ಬೆಂಗಳೂರು: ಲೈಂಗಿಕ ಕಾರ್ಯಕರ್ತರ ಬಗ್ಗೆ ನಾನು ಮಾತಾಡಿಲ್ಲ. ಲೈಂಗಿಕ ಕಾರ್ಯಕರ್ತೆಯರ ವಿಚಾರದಲ್ಲಿ ಕೆಟ್ಟ ಪದ ಬಳಕೆ ಮಾಡಿರೋ ಫೂಟೇಜ್ ಇದ್ರೆ ನಾನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ (MLC) ರಾಜೀನಾಮೆ ನೀಡುತ್ತೇನೆ ಎಂದು ತಮ್ಮ ಮೇಲೆ ಕೇಳಿ ಬರುತ್ತಿರುವ ಆರೋಪದ ವಿರುದ್ಧ ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ (BK Hariprasad) ಸವಾಲು ಹಾಕಿದ್ದಾರೆ.
Advertisement
ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ ಅವರು, ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನನಗೆ ಗೌರವ ಇದೆ. ಈವರೆಗೆ ಎಲ್ಲೂ ನನ್ನ ಮೇಲೆ ಯಾವುದೇ ಆರೋಪ ಬಂದಿಲ್ಲ. ನನ್ನ ಮೇಲೆ ಈ ರೀತಿಯ ಕೇಸ್ ಎಲ್ಲೂ ಇಲ್ಲ. ಗಲಾಟೆ, ಹೋರಾಟದ ಬಗ್ಗೆ ಮಾತ್ರ ದೂರು ಇದೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ನಾನು ಮಾತಾಡಿಲ್ಲ. ನಾನು ಈಗಾಗಲೇ ಈ ಬಗ್ಗೆ ಕ್ಷಮಾಪಣೆ ಕೇಳಿದ್ದೇನೆ ಎಂದರು. ಇದನ್ನೂ ಓದಿ: ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ
Advertisement
Advertisement
ನಾನು ವೇಶ್ಯೆ (Prostitute) ಎಂಬ ಪದ ಬಳಕೆ ಮಾಡಿಲ್ಲ. ನಾನು ಮಿಸ್ ಬಿಹೇವ್ ಮಾಡಿದ ಉದಾಹರಣೆ ಎಲ್ಲಿಯೂ ಇಲ್ಲ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನನಗೆ ಗೌರವ ಇದೆ. ನಾನು ವೇಶ್ಯೆ ಎಂಬ ಪದ ಬಳಸಿದ ಫೂಟೇಜ್ ಕೊಟ್ಟರೆ ನಾನು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ ಎಂದು ತಿಳಿಸಿದರು.
Advertisement
ಹೇಳಿಕೆ ಏನು:
ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ವಲಸಿಗರನ್ನು ಟೀಕಿಸುವ ಭರದಲ್ಲಿ ಬಿ.ಕೆ ಹರಿಪ್ರಸಾದ್ ಹೊಸಪೇಟೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಲಸಿಗರು ವೇಶ್ಯೆಯರ ಮಾದರಿಯಲ್ಲಿ ತಮ್ಮ ಸ್ಥಾನವನ್ನು ಮಾರಿಕೊಂಡರು ಎಂದು ಆನಂದ್ ಸಿಂಗ್ ಹೆಸರೇಳದೇ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ವಲಸಿಗರನ್ನು ವೇಶ್ಯೆಯರಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದರು. ಆ ಬಳಿಕ ನಾನು ಲೈಂಗಿಕ ಕಾರ್ಯಕರ್ತರ ಬಗ್ಗೆ ಮಾತನಾಡಿಲ್ಲ. ಬಿಜೆಪಿಗರು ನನ್ನ ಹೇಳಿಕೆಯನ್ನು ತಿರುಚಿ ಉಲ್ಲೇಖ ಮಾಡಿದ್ದಾರೆ. ನನ್ನ ಹೇಳಿಕೆಯಿಂದ ಲೈಂಗಿಕ ಕಾರ್ಯಕರ್ತರಿಗೆ ನೋವಾಗಿದ್ರೆ ಕ್ಷಮೆ ಕೇಳ್ತೀನಿ ಎಂದಿದ್ದರು. ನಾನು ಬಳಸಿದ ಪಿಂಪ್ ಪದ ಬಳಕೆ ಫಿಲ್ಮಿ ಡೈಲಾಗ್ ಎಂದು ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: 200 ಯೂನಿಟ್ ವಿದ್ಯುತ್, ಗೃಹಿಣಿಗೆ 2 ಸಾವಿರ ರೂ.: ಗ್ಯಾರಂಟಿ ಯೋಜನೆಗೆ ಷರತ್ತು ಪ್ರಕಟಿಸಿದ ಕಾಂಗ್ರೆಸ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k