– ರೈತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್
ಬೆಂಗಳೂರು: ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಸಭೆಗಳಲ್ಲಿ ಚಪ್ಪಲಿ ಹಿಡಿದು ಕಿತ್ತಾಡುತ್ತಾರೆ. ಆದರೆ ಬಿಜೆಪಿ (BJP) ಸಭೆಯಲ್ಲಿ ಮಾತ್ರ ಶಿಸ್ತು. ಶಾಂತವಾಗಿ ನಮ್ಮ ಸಭೆ ನಡೆಯುತ್ತದೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಕಿಡಿಕಾರಿದ್ದಾರೆ.
Advertisement
ಬೆಂಗಳೂರಿನ ರಾಜ್ಯ ಬಿಜೆಪಿ ಜಗನ್ನಾಥ ಭವನ ಕಚೇರಿಯಲ್ಲಿ ನಡೆದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಪರಸ್ಪರ ಚಪ್ಪಲಿಗಳಲ್ಲಿ ಕಿತ್ತಾಡಿಕೊಂಡು ಸಭೆ ಮಾಡ್ತಾರೆ ಎಂದು ಕಟೀಲ್ ತಿವಿದಿದ್ದಾರೆ. ಇದನ್ನೂ ಓದಿ: ತನಿಖೆ ಮಾಡಿದ್ರೆ ಕಾಂಗ್ರೆಸ್ಸಿನವರಿಗೋಸ್ಕರ ಹೊಸ ಜೈಲು ತೆರೆಯಬೇಕಾಗುತ್ತೆ: ಆರಗ ತಿರುಗೇಟು
Advertisement
ಮೂರು ಪಕ್ಷಗಳಲ್ಲೂ ಮೂರು ವಿಭಿನ್ನತೆ ಇದೆ. ರಾಷ್ಟ್ರೀಯ ಪಾರ್ಟಿಯೊಂದರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ. ಇನ್ನೊಂದು ಕುಟುಂಬದ ಪಕ್ಷ ಇದೆ. ಅಪ್ಪ ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ಮೇಲೆ ಬಿದ್ದಿರುತ್ತದೆ. ಬಿಜೆಪಿಯಲ್ಲಿ ಮಾತ್ರ ಚಪ್ಪಲಿ ನಮ್ಮಲ್ಲೇ ಇರುತ್ತದೆ. ನಮ್ಮ ಚಪ್ಪಲಿಗಳು ಹೊರಗೆ ಇರುತ್ತವೆ. ಶಾಂತವಾಗಿ ನಮ್ಮ ಸಭೆ ನಡೆಯುತ್ತದೆ. ಒಂದು ಅಪ್ಪ ಮಕ್ಕಳ ಪಕ್ಷ, ಇನ್ನೊಂದು ರಾಷ್ಟ್ರೀಯ ಪಕ್ಷ. ಎರಡೂ ಪಕ್ಷಗಳಲ್ಲಿ ಕಿತ್ತಾಟ. ಅಪ್ಪ ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂದು ಕಿತ್ತಾಟ ಶುರುವಾಗಿದೆ. ರಾಷ್ಟ್ರೀಯ ಪಾರ್ಟಿಯಲ್ಲಿ ಮುಖ್ಯಮಂತ್ರಿ ಯಾರೆಂಬ ಕಿತ್ತಾಟ ಆರಂಭವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಕೈ-ತೆನೆ ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಈ ಚುನಾವಣೆಯಲ್ಲಿ ಬೇರೆಬೇರೆ ಪಾರ್ಟಿಯವರು ಶರ್ಟ್ ಹೊಲಿಸಿ ಕಾಯುತ್ತಿದ್ದಾರೆ. ಕೆಲವರು ಕೋಟ್ ಹೊಲಿಸಲು ಅಂಗಡಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಹೊಸ ಪ್ಯಾಂಟ್ ಶರ್ಟ್ ಖರೀದಿಸಿದ್ದಾರೆ. ಇನ್ನೂ ಕೆಲವರು ಅವರೊಳಗೇ ಪ್ಯಾಂಟ್, ಶರ್ಟ್ ಹರಿಯಲು ಶುರು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ನಿರಂತರವಾಗಿ ರೈತಪರ ನಿಲುವನ್ನು ಹೊಂದಿದ್ದು, ವಿವಿಧ ರೈತೋಪಯೋಗಿ ಕಾರ್ಯ ಮಾಡಿವೆ. ರೈತರ ಒಳಿತಿಗಾಗಿ ಯೋಜನೆಗಳನ್ನು ಜಾರಿಗೊಳಿಸಿವೆ. ಹಿಂದಿನ ಕಾಂಗ್ರೆಸ್-ಯುಪಿಎ ಸರ್ಕಾರಗಳು ರೈತರನ್ನು ಮತಬ್ಯಾಂಕಿಗೆ ಮತ್ತು ಘೋಷಣೆಗೆ ಸೀಮಿತಗೊಳಿಸಿದ್ದವು. ಬಿಜೆಪಿ ಸರ್ಕಾರಗಳು ರೈತಪರ ನಿಲುವನ್ನು ತಳೆದು ರೈತರ ಏಳಿಗೆಗೆ ಶ್ರಮಿಸಿವೆ. ಪ್ರಧಾನಿಯವರ ಕಲಬುರ್ಗಿ, ಹುಬ್ಬಳ್ಳಿ ಕಾರ್ಯಕ್ರಮಗಳಿಗೆ ನಿರೀಕ್ಷೆಗೆ ಮೀರಿ ಜನಸಾಗರ ಬಂದಿದೆ. ವಿವಿಧ ಸಮಾವೇಶಗಳಲ್ಲೂ ಗರಿಷ್ಠ ಜನರು ಸೇರುತ್ತಿದ್ದಾರೆ. ಸರ್ವ ಸ್ಪರ್ಶಿ, ಸರ್ವವ್ಯಾಪಿಯಾಗಿ ಜನರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ಮೀಸಲಾತಿ ಹೆಚ್ಚಳದ ಬಳಿಕ ಜನರು ಬಿಜೆಪಿಯತ್ತ ಹರಿದುಬರುತ್ತಿದ್ದಾರೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವೇಶ್ಯೆ ಅನ್ನೋ ಪದ ಬಳಸಿದ ಫೂಟೇಜ್ ಕೊಟ್ಟರೆ ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ: ಬಿ.ಕೆ ಹರಿಪ್ರಸಾದ್
ಮತ್ತೆ ಬಿಜೆಪಿ ಸರ್ಕಾರವನ್ನು ನಾವು ರಚಿಸುತ್ತೇವೆ. ಯಡಿಯೂರಪ್ಪ ಅವರ ಮಾರ್ಗದರ್ಶನ, ಬೊಮ್ಮಾಯಿಯವರ ನೇತೃತ್ವದಲ್ಲಿ ತಂಡವಾಗಿ ನಾವು ಚುನಾವಣೆ ಎದುರಿಸಲಿದ್ದೇವೆ. ಈ ಬಿಜೆಪಿ ಪರ ವಾತಾವರಣವನ್ನು ಇನ್ನಷ್ಟು ಗಟ್ಟಿಮಾಡುವ ಕೆಲಸ ರೈತ ಮೋರ್ಚಾದಿಂದ ಆಗಬೇಕು. ಜನರು ಸ್ವಯಂಪ್ರೇರಣೆಯಿಂದ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುತ್ತಿದ್ದಾರೆ. ಸದಸ್ಯರಾಗಲು ಹೆಮ್ಮೆಯಿಂದ ಮುಂದೆ ಬರುತ್ತಿದ್ದಾರೆ. ಜನರು ಬಿಜೆಪಿಪರವಾಗಿದ್ದಾರೆ. ಈ ದೇಶವನ್ನು ಲೂಟಿ ಮಾಡಿದ, ಭಿಕ್ಷುಕರ ರಾಷ್ಟ್ರವಾಗಿ ಬಿಂಬಿಸಿದ ಪಕ್ಷ ಕಾಂಗ್ರೆಸ್ ಎಂದು ಜನರಿಗೆ ಗೊತ್ತಿದೆ. ರೈತರನ್ನು ಕಡೆಗಣಿಸಿದ್ದು ಕಾಂಗ್ರೆಸ್. ರೈತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್. ರೈತರ ಬದುಕು ಹಸನು ಮಾಡಿದ ಪಕ್ಷ ಬಿಜೆಪಿ, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರು ಎಂದು ಜನರಿಗೆ ಗೊತ್ತಿದೆ ಎಂದು ವಿವರಿಸಿದ್ದಾರೆ.
ಮೋದಿ ಅವರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ನೀಡಿದೆ. ಅಲ್ಲದೆ ರೈತರ ಫಸಲು ನಷ್ಟವಾದಾಗ ನಷ್ಟ ಭರಿಸುವ ವಿಮಾ ಯೋಜನೆ ಜಾರಿಗೊಳಿಸಿದೆ. ಯೂರಿಯಾಕ್ಕಾಗಿ ಹಿಂದೆ ರೈತರು ಅತಿ ಹೆಚ್ಚು ಕಷ್ಟ, ತೊಂದರೆ ಪಡುತ್ತಿದ್ದರು. ಈಗ ಬೇವುಲೇಪಿತ ಯೂರಿಯಾ ಮತ್ತು ಇತರ ರಸಗೊಬ್ಬರವು ಸಬ್ಸಿಡಿಯಲ್ಲಿ ಸುಲಭವಾಗಿ ಸಿಗುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕೃಷಿ ಬಜೆಟ್ ಮಂಡಿಸಿದ್ದರು. ಅಲ್ಲದೆ, ಹಾಲಿಗೆ ಪ್ರೋತ್ಸಾಹಧನ ನೀಡಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರವು ಕೂಡ ರೈತ ವಿದ್ಯಾನಿಧಿ ಪ್ರಕಟಿಸಿದೆ. ರೈತರಿಗಾಗಿ ಹತ್ತಾರು ಯೋಜನೆಗಳನ್ನು ಬಿಜೆಪಿ ಸರ್ಕಾರಗಳು ಅನುಷ್ಠಾನಕ್ಕೆ ತಂದು ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡಿವೆ. ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರಗಳು ಮಾಡಿದ ಸಾಧನೆ ಮತ್ತು ರೈತಪರವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಜನರು ಮತ್ತು ರೈತರಿಗೆ ತಿಳಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಕೇಂದ್ರ ಸರ್ಕಾರವು ಅದ್ಭುತವಾಗಿ ಕೆಲಸ ಮಾಡುತ್ತಿದೆ. ಸಮಗ್ರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಡಬಲ್ ಎಂಜಿನ್ ಸರ್ಕಾರಗಳು ಶ್ರಮಿಸಿದೆ. ಕೇಂದ್ರ ಸರ್ಕಾರದ ಕೃಷಿಕರ ಪರ ಅನುದಾನವು 8 ಪಟ್ಟು ಹೆಚ್ಚಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿದ ನಮ್ಮ ಸರ್ಕಾರವು ಕೃಷಿಕನಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಈ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಪ್ರಕಟಿಸಿ, ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 100 ಕಿಸಾನ್ ಡ್ರೋನ್‍ಗಳಿಗೆ ಚಾಲನೆ ಕೊಟ್ಟ ಕುರಿತು ಮಾಹಿತಿ ನೀಡಿದರು. ಕಿಸಾನ್ ರೈಲು ಮೂಲಕ ಉತ್ಪನ್ನಗಳ ಸುಲಭ ಸಾಗಣೆಗೆ ನೆರವಾಗಿದೆ. ಜಾತಿ, ಮತ ಮತ್ತು ಪಂಥ ಮೀರಿದ ಮೋರ್ಚಾ ರೈತರದು. ಬೂತ್ ವಿಜಯ ಅಭಿಯಾನದಲ್ಲಿ ಶೇ.95ರಷ್ಟು ಸಾಧನೆ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫೆ.17ಕ್ಕೆ ರಾಜ್ಯ ಬಜೆಟ್ ಮಂಡನೆ – ಜೆ.ಸಿ.ಮಾಧುಸ್ವಾಮಿ
ಜ. 21 ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ರೈತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಈರಣ್ಣ ಕಡಾಡಿಯವರ ಹುಟ್ಟೂರಲ್ಲಿ ನಡೆಯಲಿದೆ. ಅದು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಫೆಬ್ರವರಿ ಕೊನೆಯ ವಾರದಲ್ಲಿ 10 ಲಕ್ಷ ರೈತರ ದೊಡ್ಡ ಸಮಾವೇಶ ನಡೆಸಬೇಕಿದೆ. ರೈತ ಮೋರ್ಚಾ ಗಟ್ಟಿಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕರ್ನಾಟಕದ ಪ್ರಕೋಷ್ಠಗಳೂ ಕ್ರಿಯಾಶೀಲವಾಗಿವೆ. ಇದರ ಪರೀಕ್ಷೆ ಚುನಾವಣೆ ವೇಳೆ ನಡೆಯಲಿದ್ದು, ಪಕ್ಷಕ್ಕೆ ಗರಿಷ್ಠ ಸ್ಥಾನ ಗೆಲ್ಲಿಸಿ ಕೊಡುವ ಮೂಲಕ ಅತಿ ಹೆಚ್ಚು ಅಂಕ ಗಳಿಸಿ ಎಂದು ಸಲಹೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k