಳಿ ಮಕ್ಕಳನ್ನು ಎತ್ತಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ದಂಪತಿ, ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಈ ದೀಪಾವಳಿ ಎಂದೆಂದಿಗೂ ಮರೆಯದ ದೀಪಾವಳಿ ಎಂದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಈ ಸ್ಟಾರ್ ದಂಪತಿಗೆ ಶುಭಾಶಯ ಹೇಳಿದ್ದು, ಮಕ್ಕಳ ಮುಖವನ್ನು ಯಾವಾಗ ತೋರಿಸುತ್ತೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಇತ್ತೀಚೆಗಷ್ಟೇ ತಾವು ಬಾಡಿಗೆ ತಾಯಿ (surrogate mother) ಮೂಲಕ ಮಗುವನ್ನು ಪಡೆದಿರುವ ವಿಚಾರವನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ನಂತರ ತಮಗೆ ಅವಳಿ ಮಕ್ಕಳಾದ ವಿಚಾರವನ್ನೂ ಶೇರ್ ಮಾಡಿದ್ದರು. ಬಾಡಿಗೆ ತಾವು ವಿಚಾರವು ಸಖತ್ ಸದ್ದು ಮಾಡಿತ್ತು. ಅಲ್ಲದೇ, ಬಾಡಿಗೆ ತಾಯಿ ವಿಚಾರವಾಗಿ ಸ್ಟಾರ್ ದಂಪತಿ ವಿಚಾರಣೆ ಮಾಡಬೇಕು ಎಂದು ತಮಿಳು ನಾಡು ಸರಕಾರ ಸೂಚಿಸಿತ್ತು. ಕ್ರಮಬದ್ಧವಾಗಿ ಮಕ್ಕಳನ್ನು ಪಡೆದಿದ್ದಾರಾ ಎನ್ನುವ ಪ್ರಶ್ನೆಯನ್ನೂ ಮಾಡಿತ್ತು.
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಸ್ಟಾರ್ ದಂಪತಿ, ಕಳೆದ ಐದಾರು ವರ್ಷಗಳಿಂದ ಸಹಜ ಜೀವನ ನಡೆಸುತ್ತಿದ್ದರು. ಆರೇಳು ತಿಂಗಳ ಹಿಂದೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲೇ ತಾವು ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆದರು. ಇದೀಗ ಖುಷಿಯಾಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.