– ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ದ ವೈರಿಗಳು
– ನನ್ನ ಅಣ್ಣ ಸುಧಾಕರ್ ಎಂದ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ: ನಂದಿ ಮೆಡಿಕಲ್ ಕಾಲೇಜಿನ ಓಪಿಡಿ ಬ್ಲಾಕ್‌ಗೆ ಸಂಸದ ಡಾ.ಕೆ ಸುಧಾಕರ್ (K Sudhakar)ತಾಯಿಯವರ ಹೆಸರಿಡಿ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ನಡೆದ ವಿಶೇಷಚೇತನ ಹಾಗೂ ಹಿರಿಯ ನಾಗರೀಕರಿಕರಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಧಾಕರ್ ಅವರ ತಾಯಿ ಶಾಂತಮ್ಮನವರು ನನಗೂ ತಾಯಿಯಿದ್ದಂತೆ, ಅವರ ಹೆಸರು ಇಡಬೇಕು. ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿ ಅನುಮತಿ ಕೊಡಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಭೈರತಿ ಸುರೇಶ್ ಹಾಗೂ ಸುಧಾಕರ್ ಎದುರಲ್ಲೇ ಪ್ರದೀಪ್ ಈಶ್ವರ್ ಈ ಮಾತುಗಳನ್ನಾಡಿದರು. ಚಿಕ್ಕಬಳ್ಳಾಪುರ ತಾಲೂಕು ಅರೂರು ಬಳಿ ಇರುವ ನಂದಿ ವೈದ್ಯಕೀಯ ಮೆಡಿಕಲ್ ಕಾಲೇಜಿನ ಓಪಿಡಿ ಬ್ಲಾಕ್ ಇಂದು ಉದ್ಘಾಟನೆಗೊಂಡಿದೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.
ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ದ ವೈರಿಗಳು
ರಾಜಕೀಯ ಬದ್ದ ವೈರಿಗಳು ಎಂದು ಕರೆಸಿಕೊಳ್ಳುವ ಪ್ರದೀಪ್ ಈಶ್ವರ್ ಹಾಗೂ ಕೆ ಸುಧಾಕರ್ ಇಂದು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದರು. ಈ ಹಿನ್ನೆಲೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಪ್ರಾರಂಭದಲ್ಲಿ ಇಬ್ಬರು ನಾಯಕರು ಭೈರತಿ ಸುರೇಶ್ ಅಕ್ಕ ಪಕ್ಕ ಕುಳಿತಿದ್ದರು.
ನನ್ನ ಅಣ್ಣ ಸುಧಾಕರ್ ಎಂದ ಪ್ರದೀಪ್ ಈಶ್ವರ್
ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವ ವೇಳೆ ಪ್ರದೀಪ್ ಈಶ್ವರ್, ಸಂಸದರು ನನ್ನ ಅಣ್ಣ.. ಸುಧಾಕರ್ ಅಣ್ಣ ಎಂದು ಹೇಳುವ ಮೂಲಕ ಗಮನಸೆಳೆದರು. ಇದಕ್ಕೆ ಪ್ರತಿಯಾಗಿ ಸುದಾಕರ್, ಕ್ಷೇತ್ರದ ಶಾಸಕರು, ನಮ್ಮೂರಿನವರೇ ಅದ ಶಾಸಕ ಪ್ರದೀಪ್ ಈಶ್ವರ್ ಎಂದು ಬೋದಿಸಿದರು. ಇದನ್ನೂಓದಿ: ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ ಪರಿಶೀಲಿಸಿದ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ
ವೇದಿಕೆಯಲ್ಲಿ ಸುಧಾಕರ್ ಮಾತನಾಡಿ, ರಾಜಕಾರಣ ನಮಗೆ ಬೇಡ ಅಭಿವೃದ್ಧಿ ಮಾಡೋಣ. ಅಧಿಕಾರ ಶಾಶ್ವತ ಅಲ್ಲ, ಸ್ಥಾನ ಪಲ್ಲಟ ಸಾಮಾನ್ಯ ಪ್ರಜಾಪ್ರಭುತ್ವದ ತತ್ವ. ಕೇಂದ್ರ ರಾಜ್ಯ ಮನೋಭಾವ ಇಲ್ಲದೆ ಜೊತೆ ಸೇರಿ ಅಭಿವೃದ್ಧಿ ಕಡೆ ಮುಖ ಮಾಡಿದರೆ ರಾಜ್ಯಕ್ಕೆ ಲಾಭ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಡಳಿತ ಗಟ್ಟಿಯಾಗಿ ಇಟ್ಟುಕೊಳ್ಳಿ. ಡಿಸಿಯಿಂದ ಕಾನ್ಸ್ಟೇಬಲ್‌ವರೆಗೂ ಅವರ ಕೆಲಸಗಳ ಬಗ್ಗೆ ಗಮನ ಇರಲಿ. ಜಿಲ್ಲೆಯಲ್ಲಿ ಏನಾಗಿದೆ ಪರಿಶೀಲಿಸಿ. ಅಧಿಕಾರಿಗಳು ಕಾರ್ಯವೈಖರಿ ಬಗ್ಗೆ ಪರಿಶೀಲನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಅವರಿಗೆ ಸುಧಾಕರ್ ಮನವಿ ಮಾಡಿದ್ದಾರೆ.ಇದನ್ನೂಓದಿ: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗೆ ಹಂಚಿಕೆಯಾಗಿದ್ದ ಸೀಟು ರದ್ದತಿಗೆ ಷರತ್ತುಬದ್ಧ ಅವಕಾಶ: KEA

