ತೆಲುಗು ನಟ ನಾನಿ (Nani) ಅವರು ಬೆಂಗಳೂರಿನಲ್ಲಿ ‘ಈಗ’ (Eega) ಚಿತ್ರದ ವಿಲನ್ ಸುದೀಪ್‌ರನ್ನು (Sudeep) ಭೇಟಿಯಾಗಿದ್ದಾರೆ. ಮುಂಬರುವ ಸಿನಿಮಾ ಪ್ರಚಾರದ ನಡುವೆ ಸುದೀಪ್ (Actor Sudeep) ಮನೆಗೆ ನಾನಿ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಕೂಲಿ’ ಚಿತ್ರಕ್ಕಾಗಿ 30 ವರ್ಷಗಳ ನಂತರ ಒಂದಾದ ರಜನಿಕಾಂತ್, ಆಮೀರ್ ಖಾನ್
ನಾನಿ, ಪ್ರಿಯಾಂಕಾ ಮೋಹನ್ ನಟನೆಯ ‘ಸೂರ್ಯನ ಸಾಟರ್ಡೆ’ ಚಿತ್ರದ ಪ್ರಚಾರ ಕೆಲಸ ಬೆಂಗಳೂರಿನಲ್ಲೂ ನಡೆದಿದೆ. ತಮ್ಮ ಕೆಲಸ ಪೂರ್ಣಗೊಂಡ ನಂತರ ಸುದೀಪ್‌ರನ್ನು ನಾನಿ ಭೇಟಿಯಾಗಿ ಕೆಲ ಸಮಯ ಕಳೆದಿದ್ದಾರೆ. ಬಳಿಕ ಚೆಂದದ ಸೆಲ್ಫಿವೊಂದನ್ನು ಇಬ್ಬರೂ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಆದಷ್ಟು ಬೇಗ ‘ಈಗ 2’ ಸಿನಿಮಾ ಬರಲಿ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.
ಅಂದಹಾಗೆ, ‘ಈಗ’ ಸಿನಿಮಾದ ಕಥೆ ಬರೆದಿದ್ದು ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್. ನಮ್ಮಿಬ್ಬರ ನಡುವೆ ಸೀಕ್ವೆಲ್ ಬಗ್ಗೆ ಎಂದೂ ಚರ್ಚೆ ನಡೆದಿಲ್ಲ. ಈ ಹಿಂದೆ ರಾಜಮೌಳಿ ಅವರ ಬಳಿ ತಮಾಷೆಯಾಗಿ ಈ ವಿಚಾರ ಚರ್ಚೆ ಮಾಡಿದ್ದೇನೆ. ಏನಾಯಿತು ಸರ್? ನಾನು ಮತ್ತೆ ಬರುತ್ತೇನೆ ಎಂದಿದ್ದೀರಿ. ಅದು ಯಾವಾಗ? ಎಂದು ಕೇಳುತ್ತಿದ್ದೆ. ಅವರು ಈಗ 2 ಚಿತ್ರ ಮಾಡುತ್ತೇನೆ. ಆದರೆ ಅದಕ್ಕೆ ನಿನ್ನ ಅಗತ್ಯ ಇಲ್ಲ. ಯಾಕೆಂದರೆ ನಿನ್ನ ಪಾತ್ರವನ್ನು ನೊಣವೇ ಮಾಡುತ್ತದೆ ಅಲ್ವಾ? ಎಂದು ನಗುತ್ತಿದ್ದರು. ಸರಿಯಾದ ಸಮಯ ಬಂದಾಗ ಅವರು ‘ಈಗ 2’ ಮಾಡುತ್ತಾರೆ. ಆದರೆ ಪಾರ್ಟ್ 2ನಲ್ಲಿ ನಾನಿರಲ್ಲ ಎಂಬುದನ್ನು ನಾನಿ ಸ್ಪಷ್ಟಪಡಿಸಿದ್ದರು.
ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾ 2012ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ನೊಣದ ಕಥೆಯನ್ನು ಅದ್ಭುತವಾಗಿ ತೋರಿಸಿದ್ದರು. ‘ಈಗ’ ಸಿನಿಮಾದಲ್ಲಿ ನಾನಿ ಮತ್ತು ಸಮಂತಾ (Samantha) ಜೋಡಿಯಾಗಿ ನಟಿಸಿದರು. ಕನ್ನಡದ ನಟ ಕಿಚ್ಚ ಸುದೀಪ್ ವಿಲನ್ ಆಗಿ ಮಿಂಚಿದ್ದರು.