ನವರಾತ್ರಿ ಹಬ್ಬಕ್ಕೆ ಮನೆಲಿ ಮಾಡಿ ಸೋರೆಕಾಯಿ ಹಲ್ವಾ

Public TV
1 Min Read
Bottle gourd halwa

ಸಿಹಿ ಅಡುಗೆ ಇದ್ದರೆ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಕಳೆ ಬರುತ್ತದೆ. ನವರಾತ್ರಿ ಹಬ್ಬವನ್ನು 9 ದಿನ ಆಚರಣೆ ಮಾಡುವುದರಿಂದ ಪ್ರತಿ ದಿನ ಒಂದೊಂದು ಬಗೆಯ ಸಿಹಿ ಅಡುಗೆಯನ್ನು ಮಾಡುವುದು ಸಾಮಾನ್ಯ. ಹಬ್ಬಕ್ಕೆ ಸ್ಪೆಷಲ್ ಮತ್ತು ರುಚಿಯಾಗಿ ಸಿಹಿ ತಿಂಡಿ ಮಾಡಬೇಕು ಯೋಚನೆ ಮಾಡುತ್ತೀರುವ ನಿಮಗೆ ನಾವು ಇಂದು ಸೋರೆಯಾಯಿ ಹಲ್ವವನ್ನು ಮಾಡುವುದನ್ನು ವಿವರಿಸಿದ್ದೇವೆ. ದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

Bottle gourd halwa 3

ಬೇಕಾಗುವ ಸಾಮಗ್ರಿಗಳು:
* ಸೋರೆಕಾಯಿ- 2ಕಪ್
* ಹಾಲು- ಒಂದೂವರೆ ಕಪ್
* ಕೋವಾ- ಅರ್ಧ ಕಪ್
* ತುಪ್ಪ- 4 ಟೀ ಚಮಚ
* ಏಲಕ್ಕಿ ಪುಡಿ- ಅರ್ಧ ಚಮಚ
* ಸಕ್ಕರೆ- 2ಕಪ್
*ದ್ರಾಕ್ಷಿ, ಗೋಡಂಬಿ- ಅರ್ಧ ಕಪ್ ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

Bottle gourd halwa 1
ಮಾಡುವ ವಿಧಾನ:
* ಒಂದು ತವಾಗೆ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಬೇಕು.

Bottle gourd halwa 2

* ನಂತರ ಅದೇ ಪಾತ್ರೆಗೆ ಹಾಲು, ತುರಿದ ಸೋರೆಕಾಯಿ ಹಾಕಿ ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

* ಈಗ ಸಕ್ಕರೆ, ಏಲಕ್ಕಿ, ಕೋವಾ, ತುಪ್ಪ, ಹುರಿದ ಒಣ ದ್ರಾಕ್ಷಿ, ಗೋಡಂಬಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಗಟ್ಟಿಯಾಗಿ ಬರುವವರೆಗೆ ಬೇಯಿಸಿದರೆ ರುಚಿಯಾದ ಹಲ್ವಾ ಸವಿಯಲು ಸಿದ್ಧವಾಗುತ್ತದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *