ತಮ್ಮ ಸಿನಿಮಾದಲ್ಲಿ ನಟಿಸಿದ್ದ ನಟಿಯೊಬ್ಬರಿಗೆ ರಾಜಕಾರಣಿಯೊಬ್ಬರು ಕೋಟ್ಯಂತರ ಮೌಲ್ಯದ ಫ್ಲ್ಯಾಟ್ ಕೊಡಿಸಿ, ದುಬೈನಲ್ಲಿ ಇಟ್ಟಿದ್ದಾರೆ ಎನ್ನುವ ವಿಚಾರ ತಮಿಳು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ನಟಿ ನಿವೇತಾ ಪೇತುರಾಜ್, ಆ ರಾಜಕಾರಣಿಯಿಂದ (Politician) ಸಾಕಷ್ಟು ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಾಕಷ್ಟು ಹರಿದಾಡಿದ್ದರಿಂದ ನಿವೇತಾ ಪೇತುರಾಜ್ (Nivetha Pethuraj) ಗರಂ ಆಗಿದ್ದಾರೆ. ಈ ಸುದ್ದಿಯನ್ನು ಹರಡುತ್ತಿರುವವರಿಗೆ ವಾರ್ನ್ ಕೂಡ ನೀಡಿದ್ದಾರೆ. ನಾನು 16ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದವಳು. ಅತ್ಯಂತ ಸುಂಸ್ಕೃತ ಮನೆತನದಿಂದ ಬಂದವಳು. ದುಡ್ಡು ಮಾಡಲು ಅಡ್ಡ ದಾರಿ ಹಿಡಿಯುವವಳು ಅಲ್ಲ. ಈ ಸುದ್ದಿಯನ್ನು ಹಬ್ಬಿಸುವಾಗ ಎಚ್ಚರವಿರಲಿ ಎಂದಿದ್ದಾರೆ ನಿವೇತಾ.
ತಮ್ಮ ಕುಟುಂಬ ಹತ್ತಾರು ವರ್ಷಗಳಿಂದ ದುಬೈನಲ್ಲಿ (Dubai) ನೆಲೆಸಿದೆ. ನಾನೂ ಕೂಡ ಸಂಪಾದನೆ ಮಾಡಿಕೊಂಡು ಬಂದಿದ್ದೇನೆ. ಅದಕ್ಕಾಗಿ ಈವರೆಗೂ ಯಾವುದೇ ಅಡ್ಡದಾರಿ ತುಳಿದಿಲ್ಲ. ಅದರ ಅವಶ್ಯಕತೆಯೂ ತಮಗಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಇಂತಹ ವಿಷಯಗಳು ಬಂದಾಗ ನೋವಾಗತ್ತೆ ಎನ್ನುವುದು ನಿವೇತಾ ಮಾತು.
ತಮಗೆ ಯಾವುದೇ ರಾಜಕಾರಣಿಯ ಜೊತೆ ನಂಟಿಲ್ಲ. ಅವರೊಂದಿಗೆ ಕೆಲಸ ಮಾಡಿದ್ದೇನೆ. ಅದು ಆಯಾ ಸಿನಿಮಾಗೆ ಮಾತ್ರ ಸಿಮೀತ. ಅದರಾಚೆ ಯಾವ ಸ್ನೇಹವೂ ಇಲ್ಲ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ.