Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಸ್ತಿನಾಪುರ ಸಾರ್ವಭೌಮನ ಧಗಧಗಿಸುವ ಕುರುಕ್ಷೇತ್ರದ ಎರಡನೇ ಟ್ರೈಲರ್ ಔಟ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಹಸ್ತಿನಾಪುರ ಸಾರ್ವಭೌಮನ ಧಗಧಗಿಸುವ ಕುರುಕ್ಷೇತ್ರದ ಎರಡನೇ ಟ್ರೈಲರ್ ಔಟ್

Bengaluru City

ಹಸ್ತಿನಾಪುರ ಸಾರ್ವಭೌಮನ ಧಗಧಗಿಸುವ ಕುರುಕ್ಷೇತ್ರದ ಎರಡನೇ ಟ್ರೈಲರ್ ಔಟ್

Public TV
Last updated: July 25, 2019 12:04 pm
Public TV
Share
2 Min Read
KURUKSHETRA 1
SHARE

ಬೆಂಗಳೂರು: ಚಂದನವನ ಬಹುನಿರೀಕ್ಷಿತ ಸಿನಿಮಾ ‘ಮುನಿರತ್ನ ಕುರುಕ್ಷೇತ’ ಚಿತ್ರದ ಎರಡನೇ ಟ್ರೈಲರ್ ಇಂದು ಮಧ್ಯಾಹ್ನ 2 ಗಂಟೆಗೆ ಬಿಡುಗಡೆಯಾಗಿದೆ. ಝಗಮಗಿಸುವ ಟ್ರೈಲರ್ ನಲ್ಲಿ ಹಸ್ತಿನಾಪುರ ಸಾರ್ವಭೌಮನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಡಕ್ ಡೈಲಾಗ್ ಮೂಲಕ ಮಿಂಚಿದ್ದಾರೆ.

ಈ ಬಾರಿಯ ಟ್ರೈಲರ್ ವಿಶೇಷತೆಗಳ ಆಗರವಾಗಿದ್ದು, ಚಿತ್ರದ ಬಹುತೇಕ ಪಾತ್ರಗಳನ್ನು ಡೈಲಾಗ್ ಮೂಲಕ ಪರಿಚಯಿಸಲಾಗಿದೆ. ಮಹಾಭಾರತದ ಕಥೆಯನ್ನೊಳಗೊಂಡಿರುವ ಸಿನಿಮಾದ ಝಲಕ್ ನೋಡುಗರಿಂದ ‘ವಾವ್’ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಪೌರಾಣಿಕ ಕಥೆ ಆಗಿದ್ದರಿಂದ ಸಿನಿಮಾ ಸಹ ಅದ್ಧೂರಿತನದಿಂದ ತುಂಬಿ ತುಳುಕುತ್ತಿದೆ. ಆರಂಭದಲ್ಲಿಯೇ ರೆಬೆಲ್ ಸ್ಟಾರ್ ಅಂಬರೀಶ್ ಎಂಟ್ರಿಯಾಗುತ್ತಲೇ ಅಂಬಿ ಅಭಿಮಾನಿಗಳು ರೋಮಾಂಚನಗೊಳ್ಳುವಂತೆ ಮಾಡುವಲ್ಲಿ ಟ್ರೈಲರ್ ಯಶಸ್ಸು ಕಂಡಿದೆ.

KURUKSHETRA 2

ಕರ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ, ಶಲ್ಯನಾಗಿ ರಾಕ್‍ಲೈನ್ ವೆಂಕಟೇಶ್, ಅಭಿಮನ್ಯುವಿನಾಗಿ ನಿಖಿಲ್, ಶಕುನಿಯಾಗಿ ರವಿಶಂಕರ್, ದ್ರೌಪದಿಯಾಗಿ ಸ್ನೇಹ, ಅರ್ಜುನನಾಗಿ ಸೋನು ಸೂದ್, ಶ್ರೀಕೃಷ್ಣನಾಗಿ ರವಿಚಂದ್ರನ್ ಸೇರಿದಂತೆ ಚಿತ್ರದ ಬಹುತೇಕ ಪಾತ್ರಗಳನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ.

ಮಹಾಭಾರತ ಕೇಂದ್ರಿಕೃತವಾದ ಸಿನಿಮಾ ಇದಾಗಿದ್ದರಿಂದ ದ್ರೌಪದಿಯ ವಸ್ತ್ರಾಪಹರಣ, ಸೋದರರ ಪಗಡೆ ಸೋಲು, ಕರ್ಣನ ಸ್ನೇಹ, ಅಭಿಮನ್ಯುವಿನ ಸಾಹಸ, ಶಕುನಿಯ ಕುತಂತ್ರ, ಶ್ರೀಕೃಷ್ಣನ ಧರ್ಮದ ಆಟ, ಭೀಮನ ಗದಾಯುದ್ಧ ಸನ್ನಿವೇಶಗಳು ಟ್ರೈಲರ್ ನೋಡುಗರನ್ನು ಪೌರಾಣಿಕ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಉರಗ ಪತಾಕೆಯುಳ್ಳ ಕೌರವೇಂದ್ರ ಯುದ್ಧಕ್ಕೆ ಪ್ರವೇಶಿಸುವ ಸನ್ನಿವೇಶ ಚಿತ್ರದ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹೀಗೆ 2 ನಿಮಿಷದ 17 ಸೆಕೆಂಡ್ ಟ್ರೈಲರ್ ಮಹಾಭಾರತದ ವೈಭವೀಕರಣದ ಝಲಕ್ ಕರುನಾಡಿನ  ಮುಂದಿಟ್ಟಿದ್ದು ಪ್ರೇಕ್ಷಕರು ಫಿದಾ ಆಗಿದ್ದಾರೆ.

KURUKSHETRA 1

ದರ್ಶನ್ ಅವರ ಫೇಸ್‍ಬುಕ್ ಖಾತೆಯಲ್ಲಿ ಎರಡನೇ ಟ್ರೈಲರ್ ಬಿಡುಗಡೆಗೊಂಡಿದೆ. ಬಿಡುಗಡೆಗೊಂಡ ಎರಡು ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ವ್ಯೂವ್, 9 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ನೋಡುಗರು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿ, ಚಿತ್ರ ನೋಡಲು ಕಾತುರರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಕುರುಕ್ಷೇತ್ರ ಮುನಿರತ್ನ ಅವರು ಮಹತ್ವಾಕಾಂಕ್ಷೆಯಿಂದ ನಿರ್ಮಾಣ ಮಾಡಿರುವ ಚಿತ್ರ. ಬಹು ಕೋಟಿ ವೆಚ್ಚ ಮತ್ತು ಅದ್ಧೂರಿ ತಾರಾಗಣ ಹೊಂದಿರೋ ಕುರುಕ್ಷೇತ್ರ ಕನ್ನಡ ಮಾತ್ರವಲ್ಲದೇ ಪರರಾಜ್ಯ, ವಿದೇಶಗಳಲ್ಲಿಯೂ ಅಬ್ಬರಿಸಲು ಅಣಿಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಆಗಸ್ಟ್ 2ರಂದು ಬಿಡುಗಡೆಯಾಗಲಿದೆ.

https://www.facebook.com/NimmaPreethiyaDasaDarshan/videos/722220364861886/

TAGGED:ಅರ್ಜುನ್ ಸರ್ಜಾಟ್ರೈಲರ್ದರ್ಶನ್ಪಬ್ಲಿಕ್ ಟಿವಿಮುನಿರತ್ನ ಕುರುಕ್ಷೇತ್ರಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

stop rape
Crime

ಕಾಡಿನಲ್ಲಿ ಅಪ್ರಾಪ್ತೆ ಮೇಲೆ ರೇಪ್‌ ಆರೋಪ – ಧರ್ಮಸ್ಥಳ ಪೊಲೀಸರಿಂದ ಇಬ್ಬರ ಬಂಧನ

Public TV
By Public TV
8 minutes ago
kalaburagi police
Kalaburagi

ಕಲಬುರಗಿ| ವಾಹನ ಡಿಕ್ಕಿ ಹೊಡೆದು ಪೊಲೀಸ್‌ ಕಾನ್‌ಸ್ಟೆಬಲ್‌ ಸಾವು

Public TV
By Public TV
10 minutes ago
Ajit Agarkar
Cricket

2027 ರ ಏಕದಿನ ವಿಶ್ವಕಪ್‌ ವರೆಗೆ ಅಜಿತ್‌ ಅಗರ್ಕರ್‌ ಟೀಂ ಇಂಡಿಯಾ ಆಯ್ಕೆ ಮುಖ್ಯಸ್ಥ?

Public TV
By Public TV
31 minutes ago
DK Shivakumar 1 1
Bengaluru City

ಮಹಿಳಾ ಮೀಸಲಾತಿ ಅವರೊಬ್ಬರ ಆಸ್ತಿ ಅಲ್ಲ: ಬಿಜೆಪಿಗೆ ಡಿಕೆಶಿ ತಿರುಗೇಟು

Public TV
By Public TV
1 hour ago
Mysuru 2 1
Crime

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಗೆ ಚಟ್ಟ ಕಟ್ಟಿದ ಪತ್ನಿ!

Public TV
By Public TV
1 hour ago
Vijayanagar Lorry Accident
Bellary

ಲಾರಿ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ – ನಾಲ್ವರು ದುರ್ಮರಣ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?