ಮುಂಬೈ: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ತನ್ನ ಪತಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮುಂಬೈ ಮೂಲದ ಮಾಡೆಲ್ ವೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಿಂದೂ ಆಗಿ ಹುಟ್ಟಿ ಬೆಳೆದ ರಶ್ಮಿ ಆಸಿಫ್ ನನ್ನು 2005ರಲ್ಲಿ ಮದುವೆಯಾಗಿದ್ದರು. ಇವರಿಗೆ 2010ರಲ್ಲಿ ಒಂದು ಗಂಡು ಮಗುವೂ ಆಗಿತ್ತು. ಆದ್ರೆ ಆಸಿಫ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ದಿನನಿತ್ಯ ಪಿಡಿಸುತ್ತಿದ್ದ ಎಂದು ರಶ್ಮಿ ಆರೋಪಿಸಿದ್ದಾರೆ. ಇದೀಗ ಆಸಿಫ್ ಬೇರೊಂದು ಮದುವೆಯಾಗಿ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆಂದು ರಶ್ಮಿ ಹೇಳಿದ್ದಾರೆ.
Advertisement
Advertisement
ಶುಕ್ರವಾರದಂದು ರಶ್ಮಿ ಮನೆಗೆ ಹಿಂತಿರುಗುತ್ತಿದ್ದಂತೆ ಆಸಿಫ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿದ್ದ ಪಾತ್ರೆಗಳಿಂದ ರಶ್ಮಿ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾನೆ. ತಕ್ಷಣ ಮನೆ ಬಿಟ್ಟು ಹೋಗು ಎಂದು ಆಸಿಫ್ ರಶ್ಮಿಗೆ ಹೇಳಿದ್ದಾನೆಂದು ವರದಿಯಾಗಿದೆ.
Advertisement
ಈ ಘಟನೆಯಿಂದ ಬೇಸತ್ತ ರಶ್ಮಿ ಬಾಂದ್ರಾ ಪೊಲೀಸ್ ಠಾಣೆಗೆ ಹೋಗಿ ತನ್ನ ಗಂಡ ಆಸಿಫ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ ನಂತರ ರಶ್ಮಿಯನ್ನು ಆಸ್ಪತ್ರೆಗೆ ಸೇರಿಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಲವ್ ಜಿಹಾದ್ ಪ್ರಕರಣವಾ ಎಂಬ ಬಗ್ಗೆ ಬಾಂದ್ರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement
ರಶ್ಮಿಯ ಪ್ರಕಾರ ಆಸಿಫ್ ನ 2ನೇ ಪತ್ನಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ.