ಲಕ್ನೋ: ಪತಿಯನ್ನು (Husband) ಕೊಲೆಗೈದು, ಹಾವು ಕಚ್ಚಿ ಸಾವನ್ನಪ್ಪಿರುವ ಹಾಗೆ ಬಿಂಬಿಸಿದ್ದ ಪತ್ನಿ (Wife) ಹಾಗೂ ಪ್ರಿಯಕರನಿಗೆ ಉತ್ತರ ಪ್ರದೇಶ (Uttar Pradesh) ಮೀರತ್ನ ಸ್ಥಳೀಯ ನ್ಯಾಯಾಲಯ (Court) ಮರಣದಂಡನೆ (Death Sentence) ವಿಧಿಸಿದೆ.
ರವಿತಾ ಮತ್ತು ಆಕೆಯ ಪ್ರಿಯಕರ ಅಮರ್ದೀಪ್ ಮರಣದಂಡನೆಗೆ ಗುರಿಯಾದ ಅಪರಾಧಿಗಳು. ಮಹಿಳೆಯ ಪತಿ ಅಮಿತ್ ಕಶ್ಯಪ್ನನ್ನು ಇಬ್ಬರು ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಮೃತದೇಹದ ಮೇಲೆ ಹಾವೊಂದನ್ನು ಎಸೆದಿದ್ದರು. ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್; ಅ.27ಕ್ಕೆ ವಿಚಾರಣೆ ಮುಂದೂಡಿಕೆ
ಆ ಹಾವಿನ ವಿಷದ ಹಲ್ಲುಗಳನ್ನು ತೆಗೆದುಹಾಕಲಾಗಿತ್ತು ಮತ್ತು ಅದು ವಿಷಕಾರಿಯಾಗಿರಲಿಲ್ಲ ಎಂಬುದು ಪೊಲೀಸರಿಗೆ ತಿಳಿದಾಗ ಕೊಲೆಯ ರಹಸ್ಯ ಬಯಲಿಗೆ ಬಂದಿತ್ತು.
ಶಿಕ್ಷೆಗೆ ಗುರಿಯಾದ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ತೀರ್ಪನ್ನು ಪ್ರಕಟಿಸುವಾಗ ನ್ಯಾಯಾಲಯ ಆ ಮಕ್ಕಳ ಜವಾಬ್ದಾರಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ವಹಿಸಿಕೊಳ್ಳಲಿದ್ದಾರೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಪತ್ನಿ ತನ್ನ ಪತಿಯ ದೀರ್ಘಾಯುಷ್ಯಕ್ಕಾಗಿ ‘ಕರ್ವಾ ಚೌತ್’ ವ್ರತವನ್ನು ಆಚರಿಸುತ್ತಾಳೆ. ಹೀಗಿರುವಾಗ ಪತಿಯನ್ನೇ ಕೊಲೆಗೈದ ಈ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮೀರತ್ನಲ್ಲಿ ಇಂತಹ ಅಪರಾಧಕ್ಕಾಗಿ ಮರಣದಂಡನೆಗೆ ಗುರಿಯಾದ ಎರಡನೇ ಜೋಡಿ ಇದಾಗಿದೆ.
ಇದೇ ವಾರ ಮೀರತ್ನ ಸ್ಥಳೀಯ ನ್ಯಾಯಾಲಯ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಎಂಬವರಿಗೆ ಮರಣದಂಡನೆ ವಿಧಿಸಿತ್ತು. ಇಬ್ಬರು ಸೇರಿ ಮಹಿಳೆಯ ಪತಿ ಸೌರಭ್ ರಜಪೂತ್ನನ್ನು ಕೊಲೆ ಮಾಡಿ, ನೀಲಿ ಬಣ್ಣದ ಡ್ರಮ್ನಲ್ಲಿ ಶವ ತುಂಬಿ ಸಿಮೆಂಟ್ ಹಾಕಿ ಸೀಲ್ ಮಾಡಿದ್ದರು. ಇದನ್ನೂ ಓದಿ: ‘ಬ್ಲೂ ಡ್ರಮ್’ ಮರ್ಡರ್ ಕೇಸ್; ಆರೋಪಿಗಳಿಗೆ ಮರಣದಂಡನೆ – ಮೀರತ್ ಕೋರ್ಟ್ ಆದೇಶ

