ಜಗನ್ಮಾತೆ ದುರ್ಗೆಯ ಐದನೇ ಸ್ವರೂಪವನ್ನು ‘ಸ್ಕಂದಮಾತಾ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಭಗವಾನ್ ಸ್ಕಂದನು ‘ಕುಮಾರ ಕಾರ್ತಿಕೇಯ’ ಎಂಬ ಹೆಸರಿನಿಂದಲೂ ತಿಳಿಯಲ್ಪಡುತ್ತಾನೆ. ಇವನು ಪ್ರಸಿದ್ಧ ತಾರಕನ ಜೊತೆಗಿನ ಸಂಗ್ರಾಮದಲ್ಲಿ ದೇವತೆಗಳ ಸೇನಾಪತಿಯಾಗಿದ್ದನು. ಪುರಾಣಗಳಲ್ಲಿ ಇವನನ್ನು ಕುಮಾರ ಹಾಗೂ ಶಕ್ತಿಧರ ಎಂದು ಹೇಳಿ ಇವನ ಮಹಿಮೆಯನ್ನು ವರ್ಣಿಸಲಾಗಿದೆ. ನವಿಲನ್ನು ವಾಹನವಾಗಿ ಬಳಸುವ ಕಾರಣ ಈತನನ್ನು ‘ಮಯೂರವಾಹನ’ ಎಂದೂ ಕರೆಯುತ್ತಾರೆ.
ಸ್ಕಂದನ ತಾಯಿಯಾದ್ದರಿಂದ ದುರ್ಗೆಯ ಈ ಐದನೇ ಸ್ವರೂಪವನ್ನು ‘ಸ್ಕಂದಮಾತಾ’ ಎಂದು ಕರೆಯಲಾಗುತ್ತದೆ. ನವರಾತ್ರಿಯ ಐದನೇ ದಿನ ಇವಳ ಉಪಾಸನೆ ಮಾಡಲಾಗುತ್ತದೆ. ಈ ದಿನ ಸಾಧಕನ ಮನಸ್ಸು ವಿಶದ್ಧ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ಇವಳ ವಿಗ್ರಹದಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಇವಳ ತೊಡೆಯಲ್ಲಿ ಕುಳಿತ್ತಿದ್ದಾನೆ. ಇದನ್ನೂ ಓದಿ: ನವರಾತ್ರಿ ವಿಶೇಷ- ನಾಲ್ಕನೇ ದಿನ ಕೂಷ್ಮಾಂಡ ದೇವಿ ಆರಾಧನೆ ಮಾಡೋದು ಯಾಕೆ ಗೊತ್ತಾ?
Advertisement
Advertisement
ಸ್ಕಂದಮಾತೆಯಾದ ಇವಳಿಗೆ ನಾಲ್ಕು ಭುಜಗಳಿರುತ್ತವೆ. ಇವಳು ಬಲಗಡೆಯ ಮೇಲಿನ ಕೈಯಿಂದ ಸ್ಕಂದನ್ನು ತೊಡೆಯಲ್ಲಿ ಹಿಡಿದುಕೊಂಡಿದ್ದಾಳೆ. ಮೇಲಕ್ಕಿತ್ತಿರುವ ಕೆಳಗಿನ ಬಲ ಕೈಯಲ್ಲಿ ಕಮಲ ಪುಷ್ಪವನ್ನು ಹಿಡಿದಿದ್ದಾಳೆ. ಎಡಗಡೆಯ ಮೇಲಿನ ಕೈಯಲ್ಲಿ ವರಮುದ್ರೆ ಮತ್ತು ಮೇಲಕ್ಕೆತ್ತಿರುವ ಎಡಗೈಯಲ್ಲಿಯೂ ಕಮಲವಿದೆ. ಇವಳ ಶರೀರದ ಬಣ್ಣವೂ ಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಇದೇ ಕಾರಣದಿಂದ ಇವಳನ್ನು ಪದ್ಮಸನಾದೇವೀ ಎಂದೂ ಹೇಳುತ್ತಾರೆ. ಸಿಂಹವೂ ಇವಳ ವಾಹನವಾಗಿದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ
Advertisement
Advertisement
ನವರಾತ್ರಿಯ ಪೂಜೆಯಲ್ಲಿ ಐದನೇ ದಿನದ ಮಹತ್ವ ಶಾಸ್ತ್ರಗಳಲ್ಲಿ ತುಂಬಾ ಹೇಳಲಾಗಿದೆ. ವಿಶುದ್ಧ ಚಕ್ರದಲ್ಲಿ ನೆಲೆಸಿದ ಮನಸ್ಸುಳ್ಳ ಸಾಧಕನ ಸಮಸ್ತ ಬಾಹ್ಯ ಕ್ರಿಯೆಗಳು ಹಾಗೂ ಚಿತ್ತವೃತ್ತಿಗಳು ಲೋಪವಾಗುತ್ತವೆ. ಅವನು ವಿಶುದ್ಧ ಚೈತನ್ಯ ಸ್ವರೂಪದತ್ತು ಮುಂದುವರಿಯುತ್ತವೆ. ಅವನ ಮನಸ್ಸು ಎಲ್ಲ ಲೌಕಿಕ, ಸಾಂಸಾರಿಕ ಬಂಧನಗಳಿಂದ ಮುಕ್ತವಾಗಿ ಪದ್ಮಾಸನಾ ಸ್ಕಂದಮಾತೆಯ ಸ್ವರೂಪದಲ್ಲಿ ಪೂರ್ಣವಾಗಿ ತಲ್ಲೀನವಾಗುತ್ತದೆ. ಈ ಸಮಯದಲ್ಲಿ ಸಾಧಕನು ಹೆಚ್ಚಿನ ಎಚ್ಚರಿಕೆಯಿಂದ ಉಪಾಸನೆಯಲ್ಲಿ ಮುಂದರಿಯಬೇಕು. ಅವನು ತನ್ನ ಎಲ್ಲ ಧ್ಯಾನ- ವೃತ್ತಿಗಳನ್ನು ಏಕಾಗ್ರವಿರಿಸಿಕೊಂಡು ಸಾಧನೆಯ ಪಥದಲ್ಲಿ ಮುಂದೆ ಹೋಗಬೇಕು. ಇದನ್ನೂ ಓದಿ: ನವರಾತ್ರಿ ವಿಶೇಷ – ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡೋದು ಯಾಕೆ?
ಜಗಜ್ಜನನಿ ಸ್ಕಂದಮಾತೆಯ ಉಪಾಸನೆಯಿಂದ ಭಕ್ತನ ಎಲ್ಲ ಇಚ್ಛೆಗಳು ಪೂರ್ಣವಾಗುತ್ತವೆ. ಈ ಮತ್ರ್ಯಲೋಕದಲ್ಲೇ ಅವನಿಗೆ ಪರಮ ಶಾಂತಿ ಮತ್ತು ಸುಖದ ಅನುಭವವಾಗ ತೊಡಗುತ್ತದೆ. ಅವನಿಗಾಗಿ ಮೋಕ್ಷದ ಬಾಗಿಲು ತಾನಾಗಿ ಸುಲಭವಾಗುತ್ತದೆ ಎನ್ನುವ ನಂಬಿಕೆಯಿದೆ. ಸ್ಕಂದಮಾತೆಯ ಉಪಾಸನೆಯಿಂದ ಬಾಲರೂಪೀ ಭಗವಾನ್ ಸ್ಕಂದನ ಉಪಾಸನೆಯೂ ಕೂಡ ತಾನಾಗಿಯೇ ಆಗುತ್ತದೆ.