ಮಂಡ್ಯ: ಬೆಂಗಳೂರು – ಮೈಸೂರು ದಶಪಥ ರಸ್ತೆಯ (Mysuru Bengaluru Expressway) ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ವೇದಿಕೆಯಿಂದ ಸ್ವಲ್ಪ ದೂರದ ವಿಶಾಲವಾದ ಜಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಬೆಂಗಳೂರು – ಮೈಸೂರು ದಶಪಥ ರಸ್ತೆಯ ಲೋಕಾರ್ಪಣೆ ಮಾಡಿ ಲಕ್ಷಾಂತರ ಜನರ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಕಾರ್ಯಕ್ರಮಕ್ಕೆ ಬರುವವರಿಗಾಗಿಯೇ ವಿಶೇಷವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಊಟವನ್ನು ಸಿದ್ಧಪಡಿಸಲು ಒಟ್ಟು 600 ಬಾಣಸಿಗರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಅವರೆಲ್ಲರಿಗಾಗಿ 60 ಕ್ವಿಂಟಲ್ ಬಾತ್, 25 ಕ್ವಿಂಟಲ್ ಮೊಸರನ್ನವನ್ನು ಸಿದ್ಧಪಡಿಸಿದ್ದಾರೆ. 250 ಕ್ವಿಂಟಲ್ ಅಕ್ಕಿ 50 ಕ್ವಿಂಟಲ್ ತರಕಾರಿ ಬಳಕೆ ಮಾಡಲಾಗಿದೆ.
Advertisement
Advertisement
ವೇದಿಕೆ ಕಾರ್ಯಕ್ರಮಕ್ಕೆ ಬರುವ ಜನರಿಗೆ ಊಟ ತಯಾರಿ ಮಾಡಿ ಬಡಿಸುವ ಜವಾಬ್ದಾರಿಯನ್ನು ಬೆಂಗಳೂರಿನ (Bengaluru) ದೇಸಿ ಮಸಾಲ ಕ್ಯಾಟರಿಂಗ್‌ನವರು ವಹಿಸಿಕೊಂಡಿದ್ದಾರೆ. 250 ಕೌಂಟರ್‌ನಲ್ಲಿ ಜನರಿಗೆ ಊಟ ಬಡಿಸಲಾಗುತ್ತದೆ. ಒಟ್ಟು ಮೂರೂವರೆ ಲಕ್ಷ ಜನರಿಗೆ ಊಟ ತಯಾರು ಮಾಡುವಷ್ಟು ಪದಾರ್ಥಗಳನ್ನು ಸ್ಥಳದಲ್ಲಿ ಇಟ್ಟುಕೊಳ್ಳಲಾಗಿದೆ. ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ
Advertisement
Advertisement
ಮೋದಿ ಮಿನಿ ಕಟೌಟ್: ದಶಪಥ ರಸ್ತೆಯ ಲೋಕಾರ್ಪಣೆಯ ವೇದಿಕೆ ಕಾರ್ಯಕ್ರಮಕ್ಕೆ ಬಂದವರ ಕೈಯಲ್ಲಿ ಪ್ರಧಾನಿ ಹಾಗೂ ಸಿಎಂ ಮಿನಿ ಕಟೌಟ್‌ಗಳು ರಾರಾಜಿಸಲಿವೆ. ಮೋದಿ ಹಾಗೂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮಿನಿ ಕಟೌಟ್‌ಗಳನ್ನು ವೇದಿಕೆಯ ಕಾರ್ಯಕ್ರಮದ ಬಹುತೇಕ ಕುರ್ಚಿಗಳ ಮುಂದೆ ಇಡಲಾಗಿದೆ. ಜನರು ಮೋದಿ ಹಾಗೂ ಸಿಎಂ ಪರವಾಗಿ ಘೋಷಣೆ ಕೂಗುವಾಗ ಈ ಕಟೌಟ್‌ಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ 25 ಸಾವಿರಕ್ಕೂ ಹೆಚ್ಚು ಕಟೌಟ್‌ಗಳನ್ನು ಕುರ್ಚಿಗಳ ಮುಂದೆ ಇಡಲಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಆಗಮನ – ಮಂಡ್ಯ, ಧಾರವಾಡದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ