-ಪ್ರಧಾನಿ ಮೋದಿ 75 ವರ್ಷಕ್ಕೆ ನಿವೃತ್ತಿ ತಗೋಬೇಕು
ರಾಯಚೂರು: ಪೇಟಿಎಂ ಎಂದ್ರೆ ಪೇ ಟು ಮೋದಿ ಎಂದರ್ಥ. ಇದನ್ನ 10 ವರ್ಷದ ಹಿಂದೆಯೇ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಈಗ ಯುಪಿಐ ವ್ಯವಹಾರಕ್ಕೆ ಹಣ ಕಡಿತಗೊಡಿಸುತ್ತಾರೆ, ಅಲ್ಲದೇ 2000 ರೂ.ಕ್ಕಿಂತ ಹೆಚ್ಚು ಹಣಕ್ಕೆ ಟ್ಯಾಕ್ಸ್ ಹಾಕ್ತಿನಿ ಅಂತಾ ಹೇಳಿದ್ದಾರೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ (Ajay Singh) ಹೇಳಿದ್ದಾರೆ.
ರಾಯಚೂರಿನಲ್ಲಿ (Raichuru) ಮಾತನಾಡಿದ ಅವರು, ಮೋದಿಯವರು 75 ವರ್ಷಕ್ಕೆ ನಿವೃತ್ತಿ ತಗೋಬೇಕು. ಅವರೇ 75 ದಾಟಿದವರನ್ನು ನಿವೃತ್ತಿ ಮಾಡಿ, ಕಳಿಸಿದ್ದಾರೆ. ಯಾಕೆ ನರೇಂದ್ರ ಮೋದಿ ನಿವೃತ್ತಿ ತಗೊಂಡಿಲ್ಲ. ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರಿಗೆ ಮೋದಿ ನಿವೃತ್ತಿ ಕೊಟ್ಟಿದ್ದಾರೆ. ಆದ್ರೆ ಇವರು 75 ದಾಟಿ 76 ವರ್ಷಕ್ಕೆ ಬಂದಿದ್ದಾರೆ. ಮೋದಿಯವರ ಕೊಡುಗೆ ಏನಿದೆ? ಅವರು ಮಾಡಿದ ನೀತಿಗಳನ್ನ ಅವರು ಪಾಲನೆ ಮಾಡಿಲ್ಲ. ಇನ್ನೂ ರಾಜ್ಯದಲ್ಲಿ ಬಿಜೆಪಿಯವರ (BJP) ಹತ್ರ ಏನೂ ದಾಖಲೆಗಳಿಲ್ಲ ಸುಮ್ನೆ ಎರಡನೇ ವಿಕೆಟ್ ಅಂತಿದ್ದಾರೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ ಪರಿಶೀಲಿಸಿದ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ
ದಿನ ಒಂದು ವಿಕೆಟ್ ಹೋಗುತ್ತೆ ಅಂತ ಹೇಳಿ ಹದಿನೈದು ತಿಂಗಳಾಯ್ತು. ಪ್ರಿಯಾಂಕ ಖರ್ಗೆ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ, ದಾಖಲೆಗಳಿದ್ರೆ ಮಾತನಾಡಲು ಸಿದ್ದ ಎಂದಿದ್ದಾರೆ. ಕುಮಾರಸ್ವಾಮಿಯವರು (HD Kumaraswamy) ಸಹ ನನ್ನ ಹತ್ರ ಸಿಡಿ ಇದೆ, ಪೆನ್ ಡ್ರೈವ್ ಇದೆ ಅಂದ್ರು ಯಾವ ಸಿಡಿನೂ ಹೊರಗಡೆ ಬರಲಿಲ್ಲ, ಯಾವ ಪೆನ್ ಡ್ರೈವ್ ಹೊರಗಡೆ ಬರಲಿಲ್ಲ. ಪ್ರತಿ ಬಾರಿ ತುರ್ತು ಸುದ್ದಿಗೋಷ್ಠಿ ಕರೆದು ವಿಕೆಟ್ ಪತನ ಆಗುತ್ತೆ ಅಂದ್ರೆ ಯಾವುದು ಆಗಲ್ಲ ಅವರೇ ಹೆಡ್ ವಿಕೆಟ್ ಆಗ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

