ಭಾನುವಾರ ಬಂತೆಂದರೆ ಸ್ಪೆಷಲ್ ಅಡುಗೆ ಮಾಡುಬೇಕು. ಅದರಲ್ಲೂ ಸಂಡೆ ಎಂದರೆ ಬಹುತೇಕರ ಮನೆಯಲ್ಲೂ ನಾನ್ ವೆಜ್ ಅಡುಗೆ ಮಾಡುತ್ತಾರೆ. ಪ್ರತಿಬಾರಿ ಕಬಾಬ್, ಬಿರಿಯಾನಿ ಮಾಡುತ್ತೀರ. ಹೀಗಾಗಿ ಒಂದು ಬಾರಿ ಹಳ್ಳಿ ಶೈಲಿಯ ನಾಟಿ ಕೋಳಿ ಸಾಂಬಾರ್ ಟ್ರೈ ಮಾಡಿ. ಟೇಸ್ಟ್ ಮಾಡಿ, ನಿಮಗಾಗಿ ನಾಟಿ ಕೋಳಿ ಸಾಂಬಾರ್ ಮಾಡುವ ವಿಧಾನ.
Advertisement
ಬೇಕಾಗುವ ಸಾಮಾಗ್ರಿಗಳು:
1. ನಾಟಿ ಕೋಳಿ – 1.5 ಕೆ.ಜಿ.
2. ಖಾರದ ಪುಡಿ -1.5 ಚಮಚ
3. ದನಿಯಾ ಪುಡಿ – 1.5 ಚಮಚ
4. ಈರುಳ್ಳಿ – 3
5. ಕೊತ್ತಂಬರಿ ಸೊಪ್ಪು – ಸ್ವಲ್ಪ
6. ಬೆಳ್ಳುಳ್ಳಿ – 10
7. ಶುಂಠಿ – ಸ್ವಲ್ಪ
8. ಚಕ್ಕೆ – 3 ಪೀಸ್
9. ಲವಂಗ – ಎರಡರಿಂದ ಮೂರು
10. ಮೆಣಸು- 2 ಚಮಚ
11. ತೆಂಗಿನ ಕಾಯಿ ತುರಿ -2 ಕಪ್
12. ಗಸಗಸೆ -1 ಚಮಚ
13. ಹುರಿಗಡ್ಲೆ – 2 ಚಮಚ
14. ಎಣ್ಣೆ -3 ಚಮಚ
15. ಉಪ್ಪು -ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಚೆನ್ನಾಗಿ ಚಿಕನ್ ತೊಳೆದುಕೊಂಡು ಚಿಟಿಕೆ ಅರಿಶಿಣ, ಉಪ್ಪು ಹಾಕಿ ಮಿಕ್ಸ್ ಮಾಡಿಟ್ಟುಕೊಳ್ಳಿ.
* ಈಗ ಒಂದು ಬಾಣಲಿಗೆ 1 ಚಮಚ ಎಣ್ಣೆ ಹಾಕಿ, ನಂತರ ಮುಕ್ಕಾಲು ಭಾಗ ಈರುಳ್ಳಿ, ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಹಾಕಿ ಫ್ರೈ ಮಾಡಿಕೊಳ್ಳಿ.
* ಅದು ತಣ್ಣಗೆ ಆದ ಮೇಲೆ ಅದನ್ನು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಸ್ವಲ್ಪ ಕೊತ್ತಂಬರಿ, ಅರ್ಧ ಗ್ಲಾಸ್ ನೀರು ಹಾಕಿ ರುಬ್ಬಿಕೊಳ್ಳಿ.
* ಈಗ ಕುಕ್ಕರ್ಗೆ 2 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಉಳಿಸಿಕೊಂಡಿದ್ದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ತೊಳೆದು ಇಟ್ಟಿದ್ದ ಚಿಕನ್, 1 ಚಮಚ ಅರಿಶಿಣ, 1.5 ಚಮಚ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ (ನೀರು ಪಂಗೋವರೆಗೂ ಫ್ರೈ ಮಾಡಿ)
* ಈಗ ರುಬ್ಬಿದ ಮುಕ್ಕಾಲು ಭಾಗ ಮಸಾಲೆ ಹಾಕಿ 5 ನಿಮಿಷ ಬೇಯಲು ಬಿಡಿ.
* ಇತ್ತ ಅದೇ ಮಸಲಾಗೆ ಖಾರದ ಪುಡಿ ಮತ್ತು ದನಿಯಾ ಪುಡಿ ಎರಡೆರಡು ಚಮಚ ಹಾಕಿ, ಅದಕ್ಕೆ ಅರ್ಧ ಗ್ಲಾಸ್ ನೀರು ಹಾಕಿ ರುಬ್ಬಿಕೊಳ್ಳಿ.
* 5 ನಿಮಿಷ ಬೆಂದ ಚಿಕನ್‍ಗೆ 2 ಗ್ಲಾಸ್ ನೀರು ಹಾಕಿ ಎರಡು ವಿಶಲ್ ಕೂಗಿಸಿಕೊಳ್ಳಿ.
Advertisement
* ರುಬ್ಬಿದ ಖಾರ ಮಸಾಲೆಯನ್ನು ಒಂದು ಬೌಲ್ ಹಾಕಿ ಒಂದು ಗ್ಲಾಸ್ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಅದನ್ನು ಚಿಕನ್‍ಗೆ ಮಿಕ್ಸ್ ಮಾಡಿ 10 ನಿಮಿಷ ಕುದಿಯಲು ಬಿಡಿ.
* ಮಿಕ್ಸಿ ಜಾರಿಗೆ ಕಾಯಿ, ಕಡ್ಲೆ, ಗಸಗಸೆ, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಕುದಿಯುತ್ತಿರುವ ಚಿಕನ್‍ಗೆ ಹಾಕಿ ಮಿಕ್ಸ್ ಮಾಡಿ.
* ಗಟ್ಟೆಯಾದರೆ ಸ್ವಲ್ಪ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಕ್ಯಾಪ್ ಮುಚ್ಚಿ. ಒಂದು ವಿಶಲ್ ಕೂಗಿಸಿ.
* ಈಗ ನಾಟಿ ಕೋಳಿ ಸಾಂಬಾರ್ ರೆಡಿಯಾಗಿದ್ದು, ಇದನ್ನು ಮುದ್ದೆ, ಅನ್ನ, ಚಪಾತಿ, ರೊಟ್ಟಿ ಜೊತೆ ಸವಿಯಿರಿ.