Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 50 ವರ್ಷಗಳ ಬಳಿಕ ಚಂದಿರನ ಅನ್ವೇಷಣೆ| ಆರ್ಟೆಮಿಸ್-2 ಪಯಣಕ್ಕೆ ಕೌಂಟ್‌ಡೌನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 50 ವರ್ಷಗಳ ಬಳಿಕ ಚಂದಿರನ ಅನ್ವೇಷಣೆ| ಆರ್ಟೆಮಿಸ್-2 ಪಯಣಕ್ಕೆ ಕೌಂಟ್‌ಡೌನ್

Latest

50 ವರ್ಷಗಳ ಬಳಿಕ ಚಂದಿರನ ಅನ್ವೇಷಣೆ| ಆರ್ಟೆಮಿಸ್-2 ಪಯಣಕ್ಕೆ ಕೌಂಟ್‌ಡೌನ್

Public TV
Last updated: April 1, 2026 9:31 pm
Public TV
Share
3 Min Read
Artemis II
SHARE

ಫ್ಲೋರಿಡಾ: ಯುದ್ಧದ ಮಧ್ಯೆ ಮಾನವಸಹಿತ ಚಂದ್ರಯಾನದ ಐತಿಹಾಸಿಕ ಕ್ಷಣಕ್ಕೆ ಅಮೆರಿಕದ ನಾಸಾ(NASA) ಸಜ್ಜಾಗಿದೆ. ಆರ್ಟೆಮಿಸ್-2(Artemis II) ಮಿಷನ್ ಮೂಲಕ 50 ವರ್ಷಗಳ ಬಳಿಕ ಚಂದಿರನ (Lunar) ಅನ್ವೇಷಣೆಗೆ ನಾಸಾ ಸರ್ವ ಸನ್ನದ್ಧವಾಗಿದೆ.

ಅಮೆರಿಕದ(USA) ಕಾಲಮಾನದ ಪ್ರಕಾರ ಸಂಜೆ 6:24ಕ್ಕೆ (ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ3:54) ನಾಲ್ವರು ಗಗನಯಾನಿಗಳಿದ್ದ ನೌಕೆ ಉಡಾವಣೆ ಆಗಲಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಲಾಂಚಿಂಗ್ ಪ್ಯಾಡ್ 39ಬಿ ಇಂದ ನಾಸಾದ ಅತ್ಯಂತ ಶಕ್ತಿಶಾಲಿ ಎಸ್‌ಎಲ್‌ಎಸ್ ರಾಕೆಟ್-ಓರಾಯನ್ ನೌಕೆಯನ್ನು (Orion Capsule) ಹೊತ್ತು ನಭಕ್ಕೆ ಚಿಮ್ಮಲಿದೆ.

1972ರ ಅಪೋಲೋ 17ರ ಮಿಷನ್ ನಂತರ ಮಾನವಸಹಿತ ನೌಕೆಯೊಂದು ಚಂದ್ರನ ಕಕ್ಷೆಗೆ ಹೋಗ್ತಿರೋದು ಇದೇ ಮೊದಲು. 2028ರ ಹೊತ್ತಿಗೆ ಮಾನವನನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಕನಸು ನನಸಾಗಿಸಲು ನಾಸಾ ಯತ್ನಿಸ್ತಿದೆ.

Artemis II 1

ನಾಸಾ ಆರ್ಟೆಮಿಸ್ 1, 2, 3 ಅಂತ ಮಿಷನ್ ಮಾಡುತ್ತಿದ್ದು ಆರ್ಟೆಮಿಸ್ 1ರಲ್ಲಿ ಎಸ್‌ಎಸ್‌ಎಲ್ ರಾಕೆಟ್ ಉಡಾವಣೆಯಲ್ಲಿ ಯಶಸ್ವಿಯಾಗಿದೆ. ಈಗ ಆರ್ಟೆಮಿಸ್-2ನಲ್ಲಿ ಓರಾಯನ್ ನೌಕೆಯನ್ನು ಹೊತ್ತೊಯ್ಯುವುದರ ಪರೀಕ್ಷೆ ಆಗ್ತಿದೆ. ಇದರಲ್ಲಿ ಬಾಹ್ಯಾಕಾಶ ತೀವ್ರ ವಿಕಿರಣ ತಡೆದುಕೊಳ್ಳುವುದು, ಗಗನಯಾತ್ರಿಗಳ ಉಸಿರಾಟ, ಊಟ, ಸುರಕ್ಷತೆ, ವಾಪಸ್ ಬರುವ ಬಗ್ಗೆ ಖಚಿತ ಪಡಿಸಿಕೊಳ್ಳಲಿದೆ. ಈ ಮೂಲಕ ಮಾನವ ಅಲ್ಲಿ ಬದುಕಬಹುದೇ ಅನ್ನೋದನ್ನು ಖಚಿತಪಡಿಸಿಕೊಳ್ಳಲಿದ್ದಾರೆ.

ಈ ಮಿಷನ್‌ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕರೆ, ಆರ್ಟೆಮಿಸ್ 3 ಮಿಷನ್ ಶುರುವಾಗಲಿದೆ. ಇದರಿಂದ ಮಾನವರು ಚಂದಿರನ ಮೇಲೆ ಇಳಿಯಲು ಯತ್ನ ನಡೆಯಲಿದೆ. ಜೊತೆಗೆ ಚಂದಿರನನ್ನು ಟ್ರೈನಿಂಗ್‌ ಕ್ಯಾಂಪ್ ರೀತಿ ಬಳಸಿ, ಮಂಗಳ ಅಥವಾ ಬೇರೆ ಗ್ರಹಗಳಿಗೆ ಪಯಣಿಸಲು ಅನುಕೂಲ ಆಗಬಹುದು ಎಂಬ ಅಂದಾಜು ವಿಜ್ಞಾನಿಗಳದ್ದಾಗಿದೆ.

ಈ 10 ದಿನಗಳ ಕಾಲ ಪಯಯದಲ್ಲಿ ಚಂದ್ರನ ಮೇಲೆ ನಾಲ್ವರು ಗಗನಯಾತ್ರಿಗಳು ಇಳಿಯುವುದಿಲ್ಲ. ಚಂದಿರನಿಂದ 7,400 ಕಿ.ಮೀ ದೂರದಲ್ಲಿ ಸುತ್ತಾಡುತ್ತಾರೆ. 6,85,000 ಮೈಲುಗಳಷ್ಟು ಪ್ರಯಾಣ ಮಾಡಿ ಭೂಮಿಗೆ ವಾಪಸ್ ಆಗಲಿದ್ದಾರೆ. ಇದನ್ನೂ ಓದಿ: ಆರ್ಟೆಮಿಸ್-2 ಪಯಣ– ಉಡಾವಣೆಗೂ ಮುನ್ನ ಸೂರ್ಯನ ಮೇಲೆ ನಾಸಾ ಕಣ್ಣಿಟ್ಟಿದ್ದು ಯಾಕೆ? ಮಿಷನ್‌ ಉದ್ದೇಶ ಏನು?

ಇಷ್ಟೊಂದು ಪ್ರಾಮುಖ್ಯತೆ ಯಾಕೆ?
1972ರಲ್ಲಿ ನಡೆದ ಅಪೊಲೊ 17 ಮಿಷನ್ ನಂತರ 54 ವರ್ಷಗಳ ಬಳಿಕ ಮಾನವಸಹಿತ ನೌಕೆ ಚಂದ್ರನತ್ತ ಪಯಣಸುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ. ಚಂದ್ರನ ಮೇಲೆ ಸಂಶೋಧನೆ ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸಲು ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.

ಗಗನಯಾತ್ರಿಗಳೊಂದಿಗೆ ಒರಾಯನ್ (Orion) ನೌಕೆಯು ಬಾಹ್ಯಾಕಾಶದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಲ್ಲಿನ ವಿಕಿರಣಗಳನ್ನು ಹೇಗೆ ತಡೆದುಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸುವುದು ಈ ಮಿಷನ್‌ನ ಗುರಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸುವ ಆರ್ಟೆಮಿಸ್-3 (Artemis III) ಯೋಜನೆಗೆ ಸಹಾಯವಾಗಲಿದೆ.

Artemis II 3

ರಾಕೆಟ್‌ ವಿಶೇಷತೆ ಏನು?
ಉಡಾವಣಾ ಸಮಯದಲ್ಲಿ ಇಂಧನವನ್ನು ಪೂರ್ಣವಾಗಿ ತುಂಬಿದಾಗ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್‌ ಸುಮಾರು 26 ಲಕ್ಷ ಕೆಜಿ (2.6 ಮಿಲಿಯನ್ ಕೆಜಿ) ತೂಕವಿರುತ್ತದೆ. ಇಂಧನ ಇಲ್ಲದೇ ಇದ್ದಾಗ ಕೇವಲ ರಾಕೆಟ್ ಮತ್ತು ಒರಾಯನ್ ಕ್ಯಾಪ್ಸುಲ್‌ನ ತೂಕ ಸುಮಾರು 16 ಲಕ್ಷ ಕೆಜಿ ಇರುತ್ತದೆ. ಇದು ಸುಮಾರು 27,000 ಕೆಜಿ ತೂಕವನ್ನು ಚಂದ್ರನ ಕಕ್ಷೆಯವರೆಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

ಈ ಬೃಹತ್ ರಾಕೆಟ್ ಅನ್ನು ಉಡಾವಣಾ ಸ್ಥಳಕ್ಕೆ ಸಾಗಿಸಲು ಸುಮಾರು 95 ಲಕ್ಷ ಕೆಜಿ ಭಾರ ಹೊರುವ ಸಾಮರ್ಥ್ಯವಿರುವ ‘ಕ್ರಾಲರ್-ಟ್ರಾನ್ಸ್‌ಪೋರ್ಟರ್’ ಎಂಬ ವಿಶೇಷ ವಾಹನವನ್ನು ಬಳಸಲಾಗುತ್ತದೆ. ಎಸ್‌ಎಲ್‌ಎಸ್‌ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಪ್ರಸಿದ್ಧಿ ಪಡೆದಿದೆ. 2022ರಲ್ಲಿ ನಡೆದ ಆರ್ಟೆಮಿಸ್-1 (Artemis I) ಯಶಸ್ವಿ ಉಡಾವಣೆಯಲ್ಲಿ ಈ ರಾಕೆಟ್ ಅನ್ನು ಬಳಸಲಾಗಿತ್ತು.

ತಂಡದಲ್ಲಿ ಯಾರಿದ್ದಾರೆ?
ರೀಡ್ ವೈಸ್‌ಮನ್ (Reid Wiseman): ಮಿಷನ್ ಕಮಾಂಡರ್.
ವಿಕ್ಟರ್ ಗ್ಲೋವರ್ (Victor Glover): ಪೈಲಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಕಪ್ಪು ವರ್ಣೀಯ ವ್ಯಕ್ತಿ).
ಕ್ರಿಸ್ಟಿನಾ ಕೋಚ್ (Christina Koch): ಮಿಷನ್ ಸ್ಪೆಷಲಿಸ್ಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಮಹಿಳೆ).
ಜೆರೆಮಿ ಹ್ಯಾನ್ಸನ್ (Jeremy Hansen): ಮಿಷನ್ ಸ್ಪೆಷಲಿಸ್ಟ್ (ಕೆನಡಾ ಬಾಹ್ಯಾಕಾಶ ಸಂಸ್ಥೆ)

TAGGED:Artemis IINASAOrion CapsuleUSAಒರಾಯನ್‌ ನೌಕೆಚಂದ್ರನಾಸಾ
Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Delhi NCR
Latest

ದೆಹಲಿ-NCR ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಪಾಕ್‌ ಮೂಲದ ಇಬ್ಬರು ಶಂಕಿತ ಉಗ್ರರ ಬಂಧನ

Public TV
By Public TV
22 minutes ago
Mallikarjun Kharge Narendra Modi
Latest

ಮೋದಿ ಒಬ್ಬ ಭಯೋತ್ಪಾದಕ – ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ

Public TV
By Public TV
40 minutes ago
ATS Raid 2 Arrested
Latest

ಗುಜರಾತ್‌ ATS ದಾಳಿ: ಘಜ್ವಾ-ಎ-ಹಿಂದ್ ಸಂಚು ಪ್ರಕರಣದಲ್ಲಿ ಇಬ್ಬರ ಬಂಧನ

Public TV
By Public TV
50 minutes ago
KN RAJANNA
Bengaluru City

ಸಿಎಂಗೆ ಯಾರೋ ಮಾಟ ಮಂತ್ರ ಮಾಡಿಸಿರಬಹುದು, ಜನ್ರೂ ಮಾತಾಡಿಕೊಳ್ತಿದ್ದಾರೆ: ರಾಜಣ್ಣ

Public TV
By Public TV
2 hours ago
Pahalgam Terror Attack 2 1
Latest

ಪಹಲ್ಗಾಮ್‌ ದಾಳಿಗೆ 1 ವರ್ಷ; ಮಾಸದ ಗಾಯ, ನಿಲ್ಲದ ಕಣ್ಣೀರು – ‘ಸಿಂಧೂರ’ ಸಾಂತ್ವನ

Public TV
By Public TV
2 hours ago
g parameshwara 2
Bengaluru City

ಇನ್‌ಸ್ಪೆಕ್ಟರ್‌ಗೆ ಕಿರುಕುಳ ಆರೋಪ – ವರದಿ ನೀಡಲು ಸೂಚಿಸಿದ್ದೇನೆ: ಪರಮೇಶ್ವರ್‌

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?